test hms a15 ಅಂದು ಸಂಜೆ ಹುಲ್ಲಂಬಿಯ ರಾಜೇಶ ಸ್ವಾಮೀಜಿ ಹಾಗೂ ದೆ ಎಂದು ಜಾತ್ರಾ.
sub
ಶಿವಕುಮಾರ್ ಎಚ್ ಎಂ Published 15 ಏಪ್ರಿಲ್ 2024, 7:11 IST Last Updated 15 ಏಪ್ರಿಲ್ 2024, 7:11 IST ಅಳ್ನಾವರ: ಇಲ್ಲಿನ ಸರ್ಕಾರಿ ಮಾದರಿ ಕನ್ನಡ ಕೇಂದ್ರ ಶಾಲೆ - ನಂ-1 ಆಯೋಜಿಸಿದ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲೆಗಳ ವಾರ್ಷಿಕ ಕ್ರೀಡಾಕೂಟ ಎಪಿಎಂಸಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಸೋಮವಾರ ತುಂತುರು ಮಳೆಯ ಸಿಂಚನದ ಮಧ್ಯೆ ಯಶಸ್ವಿಯಾಗಿ ನಡೆಯಿತು. ಸ್ಥಳಿಯ ಸೇಂಟ್ ತೆರೇಸಾ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಸಮಗ್ರ ವೀರಾಗ್ರಹಣಿ ಪ್ರಶಸ್ತಿ ಬಾಚಿಕೊಂಡಿತು. ವ್ಯಯಕ್ತಿಕ ಹಾಗೂ ಗುಂಪು ಆಟಗಳು ನಡೆದವು. ಸಂಜೆ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು. ಬೆಳಿಗ್ಗೆ ನಡೆದ ಕ್ರೀಡಾಕೂಟ ಉದ್ಘಾಟನೆ ಕಾರ್ಯಕ್ರಮದಲ್ಲಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಎಂ.ಡಿ. ಹೊಸಮನಿ ಕ್ರೀಡಾಜ್ಯೋತಿ ಸ್ವೀಕರಿಸಿ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಮಾನಸಿಕ , ಬೌದ್ದಿಕ ಸದೃಡತೆಗೆ ಕ್ರೀಡೆಯಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು. ಕ್ರೀಡೆ ಯಿಂದ ಉತ್ತಮ ಭವಿಷ್ಯ ಕಟ್ಟಿಕೊಳ್ಳಬೇಕು ಎಂದರು. ಶಿಕ್ಷಕಿ ಮಂಜುಳಾ ಅರ್ಕಾಚಾರಿ ಮಾತನಾಡಿ, ಕ್ರೀಡೆಯಿಂದ ವಿದ್ಯಾರ್ಥಿಗಳ ಸರ್ವೋತೋಮುಖ ಬೆಳವಣಿಗೆ ಹೊಂದಲು ಸಾಧ್ಯ. ದೈಹಿಕ ಆರೋಗ್ಯ, ಮಾನಸಿಕ ಬೆಳವಣಿಗೆ ಹಾಗೂ ಬೌದ್ದಿಕ ಬಲವರ್ಧನೆಗೆ ಕ್ರೀಡೆ ಸಹಕಾರಿಯಾಗಿದೆ ಎಂದರು. ಕ್ರೀಡಾ ತರಬೇತುದಾರ ಕೆ.ಎಸ್. ಹಿರೇಮಠ ಕ್ರೀಡಾಪಟುಗಳಿಗೆ ಪ್ರಮಾಣ ವಚನ ಬೋದಿಸಿದರು. ಕ್ರೀಡಾ ನಿಯಮಗಳಿಗೆ ಹಾಗೂ ನಿರ್ಣಯಗಳಿಗೆ ಬದ್ದನಾಗಿರುತ್ತೇವೆ ಹಾಗೂ ಆಟದ ಘನತೆ, ಗೌರವಕ್ಕೆ ಚ್ಯುತಿ ಬಾರದಂತೆ ಕ್ರೀಡೆಯಲ್ಲಿ ಭಾಗವಹಿಸುತ್ತವೆ ಎಂದು ಒಲಂಪಿಕ್ ಧ್ವಜದಡಿ ಪ್ರಮಾಣ ವಚನ ಸ್ವೀಕರಿಸಲಾಯಿತು ಎಸ್