ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಗುರುವಾರ, 20–1–1972

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 15:05 IST
Last Updated 19 ಜನವರಿ 2022, 15:05 IST
   

ಒತ್ತಾಯ ಹೇರುವ ವಿದೇಶಿ ನೆರವಿಗೆ ತಿರಸ್ಕಾರ: ಇಂದಿರಾ

ಪಾಟ್ನಾ, ಜ. 19– ಹೊರದೇಶಗಳು ತಾವು ನೀಡುವ ನೆರವನ್ನು ಒತ್ತಡದ ಸಾಧನವಾಗಿ ಬಳಸುವುದಿಲ್ಲವೆಂದು ಮನವರಿಕೆಯಾದ ಹೊರತು ಅದನ್ನು ಭಾರತ ಸ್ವೀಕರಿಸದೆಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಹೇಳಿದರು.

ಇಲ್ಲಿಗೆ 12 ಕಿ.ಮೀ. ದೂರದಲ್ಲಿರುವ ಬೆಹತಾದಲ್ಲಿ ಭಾರಿ ಬಹಿರಂಗ ಸಭೆಯೊಂದನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿ, ಈಚಿನ ಯುದ್ಧವು ಸ್ವಾವಲಂಬಿಯಾಗಬೇಕೆಂಬ ರಾಷ್ಟ್ರದ ನಿರ್ಧಾರವನ್ನು ಮತ್ತಷ್ಟು ಬಲಪಡಿಸಿದೆಯೆಂದರು.

ADVERTISEMENT

‘ರಾಷ್ಟ್ರ ನಿರ್ಮಾಣದ ಬೃಹತ್‌ ಕಾರ್ಯ ನಿರ್ವಹಿಸುವುದರಲ್ಲಿ ನಾವು ಇತರರ ನೆರವು ಕೋರುವುದಿಲ್ಲವೆಂದು ಇದರ ಅರ್ಥವಲ್ಲ. ನಿರ್ಬಂಧನೆಗಳಿರುವ ಯಾವುದೇ ವಿದೇಶಿ ನೆರವನ್ನಾದರೂ ನಾವು ದೃಢವಾಗಿ ತಿರಸ್ಕರಿಸುತ್ತೇವೆ’ ಎಂದರವರು.

ಸಾರಾಂಶ

ಒತ್ತಾಯ ಹೇರುವ ವಿದೇಶಿ ನೆರವಿಗೆ ತಿರಸ್ಕಾರ: ಇಂದಿರಾ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.