ಎಂಟು ತಿಂಗಳ ಗರ್ಭಿಣಿಯಾಗಿದ್ದ ಅವರು ಫ್ಲೋರಿಡಾದ ಆರೇಂಜ್ ಕೌಂಟಿಯ ಮನೆಯಲ್ಲಿ ಒಬ್ಬರೇ ಇದ್ದರು. ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಕುಸಿದು ಬಿದ್ದಿದ್ದರು. ಆ ಸಮಯದಲ್ಲಿ ಅವರು ಉಸಿರಾಟದ ತೊಂದರೆ (ಎಕ್ಲಾಂಪ್ಸಿಯಾ- ಹೆರಿಗೆ ವೇಳೆ ಕೋಮಾಕ್ಕೆ ಜಾರುವುದು) ಅನುಭವಿಸಿರಬಹುದು. ಇದರಿಂದ ಅಧಿಕ ರಕ್ತದೊತ್ತಡ ಉಂಟಾಗಿ ಪ್ರಾಣ ಬಿಟ್ಟಿರುವುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಟೊರಿ ನಿಧನಕ್ಕೆ ಅವರ ಕುಟುಂಬದರವು, ಅಮೆರಿಕದ ಖ್ಯಾತ ಓಟಗಾರ ಜಸ್ಟಿನ್ ಗ್ಯಾಟ್ಲಿನ್ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ. ಟೊರಿ ಒಬ್ಬ ಎದುರಾಳಿಗಳಿಗೆ ಉಗ್ರ ಪ್ರತಿಸ್ಪರ್ಧಿಯಾಗಿರುತ್ತಿದ್ದ ಕ್ರೀಡಾಪಟು ಎಂದು ಗ್ಯಾಟ್ಲಿನ್ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.