ನವದೆಹಲಿ: ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ಕಮಲ ಮತ್ತೆ ಅರಳಿದೆ. ನಾಗಾಲ್ಯಾಂಡ್‌ನಲ್ಲಿ ಎನ್‌ಡಿಪಿಪಿ ಹಾಗೂ ಬಿಜೆಪಿ ಮೈತ್ರಿಕೂಟಕ್ಕೆ ಮತದಾರರು ಮತ್ತೊಮ್ಮೆ ಮಣೆ ಹಾಕಿದ್ದಾರೆ. ಮೇಘಾಲಯದಲ್ಲಿ ಅತಂತ್ರ ಫಲಿತಾಂಶ ನಿರ್ಮಾಣವಾಗಿದ್ದು, ಎನ್‌ಪಿಪಿ ನೇತೃತ್ವದಲ್ಲಿ ಮತ್ತೊಮ್ಮೆ ‘ಕಿಚಡಿ’ ಸರ್ಕಾರ ರಚನೆಯಾಗುವ ಸಾಧ್ಯತೆ ದಟ್ಟವಾಗಿದೆ.
‘ಭಾರತ ಒಗ್ಗೂಡಿಸಿ ಯಾತ್ರೆ’ಯ ಯಶಸ್ಸಿನಲ್ಲಿ ತೇಲುತ್ತಿದ್ದ ಕಾಂಗ್ರೆಸ್ ಮೂರು ರಾಜ್ಯಗಳಲ್ಲೂ ಪ್ರಪಾತಕ್ಕೆ ಬಿದ್ದಿದೆ. ಮತ್ತೆರಡು ರಾಜ್ಯಗಳಲ್ಲಿ ನೆಲೆ ವಿಸ್ತರಿಸುವ ತೃಣಮೂಲ ಕಾಂಗ್ರೆಸ್ ಕೂಡ ಮುಖಭಂಗ ಅನುಭವಿಸಿದೆ.
ಪ್ರಧಾನಿ ನರೇಂದ್ರ ಮೋದಿ ನಾಮಬಲ ನೆಚ್ಚಿಕೊಂಡು ಈಶಾನ್ಯ ರಾಜ್ಯಗಳಲ್ಲಿ ಅಭಿವೃದ್ಧಿ ಹಾಗೂ ಶಾಂತಿ ಸುವ್ಯವಸ್ಥೆಯ ಮಂತ್ರ ಪಠಿಸಿದ ಕೇಸರಿ ಪಾಳಯವು ಎರಡು ರಾಜ್ಯಗಳನ್ನು ತನ್ನ ತೆಕ್ಕೆಯಲ್ಲಿಯೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮೇಘಾಲಯದಲ್ಲಿ ಕಿರಿಯ ಪಾಲುದಾರನಾಗಿ ಸರ್ಕಾರದ ಭಾಗವಾಗಲು ಹೆಜ್ಜೆ ಇಟ್ಟಿದೆ. ಮೋದಿ ಅವರು ತಿಂಗಳಿಗೊಮ್ಮೆ ಈ ರಾಜ್ಯಗಳಿಗೆ ಭೇಟಿ ನೀಡಿ ಕಣ ಸಜ್ಜುಮಾಡಿದ್ದು ಸಹ ಕೇಸರಿ ಪಾಳಯದ ನೆರವಿಗೆ ಬಂದಿದೆ. ಸಣ್ಣ ರಾಜ್ಯಗಳ ಚುನಾವಣೆಗಳಲ್ಲೂ ದೊಡ್ಡ ಮಟ್ಟದ ಕೆಚ್ಚು ತೋರಿದ ಪಕ್ಷವು ಭರಪೂರ ಲಾಭ ಪಡೆದಿದೆ. ಈ ಚುನಾವಣೆಯ ಫಲಿತಾಂಶ ಏಪ್ರಿಲ್– ಮೇ ತಿಂಗಳಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಬಿಜೆಪಿಗೆ ಇನ್ನಷ್ಟು ಹುಮ್ಮಸ್ಸು ನೀಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.