ADVERTISEMENT

ಬಾವಲಿಗಳಿಂದ ಹರಡುವ ವೈರಸ್

ಆಫ್ರಿಕಾದಲ್ಲಿ ಈ ಹಿಂದೆ ಮಾರಕ ಸಾಂಕ್ರಾಮಿಕವನ್ನು ಹರಡುವ ಮೂಲಕ ಆರೋಗ್ಯ ವ್ಯವಸ್ಥೆ ಕುಸಿಯುವಂತೆ ಮಾಡಿದ್ದ ಎಬೋಲಾ ವೈರಸ್ ಸೇರಿದಂತೆ ಫಿಲೋವೈರಸ್ ಎಂದು ಕರೆಯುವ ಕುಟುಂಬಕ್ಕೆ ಮಾರ್ಬರ್ಗ್ ವೈರಸ್ ಸೇರಿದೆ. ಮಾರ್ಬರ್ಗ್ ವೈರಸ್ ಸಾಮಾನ್ಯವಾಗಿ ಆಫ್ರಿಕಾದ ಫ್ರೂಟ್ ಬ್ಯಾಟ್ (ಬಾವಲಿ) ಮೂಲಕ ಹರಡುತ್ತದೆ. ಈ ಬಾವಲಿಗಳು ವೈರಸ್ ಅನ್ನು ತಮ್ಮಲ್ಲಿ ಹೊಂದಿದ್ದರೂ, ಅವುಗಳಿಗೆ ಅದರಿಂದ ಯಾವ ಅಪಾಯವೂ ಆಗುವುದಿಲ್ಲ.

ಶಿವಕುಮಾರ್ ಎಚ್ ಎಂ
Published 17 ಫೆಬ್ರುವರಿ 2023, 5:25 IST
Last Updated 17 ಫೆಬ್ರುವರಿ 2023, 5:25 IST

ಆದರೆ ಈ ಬಾವಲಿಗಳು ತಾನು ವಾಸಿಸುವ ಮತ್ತು ಹಾರಾಡುವ ಸ್ಥಳಗಳಲ್ಲಿ ವೈರಸ್ ಅನ್ನು ಹರಡಬಲ್ಲದು. ಇದರಿಂದ ಮನುಷ್ಯರು ಹೆಚ್ಚು ತೊಂದರೆಗೆ ಸಿಲುಕುತ್ತಾರೆ. ಮನುಷ್ಯನಿಂದ ಮನುಷ್ಯನಿಗೆ ರಕ್ತ ಅಥವಾ ಇತರೆ ದೈಹಿಕ ದ್ರವಗಳ ಸಂಪರ್ಕದಿಂದ ವೈರಸ್ ವರ್ಗಾವಣೆಯಾಗಬಲ್ಲದು.

ಈ ಹಿಂದಿನ ಸಾಂಕ್ರಾಮಿಕ ಪ್ರಕರಣಗಳಲ್ಲಿ ಶೇ 24 ರಿಂದ ಶೇ 88ರಷ್ಟು ಮರಣ ಪ್ರಮಾಣ ಖಚಿತವಾಗಿದೆ. ಇದು ವೈರಸ್‌ನ ತಳಿ ಮತ್ತು ಪ್ರಕರಣದ ನಿರ್ವಹಣೆಯನ್ನು ಅವಲಂಬಿಸಿರುತ್ತದೆ ಎಂದು ಡಬ್ಲ್ಯೂಎಚ್‌ಒ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ADVERTISEMENT

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.