ADVERTISEMENT

25 ವರ್ಷಗಳ ಹಿಂದೆ: ಸೋಮವಾರ 14.10.1996

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 19:30 IST
Last Updated 13 ಅಕ್ಟೋಬರ್ 2021, 19:30 IST
   

ಸಡಗರದ ಮೈಸೂರು ದಸರಾ ಆರಂಭ

ಮೈಸೂರು, ಅ. 13– ಕನ್ನಡ ನಾಡಿನ ಹೆಮ್ಮೆಯ ನವರಾತ್ರಿಯ ಹಬ್ಬಕ್ಕೆ ಫಾಲ್ಕೆ ಪ್ರಶಸ್ತಿ ವಿಜೇತ ನಟ ಡಾ.ರಾಜಕುಮಾರ್ ಅವರು ಇಂದಿಲ್ಲಿ ಚಾಲನೆ ನೀಡಿದರು.

ಚಾಮುಂಡಿ ಬೆಟ್ಟದ ಮೇಲೆ ಮೈಸೂರು ಮಲ್ಲಿಗೆಯಿಂದ ಅಲಂಕರಿಸಿದ್ದ ಚಾಮುಂಡೇಶ್ವರಿಗೆ, ಪತ್ನಿ ಸಮೇತರಾಗಿ ಪೂಜೆ ಸಲ್ಲಿಸಿದ ರಾಜಕುಮಾರ್ ಅವರು ತಮ್ಮ ಗಾಯನದ ಕಂಪನ್ನೂ ಪಸರಿಸಿ ನಾಡಹಬ್ಬದ ಕಹಳೆಯನ್ನು ಮೊಳಗಿಸಿದರು.

ADVERTISEMENT

ಮೋಡಗಳ ಮಧ್ಯೆ ಪ್ರಖರವಾಗಿ ಉರಿಯುತ್ತಿದ್ದ ಬೆಳಗಿನ ಸೂರ್ಯನ ಸಾಕ್ಷಿಯಲ್ಲಿ ಇಡೀ ಬೆಟ್ಟವೇ ಹೊಳೆಯುತ್ತಿದ್ದು, ಮೈಸೂರು ನಗರದಲ್ಲಿ ಇನ್ನು ಹತ್ತು ದಿನಗಳ ಕಾಲ ಸಾಂಸ್ಕೃತಿಕ ಹಬ್ಬವಾಗಿ, ಪರಂಪರೆಯ ವೈಭವವನ್ನು ಮೆರೆಸುವ ದಸರಾ ರಾಜ್ ದಂಪತಿಗಳ ಆಗಮನದಿಂದ ಸಹಜವಾಗಿಯೇ ಸಡಗರವನ್ನು ಪಡೆದುಕೊಂಡಿತ್ತು.

ಸರ್ಕಾರ ರಚನೆಗೆ ಬಿಜೆಪಿ ಸನ್ನಾಹ

ನವದೆಹಲಿ, ಅ. 13 (ಯುಎನ್ಐ, ಪಿಟಿಐ)– ಉತ್ತರಪ್ರದೇಶದ ಮುಖ್ಯಮಂತ್ರಿ ಆಯ್ಕೆ ಸಂಬಂಧ ಕೇಂದ್ರದ ಸಂಯುಕ್ತರಂಗ ಸರ್ಕಾರಕ್ಕೆ ಯಾವುದೇ ಬೆದರಿಕೆ ಒಡ್ಡಲು ಇಂದು ಇಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಿರಾಕರಿಸಿದೆ. ಈ ನಡುವೆ, ಉತ್ತರಪ್ರದೇಶದಲ್ಲಿ ಸರ್ಕಾರ ರಚಿಸಲು ತಮ್ಮನ್ನು ಆಹ್ವಾನಿಸುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ಭಾರತೀಯ ಜನತಾ ಪಕ್ಷ ನಿರ್ಧರಿಸಿದೆ.

ಸಾರಾಂಶ

ಕನ್ನಡ ನಾಡಿನ ಹೆಮ್ಮೆಯ ನವರಾತ್ರಿಯ ಹಬ್ಬಕ್ಕೆ ಫಾಲ್ಕೆ ಪ್ರಶಸ್ತಿ ವಿಜೇತ ನಟ ಡಾ.ರಾಜಕುಮಾರ್ ಅವರು ಇಂದಿಲ್ಲಿ ಚಾಲನೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.