ಪಕ್ಷದ ಒಂದು ಗುಂಪಿನ ಪ್ರತಿನಿಧಿ ತಿವಾರಿ ನಗರದ ಹೊಸ ಮೇಯರ್
ಬೆಂಗಳೂರು, ಜ.21 – ಮೇಯರ್ ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಬಾರದೆಂಬ ಪ್ರದೇಶ ಹೈಕಮಾಂಡಿನ ಆದೇಶವನ್ನು ಧಿಕ್ಕರಿಸಿದ ಕಾರ್ಪೋರೇಷನ್ ಕಾಂಗ್ರೆಸ್ ಪಕ್ಷದ ಒಂದು ಗುಂಪಿನ ಪ್ರತಿನಿಧಿ ಶ್ರೀ. ಎಂ.ವಿ. ತಿವಾರಿ ಅವರು ಇತರರ ಬೆಂಬಲದೊಡನೆ ಇಂದು ನಗರದ ನಗರದ ‘ಪ್ರಥಮ ಪ್ರಜೆ’ ಯಾಗಿ ಚುನಾಯಿತರಾದರು.
ಇದೇ ಗುಂಪಿಗೆ ಸೇರಿದ ಶ್ರೀ ಎನ್.ವೆಂಕಟರಾಮ್ ಅವರು ಉಪಮೇಯರ್ ಆಗಿ ಆಯ್ಕೆಯಾದರು.
ಸದಸ್ಯರೊಬ್ಬರು ತಮ್ಮ ಮತ ನೀಡಿಕೆಯನ್ನು ಬಹಿರಂಗಪಡಿಸಿದ ಸಂದರ್ಭದಲ್ಲಿ ಉಂಟಾದ ಬಿಸಿ ಪ್ರಕರಣವನ್ನು ಸುಧಾರಿಸಲು ಪೊಲೀಸರು ಸಭಾಭವನವನ್ನು ಪ್ರವೇಶಿಸಿದರು.
ಕಾರ್ಪೋರೇಷನ್ ಕಾಂಗ್ರೆಸ್ ಪಕ್ಷದ ನಾಯಕರಾದ ಶ್ರೀ. ಎಂ.ವಿ. ತಿವಾರಿ ಅವರು 37 ಮತಗಳನ್ನೂ ಕೆಲ ವಿರೋಧ ಪಕ್ಷಗಳ ಪ್ರತಿಸ್ಪರ್ಧಿ ಶ್ರೀ ವರದರಾಜ್ ಅವರು 18 ಮತಗಳನ್ನು ಗಳಿಸಿದರು.
ವರದಕ್ಷಿಣೆ ಸ್ವೀಕರರಿಸುವವರು ‘ನಪುಂಸಕರು’
ಬೆಂಗಳೂರು, ಜ.21 – ವಿವಾಹದ ಸಮಯದಲ್ಲಿ ವರದಕ್ಷಿಣೆಯನ್ನು ಸ್ವೀಕರಿಸುವ ವರಗಳು ಉಡುಪಿಯ ಅದಮಾರು ಮಠದ ಶ್ರೀ ವಿಭುದೇಶ ತೀರ್ಥ ಸ್ವಾಮಿಗಳ ಮಾತಿನಲ್ಲಿ ಹೇಳುವುದಾದರೆ ‘ನಪುಂಸಕರು’.
ವರದಕ್ಷಿಣೆ ಸ್ವೀಕಾರ ಪಾಪವೆಂದೂ ಅವರು ಅಭಿಪ್ರಾಯ. ‘ವೈವಾಹಿಕ ಸಂಬಂಧ ಪವಿತ್ರವಾದುದು. ವಿವಾಹದಲ್ಲಿ ಹಣವಾಗಲೀ, ಆಡಂಬರವಾಗಲೀ ಅನಗತ್ಯ’ ಎಂದು ಶ್ರೀಗಳ ಸ್ಪಷ್ಟ ಅಭಿಮತ.
ಪಕ್ಷದ ಒಂದು ಗುಂಪಿನ ಪ್ರತಿನಿಧಿ ತಿವಾರಿ ನಗರದ ಹೊಸ ಮೇಯರ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.