ADVERTISEMENT

ರಾಕೆಟ್‌ ಎಂಜಿನ್‌ ಪರೀಕ್ಷಾರ್ಥ ಪ್ರಯೋಗ ಮುಂದೂಡಿದ ರಷ್ಯಾ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 20:40 IST
Last Updated 10 ಅಕ್ಟೋಬರ್ 2021, 20:40 IST

ಮಾಸ್ಕೊ: ರಷ್ಯಾದ ವೊರೊನೆಜ್‌ ನಗರದಲ್ಲಿ ಕೋವಿಡ್‌ ಪೀಡಿತರಿಗಾಗಿ ಆಮ್ಲಜನಕ ಪೂರೈಕೆಯನ್ನು ವ್ಯವಸ್ಥಿತವಾಗಿಡುವ ಉದ್ದೇಶದಿಂದ ಮಾಸಾಂತ್ಯದವರೆಗೆ ರಾಕೆಟ್‌ ಎಂಜಿನ್‌ಗಳ ಪರೀಕ್ಷಾರ್ಥ ಪ್ರಯೋಗವನ್ನು ತಾತ್ಕಾಲಿಕವಾಗಿ ಕೈಬಿಡಲು ರಷ್ಯಾ ನಿರ್ಧರಿಸಿದೆ.

ಹಿರಿಯ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ. ರಷ್ಯಾದಲ್ಲಿ ಕೋವಿಡ್‌ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿವೆ. ಶನಿವಾರ ಗಣನೀಯ ಸಂಖ್ಯೆಯಲ್ಲಿ ಸಾವು ದಾಖಲಾಗಿದ್ದು, ಕೋವಿಡ್‌ ಪಿಡುಗು ಕಾಣಿಸಿಕೊಂಡ ನಂತರ ಇದು ಅತ್ಯಧಿಕ ಸಂಖ್ಯೆಯ ಪ್ರಕರಣವಾಗಿದೆ.

ಸೋಂಕಿತರಿಗೆ ಚಿಕಿತ್ಸೆ ಒದಗಿಸಲು ವೈದ್ಯಕೀಯ ಆಮ್ಲಜನಕಕ್ಕೆ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರಾಕೆಟ್ ಎಂಜಿನ್‌ನ ಪರೀಕ್ಷಾರ್ಥ ಪ್ರಯೋಗವನ್ನು ಮಾಸಾಂತ್ಯದವರೆಗೆ ಮುಂದೂಡಲು ನಿರ್ಧರಿಸಲಾಗಿದೆ ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆಯ ಮುಖ್ಯಸ್ಥರು ಭಾನುವಾರ ಟ್ವೀಟ್‌ ಮಾಡಿದ್ದಾರೆ.  

ADVERTISEMENT
ಸಾರಾಂಶ

ರಷ್ಯಾದ ವೊರೊನೆಜ್‌ ನಗರದಲ್ಲಿ ಕೋವಿಡ್‌ ಪೀಡಿತರಿಗಾಗಿ ಆಮ್ಲಜನಕ ಪೂರೈಕೆಯನ್ನು ವ್ಯವಸ್ಥಿತವಾಗಿಡುವ ಉದ್ದೇಶದಿಂದ ಮಾಸಾಂತ್ಯದವರೆಗೆ ರಾಕೆಟ್‌ ಎಂಜಿನ್‌ಗಳ ಪರೀಕ್ಷಾರ್ಥ ಪ್ರಯೋಗವನ್ನು ತಾತ್ಕಾಲಿಕವಾಗಿ ಕೈಬಿಡಲು ರಷ್ಯಾ ನಿರ್ಧರಿಸಿದೆ. ಹಿರಿಯ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ. ರಷ್ಯಾದಲ್ಲಿ ಕೋವಿಡ್‌ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿವೆ. ಶನಿವಾರ ಗಣನೀಯ ಸಂಖ್ಯೆಯಲ್ಲಿ ಸಾವು ದಾಖಲಾಗಿದ್ದು, ಕೋವಿಡ್‌ ಪಿಡುಗು ಕಾಣಿಸಿಕೊಂಡ ನಂತರ ಇದು ಅತ್ಯಧಿಕ ಸಂಖ್ಯೆಯ ಪ್ರಕರಣವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.