ADVERTISEMENT

test oct16

sub

ಶಿವಕುಮಾರ್ ಎಚ್ ಎಂ
Published 16 ಅಕ್ಟೋಬರ್ 2024, 6:01 IST
Last Updated 16 ಅಕ್ಟೋಬರ್ 2024, 6:01 IST

ಕೆನಡಾ ಹೈಕಮಿಷನರ್‌ಗೆ ಸಮನ್ಸ್

ಭಾರತದ ಹೈಕಮಿಷನರ್‌ ಮತ್ತು ಇತರ ರಾಜತಾಂತ್ರಿಕ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸುವ ಕೆನಡಾದ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಭಾರತ, ನವದೆಹಲಿಯಲ್ಲಿರುವ ಕೆನಡಾ ಡೆಪ್ಯುಟಿ ಹೈಕಮಿಷನರ್ ಸ್ಟೀವರ್ಟ್‌ ವೀಲರ್‌ ಅವರನ್ನು ಕರೆಸಿ ವಿವರಣೆ ಕೇಳಿದೆ. ಆದರೆ, ‘ಭಾರತ ಕೇಳಿದ ಎಲ್ಲ ಪುರಾವೆಗಳನ್ನು ಒದಗಿಸಲಾಗಿದೆ’ ಎಂದು ಅವರು ಹೇಳಿದ್ದಾರೆ. ‘ನಿಜ್ಜರ್‌ ಹತ್ಯೆ ಪ್ರಕರಣದಲ್ಲಿ ಭಾರತದ ಏಜೆಂಟರ ಪಾತ್ರ ಇರುವುದನ್ನು ಸಾಬೀತುಪಡಿಸುವ ನಂಬಲರ್ಹ ಪುರಾವೆಗಳನ್ನು ಒದಗಿಸಲಾಗಿದೆ’ ಎಂದು ಅವರು ಸೋಮವಾರ ತಿಳಿಸಿದರು.

ತಲಾ 6 ರಾಜತಾಂತ್ರಿಕರ ಗಡೀಪಾರು

ಭಾರತದ ಆರು ರಾಜತಾಂತ್ರಿಕ ಅಧಿಕಾರಿಗಳನ್ನು ಕೆನಡಾ ಸರ್ಕಾರ ಸೋಮವಾರ ಗಡೀಪಾರು ಮಾಡಿದೆ. ಇದಕ್ಕೆ ಪ್ರತಿಯಾಗಿ ಭಾರತ ಕೂಡಾ, ಕೆನಡಾದ ಆರು ರಾಜತಾಂತ್ರಿಕ ಅಧಿಕಾರಿಗಳಿಗೆ ದೇಶ ತೊರೆಯುವಂತೆ ಸೂಚಿಸಿದೆ. ‘ಅಕ್ಟೋಬರ್‌ 19ರ ಒಳಗಾಗಿ ದೇಶ ತೊರೆಯುವಂತೆ ಕೆನಡಾದ ಆರು ಮಂದಿ ರಾಜತಾಂತ್ರಿಕ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ

ADVERTISEMENT

‘ಹಾಸ್ಯಾಸ್ಪದ ಆರೋಪ’

36 ವರ್ಷಗಳಷ್ಟು ಸೇವಾ ಅನುಭವ ಹೊಂದಿರುವ ಸಂಜಯ್ ಕುಮಾರ್ ವರ್ಮಾ ಅವರು ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ.

‘ಅವರು ಜಪಾನ್ ಮತ್ತು ಸುಡಾನ್‌ನಲ್ಲಿ ರಾಯಭಾರಿಯಾಗಿ ಕೆಲಸ ಮಾಡಿದ್ದಾರೆ. ಇಟಲಿ, ಟರ್ಕಿ, ವಿಯೆಟ್ನಾಂ ಮತ್ತು ಚೀನಾದಲ್ಲೂ ಕೆಲಸ ಮಾಡಿದ್ದಾರೆ. ಕೆನಡಾ ಸರ್ಕಾರವು ಅವರ ಮೇಲೆ ಮಾಡಿರುವ ಆರೋಪ ಹಾಸ್ಯಾಸ್ಪದವಾಗಿದ್ದು, ಅದನ್ನು ಕಡೆಗಣಿಸಲಾಗುವುದು’ ಎಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.