ಕೇರಳದ ಕಾಲೇಜು ಶಿಕ್ಷಕರೂ ಸೇರಿದಂತೆ ಖೋಟಾ ಡಾಲರ್ ತಂಡದ ಬಂಧನ
ಬೆಂಗಳೂರು, ಅ. 15– ನಕಲಿ ಅಮೆರಿಕನ್ ಡಾಲರ್ ಕರೆನ್ಸಿ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ತಂದರೆಂಬ ಆಪಾದನೆ ಮೇಲೆ ಗಣ್ಯ ನಾಗರಿಕರು, ವರ್ತಕರು ಇರುವ ಭಾರೀ ತಂಡವೊಂದನ್ನು ರಾಜ್ಯದ ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮತ್ತು ಮೈಸೂರು ರಾಜ್ಯಗಳಿಗೆ ಸೇರಿದ 11 ಮಂದಿ ಇರುವ ತಂಡದಿಂದ 20 ಡಾಲರ್ ಮೌಲ್ಯದ ಒಟ್ಟು 75 ಕರೆನ್ಸಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೊಯಮತ್ತೂರಿನ ಟೆಕ್ಸ್‌ಟೈಲ್ ಉದ್ದಿಮೆದಾರ ರಾಜೇಂದ್ರ ಅವರು ಈ ತಂಡದ ನಾಯಕರೆಂದು ಹೇಳಲಾಗಿದೆ.
ಕಲ್ಲಿಕೋಟೆಯ ಸೈನ್ಸ್ ಮತ್ತು ಆರ್ಟ್ಸ್ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಕೆ. ಜೋಸೆಫ್, ಕೊಟ್ಟಾಯಂ ಜಿಲ್ಲೆಯ ಪಲಾಯಿಯ ಲೆಕ್ಚರರ್ ಜಾರ್ಜ್ ಸಿ. ಮುತಾಲಿ, ರಬ್ಬರ್ ತೋಟಗಳ ಒಡೆಯ ಕೆ. ರವೀಂದ್ರನ್ ಮತ್ತು ಕಂಟ್ರಾಕ್ಟರ್ ಕೆ. ಸುಗಥನ್ ಬಂಧಿತರು.
ಗಾಂಧಿವಾದ ಪಾಲನೆಯಲ್ಲಿ ಚೀನಾದ್ದೇ ಮೇಲುಗೈ
ಅಹಮದಾಬಾದ್, ಅ. 15– ಗಾಂಧೀಜಿಯವರು ಭಾರತದ ರಾಷ್ಟ್ರಪಿತನಾದರೂ ಅವರ ವಿಚಾರಧಾರೆಗಳನ್ನು ಭಾರತಕ್ಕಿಂತ ಚೀನಾದಲ್ಲಿಯೇ ಹೆಚ್ಚಾಗಿ ಅನುಷ್ಠಾನಕ್ಕೆ ತರಲಾಗಿದೆ ಎಂದು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಲಿಯ ಮಾಜಿ ಡೈರೆಕ್ಟರ್ ಡಾ. ಆತ್ಮಾರಾಂ ತಿಳಿಸಿದ್ದಾರೆ.
ಕೇರಳದ ಕಾಲೇಜು ಶಿಕ್ಷಕರೂ ಸೇರಿದಂತೆ ಖೋಟಾ ಡಾಲರ್ ತಂಡದ ಬಂಧನ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.