ನ್ಯೂಯಾರ್ಕ್: ಅಮೆರಿಕದ ಅಲಬಾಮಾ ವಿಶ್ವವಿದ್ಯಾಲಯದಲ್ಲಿ ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯೊಬ್ಬರಿಗೆ ಕುಲಾಂತರಿ ಹಂದಿಯ ಕಿಡ್ನಿಯನ್ನು ಜೋಡಿಸಲಾಗಿದ್ದು, ಈ ಪ್ರಯೋಗ ಸಫಲವಾದರೆ ಈ ವರ್ಷವೇ ಜೀವಂತ ವ್ಯಕ್ತಿಗೂ ಕಿಡ್ನಿ ಕಸಿ ನಡೆಸುವ ಸಾಧ್ಯತೆ ಇದೆ.
ಈ ತಿಂಗಳ ಅರಂಭದಲ್ಲಿ ಮೇರಿಲ್ಯಾಂಡ್ ಮೆಡಿಕಲ್ ಕಾಲೇಜ್‌ನಲ್ಲಿ ವ್ಯಕ್ತಿಯೊಬ್ಬರಿಗೆ ಹಂದಿಯ ಹೃದಯವನ್ನು ಜೋಡಿಸಲಾಗಿದ್ದು, ರೋಗಿ ಈಗಲೂ ಜೀವಂತ ಇದ್ದಾರೆ.
ಹಂದಿಯ ಕಿಡ್ನಿ ಕಸಿ ಮಾಡಿ ಮೂರು ದಿನಗಳಾಗಿದ್ದು, ವ್ಯಕ್ತಿಯ ಜೀವರಕ್ಷಕ ಸಾಧನವನ್ನು ತೆಗೆದುಹಾಕುವ ತನಕವೂ ಹಂದಿಯ ಕಿಡ್ನಿಗಳು ಮಾನವನ ದೇಹವನ್ನು ತಿರಸ್ಕರಿಸಿದ ಲಕ್ಷಣ ಕಾಣಿಸಿಲ್ಲ. ಮಾನವನ ರಕ್ತದ ಒತ್ತಡವನ್ನು ತಡೆದುಕೊಳ್ಳುವ ಶಕ್ತಿಯನ್ನು ಹಂದಿಯ ಕಿಡ್ನಿಯ ರಕ್ತದ ನಾಳಗಳು ಹೊಂದಿರುವುದು ಕಂಡುಬಂದಿದೆ ಹೀಗಾಗಿ ವೈದ್ಯರು ಈ ಪ್ರಯೋಗದ ಬಗ್ಗೆ ಆಶಾಭಾವನೆ ಹೊಂದಿದ್ದಾರೆ.
‘ಅಂಗಾಂಗ ಕಸಿ ಮಾಡುವುದಕ್ಕೆ ಅಂಗಾಂಗಗಳ ಅಭಾವ ಇದೆ. ಹೀಗಾಗಿ ಮನುಷ್ಯರಿಗೆ ಪ್ರಾಣಿಗಳ ಅಂಗಾಂಗ ಜೋಡಿಸುವ ಪ್ರಯೋಗ ನಡೆದಿದೆ, ಇಂತಹ ಪ್ರಯೋಗ ನಡೆಸಿದರಷ್ಟೇ ಮುಂದೆ ಏನಾದರೂ ಫಲಿತಾಂಶ ಕಂಡುಕೊಳ್ಳಲು ಸಾಧ್ಯವಾಗಬಹುದು’ ಎಂದು ಅಲಬಾಮಾ ವಿಶ್ವವಿದ್ಯಾಲಯದ ಡಾ.ಜೇಮ್ ಲುಕೆ ಅವರು ಹೇಳಿದ್ದಾರೆ.
ಅಮೆರಿಕದ ಅಲಬಾಮಾ ವಿಶ್ವವಿದ್ಯಾಲಯದಲ್ಲಿ ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಯೊಬ್ಬರಿಗೆ ಕುಲಾಂತರಿ ಹಂದಿಯ ಕಿಡ್ನಿಯನ್ನು ಜೋಡಿಸಲಾಗಿದ್ದು, ಈ ಪ್ರಯೋಗ ಸಫಲವಾದರೆ ಈ ವರ್ಷವೇ ಜೀವಂತ ವ್ಯಕ್ತಿಗೂ ಕಿಡ್ನಿ ಕಸಿ ನಡೆಸುವ ಸಾಧ್ಯತೆ ಇದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.