ಪಾಟ್ನಾ (ಬಿಹಾರ): ಬಿಹಾರ ರಾಜ್ಯದ ಶೋಹರ್ ಎಂಬ ಪಟ್ಟಣದಲ್ಲಿ ತಂದೆಯ 2ನೇ ಮದುವೆಯನ್ನು ತಡೆಯಲು 10 ವರ್ಷದ ಮಗಳು ಪೊಲೀಸ್ ಠಾಣೆಯ ಮೆಟ್ಟಿಲೇರಿದ ಪ್ರಕರಣ ವರದಿಯಾಗಿದೆ..!
2ನೇ ಮದುವೆ ಆಗಲು ಹೊರಟಿದ್ದ ವ್ಯಕ್ತಿಗೆ ಈಗಾಗಲೇ ಮದುವೆಯಾಗಿದ್ದು, 5 ಮಕ್ಕಳಿದ್ದಾರೆ. ಈ ಪೈಕಿ 4 ಹೆಣ್ಣು ಮಕ್ಕಳು. ಮೊದಲನೇ ಮಗಳಿಗೆ ಈಗಾಗಲೇ 12 ವರ್ಷ ವಯಸ್ಸಾಗಿದೆ. 2 ವರ್ಷಗಳ ಹಿಂದೆ ಈತ ತನ್ನ ಮೊದಲ ಪತ್ನಿಯನ್ನು ಕಳೆದುಕೊಂಡಿದ್ದ. ಅನಾರೋಗ್ಯಕ್ಕೆ ತುತ್ತಾಗಿ ಈತನ ಪತ್ನಿ ಸಾವಿಗೀಡಾಗಿದ್ದರು. ಇದೀಗ 2ನೇ ಮದುವೆಯಾಗಲು ಸಜ್ಜಾಗಿದ್ದ ವ್ಯಕ್ತಿಗೆ ಆತನ ಮಕ್ಕಳೇ ಅಡ್ಡಿಯಾಗಿದ್ದಾರೆ.
ಬಿಹಾರ ರಾಜ್ಯದ ಶೋಹರ್ ಪಟ್ಟಣದ ದೇವಸ್ಥಾನವೊಂದರಲ್ಲಿ ಶನಿವಾರ ಸಂಜೆ ಈ ಮದುವೆ ಆಯೋಜನೆಯಾಗಿತ್ತು. 5 ಮಕ್ಕಳ ತಂದೆ ಮನೋಜ್ ಕುಮಾರ್ ರಾಜ್, ಅದೇ ಗ್ರಾಮದ ಮಹಿಳೆಯನ್ನು ವಿವಾಹವಾಗಲು ಸಜ್ಜಾಗಿದ್ದ. ಇದಕ್ಕಾಗಿ ದೇವಸ್ಥಾನದಲ್ಲಿ ಸಕಲ ಸಿದ್ದತೆಗಳೂ ಪೂರ್ಣಗೊಂಡಿದ್ದವು. ಆದ್ರೆ, ಈತನ ಮಗಳು ಚೋಟಿ ಕುಮಾರಿ ಗ್ರಾಮದ ಇನ್ನಿತರ ನೆರವಿನೊಂದಿಗೆ ಪೊಲೀಸ್ ಠಾಣೆಗೆ ಧಾವಿಸಿದಳು. ಈ ಮದುವೆಯನ್ನು ಕೂಡಲೇ ತಡೆಯಿರಿ ಎಂದು ಪೊಲೀಸರಿಗೆ ಒತ್ತಾಯ ಮಾಡಿದಳು.
ರಾಜಧಾನಿಯ ಜನರು ಪ್ರವಾಹದ ಸಂಕಷ್ಟಕ್ಕೆ ಸಿಲುಕಿದಾಗ ಪರಿಸ್ಥಿತಿ ವೀಕ್ಷಣೆ ಮಾಡಿ ಭರವಸೆ ನೀಡುವ ಜನಪ್ರತಿನಿಧಿಗಳು, ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳು ಬಳಿಕ ಅತ್ತ ತಿರುಗಿಯೂ ನೋಡುತ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.