ಕಿಶೋರಿಯರಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್ ವಿತರಿಸುವ ಯೋಜನೆ ಸ್ಥಗಿತಗೊಂಡಿರುವ ಬಗ್ಗೆ ದೀಪಾ ಹಿರೇಗುತ್ತಿ ಅವರು ತಿಳಿಸಿಕೊಟ್ಟಿರುವುದು (ಸಂಗತ, ಜ. 19) ಅಭಿನಂದನೀಯ. ಆದರೆ ಈಗೀಗ ಹೆಚ್ಚುತ್ತಿರುವ ಮಾಲಿನ್ಯಕ್ಕೆ ಸಾನಿಟರಿ ಪ್ಯಾಡ್ ಕೂಡ ಒಂದು ಕಾರಣ ಆಗಿದೆ. ಆದ್ದರಿಂದ ನಮ್ಮ ಹೆಣ್ಣು ಮಕ್ಕಳಿಗೆ ಪೀರಿಯಡ್ ಕಪ್‌ನ ಬಗ್ಗೆ ಮಾಹಿತಿ ಒದಗಿಸಿ, ಅವರು ಅದನ್ನು ಬಳಸುವಂತಾದರೆ, ಸ್ಯಾನಿಟರಿ ಪ್ಯಾಡ್‌ಗಳಿಂದ ಮುಕ್ತಿ ದೊರೆತಂತೆ ಆಗುತ್ತದೆ. ಕೇರಳದ ಕುಂಬಳಗಿ ಎಂಬಲ್ಲಿ ಇಡೀ ಗ್ರಾಮವೇ ಪೀರಿಯಡ್ ಪ್ಯಾಡ್‌ಮುಕ್ತ ಗ್ರಾಮವಾಗಿದೆ.
ಹಾಗಾಗಿ ಶಾಲೆಯಲ್ಲಿ ನಮ್ಮ ಹೆಣ್ಣು ಮಕ್ಕಳಿಗೂ ಈ ಕಪ್‌ಗಳನ್ನು ಉಚಿತವಾಗಿ ಕೊಟ್ಟು, ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಪ್ಯಾಡ್‌ನಿಂದ ನಮ್ಮ ಮಕ್ಕಳೂ ಮುಕ್ತರಾಗುವಂತೆ ಮಾಡಬೇಕಾಗಿದೆ.
ಯಶಸ್ವಿನಿ ಜೆ. ಶೆಟ್ಟಿ, ಚಿಕ್ಕಮಗಳೂರು
ಕಿಶೋರಿಯರಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್ ವಿತರಿಸುವ ಯೋಜನೆ ಸ್ಥಗಿತಗೊಂಡಿರುವ ಬಗ್ಗೆ ದೀಪಾ ಹಿರೇಗುತ್ತಿ ಅವರು ತಿಳಿಸಿಕೊಟ್ಟಿರುವುದು (ಸಂಗತ, ಜ. 19) ಅಭಿನಂದನೀಯ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.