ನಿರ್ಮಿಸಿ ರೆವಿನ್ಯೂ ಬಡಾವಣೆ ನಿರ್ಮಿಸಿ ಅಡಿಗೆ 12 ಸಾವಿರದಂತೆ ಮಾರಾಟ ಮಾಡುತ್ತಿದ್ದಾರೆ. ಹಾಗೂ ಗಗನಚುಂಬಿ ಜಂಟಿ ಸಹಯೋಗದ ಅಪಾರ್ಟ್ಮೆಂಟ್‌ಗಳು ತಲೆ ಎತ್ತಲಿವೆ. ಪ್ರಭಾವೀ ಬಂಡವಾಳಶಾಹಿಗಳು ಹಾಗೂ ರಾಜಕೀಯ ಪ್ರಭಾವದಿಂದ ಕಾನೂನಿನ ಕಣ್ಣಿಗೆ ಬಟ್ಟೆ ಕಟ್ಟಿ ಕತ್ತಲೆಯಲ್ಲೇ ಬಿಟ್ಟಿದ್ದಾರೆ. ಹಗರಣದಲ್ಲಿ ಸ್ಥಳೀಯ ಶಾಸಕರ ತಂದೆ ಮುನಿರೆಡ್ಡಿ ಸೇರಿದಂತೆ ಪ್ರಭಾವ ಶಾಲಿಗಳೇ ಇದ್ದಾರೆ ಎಂದು ಆರೋಪಿಸಿದರು.
ಇವಿಎಂ 'ಕಂಟ್ರೋಲ್ ಯೂನಿಟ್' ಮತ್ತು 'ಬ್ಯಾಲೆಟ್ ಯೂನಿಟ್' ಎಂಬ ಎರಡು ಭಾಗಗಳನ್ನು ಹೊಂದಿದೆ. ಇವುಗಳನ್ನು 5 ಮೀಟರ್ ಕೇಬಲ್ ಮೂಲಕ ಸಂಪರ್ಕಿಸಲಾಗುತ್ತದೆ. ಬ್ಯಾಲೆಟ್ ಯೂನಿಟ್‌ನಲ್ಲಿ ಮತಪತ್ರ ಇರುತ್ತದೆ. ಇಲ್ಲಿ ಮತದಾರ ತನ್ನ ಆಯ್ಕೆಯ ಅಭ್ಯರ್ಥಿಯ ಹೆಸರಿನ ಎದುರು ಇರುವ ಗುಂಡಿಯನ್ನು ಒತ್ತಬೇಕು. ಈ ಯಂತ್ರವನ್ನು ರಟ್ಟುಗಳ ಚೌಕಟ್ಟಿನಲ್ಲಿರಿಸಲಾಗಿರುತ್ತದೆ. ಕಂಟ್ರೋಲ್ ಯೂನಿಟ್ ಮತಗಟ್ಟೆ ಅಧಿಕಾರಿಯ ಬಳಿ ಇರುತ್ತದೆ. ನಿಯಂತ್ರಣ ಘಟಕವನ್ನು ಇವಿಎಂನ 'ಮಿದುಳು' ಎಂದು ಕರೆಯಲಾಗುತ್ತದೆ, ಏಕೆಂದರೆ ಮತದಾನ ಅಧಿಕಾರಿ ಅದರ ಮೇಲೆ 'ಬ್ಯಾಲೆಟ್' ಬಟನ್ ಒತ್ತಿದ ನಂತರವೇ ಬ್ಯಾಲೆಟ್ ಯೂನಿಟ್ ಅನ್ನು ಆನ್ ಮಾಡಲಾಗುತ್ತದೆ ಮತ್ತು ನಂತರ ಮತ ಚಲಾಯಿಸಲಾಗುತ್ತದೆ
ಧಾರವಾಡ: ಮನೆಯೊಂದರ ಮುಂದೆ ಬೆಳೆದಿದ್ದ ಗಿಡವನ್ನು ಕತ್ತರಿಸಿದ್ದಲ್ಲದೇ, ಅದು ಮತ್ತೆ ಬೆಳೆಯಲೇಬಾರದು ಎಂಬ ದುರುದ್ದೇಶದಿಂದ ಕ್ರೂರಿಗಳು ಅದಕ್ಕೆ ಆ್ಯಸಿಡ್ ಹಾಕಿರುವ ಘಟನೆಯೊಂದು ಧಾರವಾಡದ ವಿಕಾಸ ನಗರದಲ್ಲಿ ನಡೆದಿದೆ.
ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿಯ ಜವಾಬ್ದಾರಿ ಹೊತ್ತಿರುವ ರಣದೀಪ್ ಸುರ್ಜೇವಾಲ ಅವರ ಮಂಗಳವಾರ ಬೆಳಗ್ಗೆ ನಟ ಶಿವರಾಜ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ, ಉಭಯ ಕುಶಲೋಪರಿ ವಿಚಾರಿಸಿದರು. ಈ ಸಂದರ್ಭದಲ್ಲಿ ಗೀತಾ ಶಿವರಾಜ್ ಕುಮಾರ್ ಅವರು ಹಾಜರಿದ್ದರು. ಇವರ ಈ ಭೇಟಿಯಿಂದಾಗಿ, ಗೀತಾ ಶಿವರಾಜ್ ಕುಮಾರ್ ಅವರ ಸಹೋದರ, ಸೊರಬದ ನೂತನ ಶಾಸಕ ಮಧು ಬಂಗಾರಪ್ಪನವರ ಸಚಿವ ಸ್ಥಾನದ ಹಾದಿ ಸುಗಮವಾಗಿರಬಹುದು ಎಂಬ ಅನಿಸಿಕೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಮಾತುಕತೆ ವೇಳೆ, ಮಧು ಬಂಗಾರಪ್ಪಗೆ ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಗೀತಾ ಶಿವರಾಜ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ ಬಳಿಯಿರುವ ಶಿವಣ್ಣ ನಿವಾಸಕ್ಕೆ ಭೇಟಿ ನೀಡಿದ ಬಗ್ಗೆ ಟ್ವೀಟ್ ಮಾಡಿರುವ ಸುರ್ಜೇವಾಲಾ, ಇಂದು ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಜ್ ಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರಿಗೆ ಧನ್ಯವಾದಗಳನ್ನು ತಿಳಿಸಿದೆ. ಅವರನ್ನು ಭೇಟಿ ಮಾಡಿದ್ದು ತುಂಬಾ ಖುಷಿ ಕೊಟ್ಟಿತು. ಇತ್ತೀಚೆಗಿನ ಚುನಾವಣೆಯಲ್ಲಿ ಅವರು ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವಾರು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದರು. ಹಾಗಾಗಿ, ಅವರಿಗೆ ಧನ್ಯವಾದ ಅರ್ಪಿಸಲು ನಾನು ಅವರ ನಿವಾಸಕ್ಕೆ ಹೋಗಿದ್ದಾಗಿ ಹೇಳಿದ್ದಾರೆ
ಆನಂತರ, ಉತ್ತಮ ಕಲಾವಿದರು ಹಾಗೂ ಮಾನವೀಯ ಮೌಲ್ಯಗಳನ್ನು ಹೊಂದಿರುವಂಥ ನಟ ಶಿವರಾಜ್ ಕುಮಾರ್ ಅವರು ಇತ್ತೀಚಿನ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರಕ್ಕೆ ಆಗಮಿಸುವ ಮೂಲಕ ನಮ್ಮ ಪಕ್ಷದ ಪ್ರಚಾರಕ್ಕೆ ಶಕ್ತಿ ತುಂಬಿದ್ದರು. ಅದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಹೇಳಲು ಬಂದಿದ್ದೇನೆ ಎಂದು ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.