ಕೆಲವೊಮ್ಮೆ ನಮ್ಮ ಅನುಭವಕ್ಕೆ ವಿಚಿತ್ರ ಘಟನೆಗಳು ಬರುತ್ತವೆ. ಇಷ್ಟು ದಿನ ಎಲ್ಲವೂ ಚೆನ್ನಾಗಿತ್ತು, ಆದರೆ ಇದೀಗ ಯಾವುದೂ ಸರಿಯಿಲ್ಲ ಎಂದೆನಿಸುತ್ತದೆ. ಇದ್ದಕ್ಕಿದ್ದಂತೆ ಅಸಮಾಧಾನ ನಮ್ಮಲ್ಲಿ ಮನೆಮಾಡುತ್ತದೆ. ವ್ಯಕ್ತಿಯ ಸುತ್ತಲೂ ಒಂದಲ್ಲ ಒಂದು ತೊಂದರೆಗಳು ಸುತ್ತುವರಿಯಲು ಆರಂಭವಾಗುತ್ತದೆ. ವ್ಯಾಪಾರ, ವ್ಯವಹಾರದಲ್ಲಿ ಹಣದ, ನಷ್ಟ, ಕಷ್ಟಗಳು ಎದುರಾಗಲು ಪ್ರಾರಂಭವಾಗುತ್ತದೆ. ಕುಟುಂಬದ ಸದಸ್ಯರಲ್ಲಿ ಅನಾರೋಗ್ಯವು ಹೆಚ್ಚಾಗತೊಡಗುತ್ತದೆ. ಆದರೆ, ನಾವಿಲ್ಲಿ ತಿಳಿದುಕೊಳ್ಳಬೇಕಾದ ಪ್ರಮುಖ ವಿಚಾರವೆಂದರೆ, ಈ ಎಲ್ಲಾ ಅಶುಭ ಘಟನೆಗಳು ಸಂಭವಿಸುವ ಮುನ್ನ ಕೆಲವೊಂದು ಸೂಚನೆಗಳು ಕಾಣಿಸಿಕೊಳ್ಳುತ್ತವೆ. ಕೆಲವೊಮ್ಮೆ ನಾವು ಇದನ್ನು ನಿರ್ಲಕ್ಷಿಸುತ್ತೇವೆ. ಇನ್ನು ಮುಂದೆ ಅವುಗಳನ್ನು ನಿರ್ಲಕ್ಷಿಸದಿರಿ. ಯಾಕೆಂದರೆ ಅವುಗಳು ನಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಸಂಕಷ್ಟಗಳ ಮುನ್ಸೂಚನೆಯಾಗಿದೆ.
ಹಿಂದೂ ಧರ್ಮದಲ್ಲಿ ತುಳಸಿಯನ್ನು ಅತ್ಯಂತ ಪೂಜನೀಯವೆಂದು, ಪವಿತ್ರವೆಂದಯ ಮತ್ತು ಲಕ್ಷ್ಮಿ ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ತುಳಸಿ ಸಸ್ಯವನ್ನು ನಿಯಮಿತವಾಗಿ ಪೂಜಿಸುವ ಮನೆಗಳಲ್ಲಿ ಲಕ್ಷ್ಮಿ ದೇವಿಯ ಅನುಗ್ರಹದಿಂದ ಯಾವಾಗಲೂ ಸಂತೋಷ, ಸಮೃದ್ಧಿ ಮತ್ತು ಸಂಪತ್ತು ತುಂಬಿಕೊಂಡಿರುತ್ತದೆ. ಒಂದು ವೇಳೆ ನೀವು ತುಳಸಿ ಸಸ್ಯಕ್ಕೆ ನೀರನ್ನು ನೀಡಿದ್ದರೂ ಅದು ಪದೇ ಪದೇ ಒಣಗಿ ಹೋಗುತ್ತಿದ್ದರೆ ಅದನ್ನು ಅಶುಭ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಕೆಟ್ಟದ್ದರ ಸೂಚನೆಯಾಗಿದೆ. ತುಳಸಿ ಗಿಡ ಒಣಗುತ್ತಿದ್ದರೆ ಅದು ನಿಮ್ಮ ಅನಾರೋಗ್ಯ, ಸಂಪತ್ತು ಮತ್ತು ಗೌರವದ ಮೇಲೆ ಋಣಾತ್ಮಕ ಪ್ರಭಾವ ಬೀರುತ್ತದೆ.
ಹುಟ್ಟಿದ ದಿನಕ್ಕೆ ಮುಂಚಿತವಾಗಿ ಯಾರಿಗಾದರೂ ಜನ್ಮದಿನದ ಶುಭಾಶಯಗಳನ್ನು ಕೋರುವುದು ದುರಾದೃಷ್ಟವನ್ನು ಉಂಟುಮಾಡುತ್ತದೆ ಎಂದು ಅನೇಕರು ನಂಬುತ್ತಾರೆ. ನಾವು ಯಾವಾಗಲೂ ಹುಟ್ಟಿದ ದಿನದಂದು ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳಬೇಕು. ಹುಟ್ಟಿದ ದಿನಕ್ಕಿಂತಲೂ ಮೊದಲೇ ಶುಭಾಶಯಗಳನ್ನು ಹೇಳುವುದರಿಂದ ಅವರ ಆಯಸ್ಸು ಕಡಿಮೆಯಾಗುತ್ತದೆ ನಂಬಿಕೆಯಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.