ಸರ್ಕಾರ ರಚನೆಗೆ ತೀವ್ರ ಪೈಪೋಟಿ
ನವದೆಹಲಿ, ಅ. 10– (ಪಿಟಿಐ, ಯುಎನ್‌ಐ) ಉತ್ತರಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶಗಳು ಬಹುತೇಕ ಪ್ರಕಟವಾಗಿದ್ದು, ಯಾವುದೇ ಪಕ್ಷ ಬಹುಮತ ಪಡೆದಿಲ್ಲ. ಅತಂತ್ರ ವಿಧಾನಸಭೆ ರೂಪುಗೊಂಡಿದ್ದು, ಸರ್ಕಾರ ರಚಿಸಲು ಬಿಜೆಪಿ, ಬಹುಜನ ಸಮಾಜ ಪಕ್ಷ ಹಾಗೂ ಸಂಯುಕ್ತ ರಂಗಗಳು ತೀವ್ರ ಪ್ರಯತ್ನಗಳನ್ನು ನಡೆಸಿವೆ.
ಬಿಜೆಪಿ ಹಾಗೂ ಸಮತಾ ಪಕ್ಷದ ಮೈತ್ರಿ ಕೂಟವು 411 ಸ್ಥಾನಗಳಲ್ಲಿ 170ನ್ನು ಗೆದ್ದುಕೊಂಡು ಮುನ್ನಡೆ ಸಾಧಿಸಿದ್ದರೂ, ಸ್ಪಷ್ಟ ಬಹುಮತ ಗಳಿಸಲು ವಿಫಲವಾಗಿದೆ. ಸಮಾಜವಾದಿ ಪಕ್ಷ ನೇತೃತ್ವದ ಸಂಯುಕ್ತ ರಂಗವು 128 ಸ್ಥಾನಗಳನ್ನು ಗೆದ್ದುಕೊಂಡಿದ್ದು ಎರಡನೇ ಸ್ಥಾನದಲ್ಲಿದೆ. ಬಹುಜನ ಸಮಾಜ ಪಕ್ಷ– ಕಾಂಗ್ರೆಸ್ ಮೈತ್ರಿಕೂಟವು 100 ಸ್ಥಾನಗಳನ್ನು ಗೆದ್ದುಕೊಂಡಿದೆ.
‘ಅಶ್ಲೀಲತೆಯ ಪ್ರದರ್ಶನವಲ್ಲ’
ಬೆಂಗಳೂರು, ಅ. 10– ನಗರದಲ್ಲಿ ಮುಂದಿನ ತಿಂಗಳ 23ರಂದು ನಡೆಯಲಿರುವ ವಿಶ್ವ ಸುಂದರಿ ಸ್ಪರ್ಧೆ ಕೆಲವರು ಭಾವಿಸಿರುವಂತೆ ನಗ್ನ ಅಥವಾ ಅಶ್ಲೀಲತೆಯ ಪ್ರದರ್ಶನವಲ್ಲ ಎಂದು ಇದನ್ನು ಇಲ್ಲಿ ಸಂಘಟಿಸುತ್ತಿರುವ ಅಮಿತಾಭ್ ಬಚ್ಚನ್ ಕಾರ್ಪೊರೇಷನ್ ಸಂಸ್ಥೆ ಮೊದಲ ಬಾರಿಗೆ ಸ್ಪಷ್ಟೀಕರಣ ನೀಡಿದೆ.
ಸರ್ಕಾರ ರಚನೆಗೆ ತೀವ್ರ ಪೈಪೋಟಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.