ಮದ್ರಾಸ್ ಭೂ ಸುಧಾರಣೆ ಕಾನೂನು ಕ್ರಮಬದ್ಧ: ಸುಪ್ರೀಂ ಕೋರ್ಟ್ ತೀರ್ಪು
ನವದೆಹಲಿ, ಅ. 11– ಒಂದು ಸಂಸಾರ ಹೊಂದಿರಬಹುದಾದ ಜಮೀನಿನ ಪರಮಾ ವಧಿ ಮಿತಿಯನ್ನು 30 ಸ್ಟ್ಯಾಂಡರ್ಡ್ ಎಕರೆ ಗಳಿಗೆ ಒಳಪಡಿಸುವ 1961ರ ಮದ್ರಾಸ್ ಭೂಸುಧಾರಣೆ ಕಾನೂನು ಕ್ರಮಪ್ರಾಪ್ತ
ವೆಂದು ಶ್ರೇಷ್ಠ ನ್ಯಾಯಾಧೀಶ ಶ್ರೀ ಎಸ್.ಎಂ.ಸಕ್ರಿ ಅವರು ಅಧ್ಯಕ್ಷರಾಗಿದ್ದ ಸುಪ್ರೀಂ ಕೋರ್ಟಿನ ಏಳು ಜನ ನ್ಯಾಯಾಧೀಶರ ವಿಶೇಷ ನ್ಯಾಯಪೀಠವು ಇಂದು ತೀರ್ಪು ನೀಡಿತು.
ಆ ಕಾನೂನು ಕ್ರಮಪ್ರಾಪ್ತವೆಂದು ಮದರಾಸು ಹೈಕೋರ್ಟ್ ನೀಡಿದ್ದ ತೀರ್ಪಿನ ವಿರುದ್ಧ ಜಗನ್ನಾಥ್ ಎಂಬುವವರೂ ಮತ್ತಿ ತರ ಕೆಲವರೂ ಸಲ್ಲಿಸಿದ್ದ ಮನವಿಗಳನ್ನು ನ್ಯಾಯಾಲಯ ವಜಾ ಮಾಡಿತು.
1964ರಲ್ಲಿ ಈ ಕಾನೂನನ್ನು ಸುಪ್ರೀಂ ಕೋರ್ಟ್, ಅದು ಸಂವಿಧಾನ ನೀಡುವ ಆಸ್ತಿ ಹಕ್ಕನ್ನು ಉಲ್ಲಂಘಿಸುವುದೆಂದು ಹೇಳಿ ರದ್ದು ಮಾಡಿತ್ತು.
ಗಾಂಧಿ ನಿವಾಸವನ್ನೂ ಬಿಡದ ಸಾರಾಯಿ
ಮಧುರೆ, ಅ. 11– ಧೋತ್ರ, ಅಂಗಿ ಹಾಕುವು ದನ್ನು ತ್ಯಜಿಸಿ, ಅಂದಿನ ಭಾರತದ ಬಡತನ ಪ್ರತಿಬಿಂಬಿಸಲು ತುಂಡು ಪಂಚೆಯನ್ನು ಮಾತ್ರವೇ ಇನ್ನು ಮುಂದೆ ಧರಿಸಬೇಕೆಂಬ ಐತಿಹಾಸಿಕ ನಿರ್ಧಾರವನ್ನು 1921ರಲ್ಲಿ ರಾಷ್ಟ್ರಪಿತ ಗಾಂಧೀಜಿ ಅವರು ತೆಗೆದುಕೊಂಡ ಇಲ್ಲಿನ ಕಟ್ಟಡದಲ್ಲಿ ಈಗ ಸಾರಾಯಿ ಅಂಗಡಿ ತೆರೆಯಲಾಗಿದೆ ಎಂಬ ದೂರನ್ನು ತನಿಖೆಗೆ ಒಪ್ಪಿಸಿರುವುದಾಗಿ ಮಧುರೆಯ ಜಿಲ್ಲಾ ಕಲೆಕ್ಟರರು ಇಂದು ತಿಳಿಸಿದರು.
ಗಾಂಧೀಜಿ ಅವರು ನಿರ್ಧಾರ ತೆಗೆದುಕೊಂಡ ಮನೆಯೇ ಅದಾಗಿದ್ದರೆ, ಅಂಗಡಿಯನ್ನು ಬೇರೆಡೆಗೆ ಬದಲಾಯಿಸು
ವುದಾಗಿ ಅವರು ತಿಳಿಸಿದರು.
ಒಂದು ಸಂಸಾರ ಹೊಂದಿರಬಹುದಾದ ಜಮೀನಿನ ಪರಮಾ ವಧಿ ಮಿತಿಯನ್ನು 30 ಸ್ಟ್ಯಾಂಡರ್ಡ್ ಎಕರೆ ಗಳಿಗೆ ಒಳಪಡಿಸುವ 1961ರ ಮದ್ರಾಸ್ ಭೂಸುಧಾರಣೆ ಕಾನೂನು ಕ್ರಮಪ್ರಾಪ್ತವೆಂದು ಶ್ರೇಷ್ಠ ನ್ಯಾಯಾಧೀಶ ಶ್ರೀ ಎಸ್.ಎಂ.ಸಕ್ರಿ ಅವರು ಅಧ್ಯಕ್ಷರಾಗಿದ್ದ ಸುಪ್ರೀಂ ಕೋರ್ಟಿನ ಏಳು ಜನ ನ್ಯಾಯಾಧೀಶರ ವಿಶೇಷ ನ್ಯಾಯಪೀಠವು ಇಂದು ತೀರ್ಪು ನೀಡಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.