ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿರುವುದು ಸರಿಯಷ್ಟೆ. ಕೋವಿಡ್ ಸಮಯದಲ್ಲಿ ಭೌತಿಕ ತರಗತಿಗಳು ನಡೆಯದಿರುವುದರಿಂದ ಆ ಸಮಯದಲ್ಲಿ ವಿತರಣೆ ಮಾಡಬೇಕಿದ್ದ ಬಿಸಿಯೂಟದ ಬದಲಾಗಿ ಅದರ ಪರಿವರ್ತನಾ ವೆಚ್ಚವನ್ನು ಮಕ್ಕಳ ಬ್ಯಾಂಕ್ ಖಾತೆಗೆ ಸಂದಾಯ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶದ ಬಹುತೇಕ ಎಲ್ಲ ಮಕ್ಕಳು ಬ್ಯಾಂಕ್ ಖಾತೆಯನ್ನೂ ಹೊಂದಿದ್ದಾರೆ.
ಆದರೆ, ಹೆಚ್ಚಿನ ಮಕ್ಕಳ ಬ್ಯಾಂಕ್ ಖಾತೆಯಲ್ಲಿರುವ ಹೆಸರಿಗೂ ಇಲಾಖೆಯ ತಂತ್ರಾಂಶದಲ್ಲಿರುವ ಹೆಸರಿಗೂ ತಾಳೆಯಾಗುತ್ತಿಲ್ಲ. ಈ ಕಾರಣದಿಂದ ಬಹುತೇಕ ಫಲಾನುಭವಿ ಮಕ್ಕಳು ಈ ಪರಿವರ್ತನಾ ವೆಚ್ಚವನ್ನು ಪಡೆಯುವುದರಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೆ ಈ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸುವಂತೆ ಶಿಕ್ಷಣ ಇಲಾಖೆಯಿಂದ ಶಾಲಾ ಮುಖ್ಯೋಪಾಧ್ಯಾಯರಿಗೆ ಒತ್ತಡವೂ ಇರುವುದರಿಂದ ಹಲವು ಮುಖ್ಯೋಪಾಧ್ಯಾಯರಿಗೆ ಇದು ತಲೆನೋವಾಗಿ ಪರಿಣಮಿಸಿದೆ. ಆದ್ದರಿಂದ ಇಲಾಖೆಯು ಬಿಸಿಯೂಟದ ಪರಿವರ್ತನಾ ವೆಚ್ಚವನ್ನು ಮಕ್ಕಳಿಗೆ ವಿತರಿಸುವ ಪದ್ಧತಿಯನ್ನು ಬದಲಿಸಿ ಸೂಕ್ತ ಮಾರ್ಗೋಪಾಯ ಹುಡುಕಬೇಕಿದೆ. ಇದರಿಂದ ಆಗುತ್ತಿರುವ ಒತ್ತಡವನ್ನು ತಪ್ಪಿಸುವುದರ ಜೊತೆಗೆ ಎಲ್ಲ ಮಕ್ಕಳಿಗೂ ಸುಗಮವಾಗಿ ಹಣ ಸಂದಾಯವಾಗುವಂತೆ ಕ್ರಮ ಕೈಗೊಳ್ಳಬೇಕಿದೆ.
ಸೋಮಲಿಂಗಪ್ಪ ಬೆಣ್ಣಿ ಗುಳದಳ್ಳಿ, ಕೊಪ್ಪಳ
ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿರುವುದು ಸರಿಯಷ್ಟೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.