ಆಹಾರ ಉತ್ಪಾದನೆ: ವಿದೇಶಿ ತಜ್ಞರ ಭವಿಷ್ಯ ಸುಳ್ಳು ಮಾಡಿದ ವಿಕ್ರಮ
ಷಿಲ್ಲಾಂಗ್, ಜ. 20– ಇಂದು ಮುಗಿಲು ಮುಟ್ಟಿದ ದೀರ್ಘ ಹರ್ಷೋದ್ಗಾರಗಳ ಮಧ್ಯೆ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರು ಮೇಘಾಲಯ ರಾಜ್ಯವನ್ನು ಉದ್ಘಾಟಿಸಿದರು.
ಹಿಂದೆ ಅಸ್ಸಾಮಿನ ಭಾಗವಾಗಿದ್ದ ಖಾಸಿ, ಜಯಂತಿಯ ಮತ್ತು ಗಾರೋ ಗುಡ್ಡಗಾಡು ಪ್ರದೇಶ ಸೇರಿ ಈಗ ಮೇಘಾಲಯ ರಾಜ್ಯವಾಗಿದೆ.
ಪೂರ್ಣ ಸ್ಥಾನಮಾನದ ಈ ರಾಜ್ಯವನ್ನು ಉದ್ಘಾಟಿಸಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಇಂದಿರಾ ಗಾಂಧಿಯವರು, ಹೊಸ ರಾಜ್ಯ ಈ ಪ್ರದೇಶದ ನಿವಾಸಿಗಳಿಗೆ ಐತಿಹಾಸಿಕ ಮಹತ್ವದ ಘಟನೆಯಂದು ನುಡಿದು ಇದು ಹೊಸ ಅವಕಾಶಗಳ ಬಾಗಿಲನ್ನು ತೆರೆದಿದೆಯೆಂದರು.
ಭಾರತದಲ್ಲಿ ಕ್ಷಾಮ ಉಂಟಾಗುವುದೆಂದು ಎರಡು ವರ್ಷಗಳ ಹಿಂದೆ ಬ್ರಿಟನ್ ಮತ್ತು ಅಮೆರಿಕದ ಕೆಲವು ತಜ್ಞರುಗಳು ನುಡಿದಿದ್ದ ಭವಿಷ್ಯಕ್ಕೆ ತದ್ವಿರುದ್ಧವಾಗಿ ಕಳೆದ ವರ್ಷ ಭಾರತ ಆಹಾರಧಾನ್ಯಗಳ ಬೆಳೆಯಲ್ಲಿ ವಿಕ್ರಮ ಸ್ಥಾಪಿಸಿತೆಂದು ಶ್ರೀಮತಿ ಗಾಂಧಿ ಹೇಳಿದರು.
ಆಹಾರ ಉತ್ಪಾದನೆ: ವಿದೇಶಿ ತಜ್ಞರ ಭವಿಷ್ಯ ಸುಳ್ಳು ಮಾಡಿದ ವಿಕ್ರಮ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.