ADVERTISEMENT

ಉಗ್ರರಿಗೆ ಆರ್ಥಿಕ ನೆರವು ವಿರುದ್ಧ ಹೋರಾಟಕ್ಕೆ ಸಹಕಾರ: ಅಮೆರಿಕ - ಭಾರತ ಹೇಳಿಕೆ

ನವದೆಹಲಿ (ಪಿಟಿಐ):
Published 15 ಅಕ್ಟೋಬರ್ 2021, 6:12 IST
Last Updated 15 ಅಕ್ಟೋಬರ್ 2021, 6:12 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ವಾಷಿಂಗ್ಟನ್‌: ಅಕ್ರಮ ಬಂಡವಾಳ ಹೂಡಿಕೆ, ಅಕ್ರಮ ಹಣ ವರ್ಗಾವಣೆ ಮತ್ತು ಉಗ್ರರಿಗೆ ಹಣಕಾಸು ನೆರವು ವಿರುದ್ಧ ಹೋರಾಡಲು ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವುದರ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಅವರ ಅಮೆರಿಕ ಸಹವರ್ತಿ ಜಾನೆಟ್‌ ಯೆಲನ್‌ ಅವರು ಮಾತುಕತೆ ನಡೆಸಿದರು.

ಹಣಕಾಸು ಕಾರ್ಯಪಡೆಯ (ಎಫ್‌ಎಟಿಎಫ್‌) ಮಾನದಂಡಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕೂಡ ಉಭಯ ನಾಯಕರು ಸಮ್ಮತಿಸಿದರು.

ಭಾರತ– ಅಮೆರಿಕ ಆರ್ಥಿಕ ಮತ್ತು ಹಣಕಾಸು ಸಹಭಾಗಿತ್ವದ 8ನೇ ಸಭೆಯಲ್ಲಿ ಈ ಇಬ್ಬರು ನಾಯಕರು ಗುರುವಾರ ದ್ವಿಪಕ್ಷೀಯ ಸಹಕಾರ ಹೆಚ್ಚಿಸುವ ಕುರಿತಂತೆ ವ್ಯಾಪಕ ಚರ್ಚೆ ನಡೆಸಿದರು. ಅಮೆರಿಕ– ಭಾರತದ ಬಾಂಧವ್ಯ ವೃದ್ಧಿಸುತ್ತಿರುವುದರ ಮಹತ್ವವನ್ನು ಈ ಸಭೆ ಪ್ರತಿಬಿಂಬಿಸಿತು.

ADVERTISEMENT

’ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದನೆಗೆ ಹಣ ಹೂಡಿಕೆ ವಿರುದ್ಧ ನಾವು ಸಹಕಾರ ನೀಡುವುದನ್ನು ಮುಂದುವರಿಸುತ್ತೇವೆ. ಇದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ ಮತ್ತು ಸಮನ್ವಯದಿಂದ ಕಾರ್ಯ ನಿರ್ವಹಿಸುತ್ತೇವೆ’ ಎಂದು ಸಭೆ ನಂತರ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಾರಾಂಶ

ಅಕ್ರಮ ಬಂಡವಾಳ ಹೂಡಿಕೆ, ಅಕ್ರಮ ಹಣ ವರ್ಗಾವಣೆ ಮತ್ತು ಉಗ್ರರಿಗೆ ಹಣಕಾಸು ನೆರವು ವಿರುದ್ಧ ಹೋರಾಡಲು ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವುದರ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ಅವರ ಅಮೆರಿಕ ಸಹವರ್ತಿ ಜಾನೆಟ್‌ ಯೆಲನ್‌ ಅವರು ಮಾತುಕತೆ ನಡೆಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.