ADVERTISEMENT

ಟೊಂಗಾ ಸುನಾಮಿ–ಮೂರು ಸಣ್ಣ ದ್ವೀಪಗಳಲ್ಲಿ ಭಾರಿ ಹಾನಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2022, 13:12 IST
Last Updated 19 ಜನವರಿ 2022, 13:12 IST
ಟೊಂಗಾ ದ್ವೀಪಕ್ಕೆ ನೆರವಾಗಲು ಪರಿಹಾರ ಸಾಮಗ್ರಿಯೊಂದಿಗೆ ಸಿಡ್ನಿಯಿಂದ ಬ್ರಿಸ್ಬೇನ್‌ನತ್ತ ಹೊರಟ ಆಸ್ಟ್ರೇಲಿಯಾದ ಎಚ್‌ಎಂಎಎಸ್ ಅಡಿಲೇಡ್‌ ಯುದ್ಧನೌಕೆ  –ರಾಯಿಟರ್ಸ್‌ ಚಿತ್ರ
ಟೊಂಗಾ ದ್ವೀಪಕ್ಕೆ ನೆರವಾಗಲು ಪರಿಹಾರ ಸಾಮಗ್ರಿಯೊಂದಿಗೆ ಸಿಡ್ನಿಯಿಂದ ಬ್ರಿಸ್ಬೇನ್‌ನತ್ತ ಹೊರಟ ಆಸ್ಟ್ರೇಲಿಯಾದ ಎಚ್‌ಎಂಎಎಸ್ ಅಡಿಲೇಡ್‌ ಯುದ್ಧನೌಕೆ  –ರಾಯಿಟರ್ಸ್‌ ಚಿತ್ರ   

ಸಿಡ್ನಿ: ಪೆಸಿಫಿಕ್ ಸಮುದ್ರದಾಳದಲ್ಲಿ ಜ್ವಾಲಾಮುಖಿ ಸ್ಫೋಟಿಸಿದ್ದರಿಂದ ಉಂಟಾದ ಸುನಾಮಿ ಟೊಂಗಾದ ಮೂರು ಸಣ್ಣ ದ್ವೀಪಗಳಲ್ಲಿ ಭಾರಿ ಹಾನಿ ಉಂಟುಮಾಡಿದೆ ಎಂದು ರೆಡ್‌ ಕ್ರಾಸ್ ಮತ್ತು ರೆಡ್‌ ಕ್ರೆಸೆಂಟ್‌ ಸೊಸೈಟಿಗಳು ಹೇಳಿವೆ.

ಸುನಾಮಿಯಿಂದ 15 ಮೀಟರ್‌ (49 ಅಡಿ) ಎತ್ತರದ ಅಲೆಗಳು ಟೊಂಗಾದ ದ್ವೀಪಗಳ ದಡಗಳಿಗೆ ಅಪ್ಪಳಿಸಿದ್ದವು. ಇದರಿಂದ ನೊಮುಕ, ಮಂಗೊ ಮತ್ತು ಫೊನೊಫಿವಾ ಎಂಬ ದ್ವೀಪಗಳಲ್ಲಿ ಭಾರಿ ಹಾನಿ ಸಂಭವಿಸಿದೆ ಎಂದು ಟೊಂಗಾ ದ್ವೀಪಗಳಲ್ಲಿ ಆಗಿರುವ ಹಾನಿಯ ಬಗ್ಗೆ ಅಂದಾಜಿಸಲು ಹಡಗಿನಲ್ಲಿ ಸಂಚರಿಸಿದ ರೆಡ್‌ಕ್ರಾಸ್‌ ತಂಡದ ಮುಖ್ಯಸ್ಥರಾದ ಕಟೈ ಗ್ರೀನ್‌ವುಡ್‌ ಅವರು ತಿಳಿಸಿದ್ದಾರೆ.

ನ್ಯೂಜಿಲೆಂಡ್ ಈಗಾಗಲೇ ಎರಡು ಹಡಗುಗಳನ್ನು ಪರಿಹಾರ ಕಾರ್ಯಗಳಿಗಾಗಿ ಕಳುಹಿಸಿದ್ದು, ಆಸ್ಟ್ರೇಲಿಯಾ ಸಹ ಪರಿಹಾರ ಸಾಮಗ್ರಿ ಸಹಿತ ಯುದ್ಧನೌಕೆಯೊಂದನ್ನು ಕಳುಸಿಕೊಡಲು ಸಿದ್ಧತೆ ಮಾಡಿಕೊಂಡಿದೆ. ಸದ್ಯ ಕೋವಿಡ್‌ನಿಂದ ಬಹುತೇಕ ದೂರ ಉಳಿದಿರುವ ಟೊಂಗಾದಲ್ಲಿ ಪರಿಹಾರ ಕಾರ್ಯಕ್ಕೆ ತೆರಳಿದವರಿಂದಲೇ ಕೋವಿಡ್ ಹರಡುವ ಅಪಾಯ ಇರುವುದರಿಂದ ಅಂತರರಾಷ್ಟ್ರೀಯ ನೆರವನ್ನು ಪಡೆಯುವಲ್ಲಿ ಬಹಳ ಎಚ್ಚರಿಕೆ ವಹಿಸಲಾಗುತ್ತಿದೆ.

ADVERTISEMENT
ಸಾರಾಂಶ

ಪೆಸಿಫಿಕ್ ಸಮುದ್ರದಾಳದಲ್ಲಿ ಜ್ವಾಲಾಮುಖಿ ಸ್ಫೋಟಿಸಿದ್ದರಿಂದ ಉಂಟಾದ ಸುನಾಮಿ ಟೊಂಗಾದ ಮೂರು ಸಣ್ಣ ದ್ವೀಪಗಳಲ್ಲಿ ಭಾರಿ ಹಾನಿ ಉಂಟುಮಾಡಿದೆ ಎಂದು ರೆಡ್‌ ಕ್ರಾಸ್ ಮತ್ತು ರೆಡ್‌ ಕ್ರೆಸೆಂಟ್‌ ಸೊಸೈಟಿಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.