ADVERTISEMENT

ಇಂಡೊನೇಷ್ಯಾ: ಬಾಲಿ ದ್ವೀಪದಲ್ಲಿ ಸರಣಿ ಭೂಕಂಪನ, 3 ಸಾವು  

ಎಟಿಪಿ
Published 16 ಅಕ್ಟೋಬರ್ 2021, 6:18 IST
Last Updated 16 ಅಕ್ಟೋಬರ್ 2021, 6:18 IST
ಬಾಲಿ ದ್ವೀಪದ ಕರಂಗಾಸೆಮ್‌ನಲ್ಲಿ ಭೂಕಂಪನದ ನಂತರ ಮನೆಗಳು ಕುಸಿದಿರುವುದು. –ಎಎಫ್‌ಪಿ ಚಿತ್ರ. 
ಬಾಲಿ ದ್ವೀಪದ ಕರಂಗಾಸೆಮ್‌ನಲ್ಲಿ ಭೂಕಂಪನದ ನಂತರ ಮನೆಗಳು ಕುಸಿದಿರುವುದು. –ಎಎಫ್‌ಪಿ ಚಿತ್ರ.    

ಡೆನ್ಪಾಸರ್‌, ಇಂಡೊನೇಷ್ಯಾ: ಇಂಡೊನೇಷ್ಯಾದ ಬಾಲಿ ದ್ವೀಪದಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಎರಡು ಸರಣಿ ಭೂಕಂಪನದಲ್ಲಿ ಮೂವರು ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ.

‘ಭೂಕಂಪನದಿಂದ ಗುಡ್ಡ ಪ್ರದೇಶದ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿದೆ. ಇದರಿಂದ ಕನಿಷ್ಠ ಇಬ್ಬರು ಸಾವಿಗೀಡಾಗಿದ್ದು ಮೂರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ’ ಎಂದು ದ್ವೀಪದ ಶೋಧ ಮತ್ತು ರಕ್ಷಣಾ ಸಂಸ್ಥೆಯ ಮುಖ್ಯಸ್ಥ ಗೆಡೆ ದರ್ಮದಾ ಹೇಳಿದರು.

‘ಭೂಕಂಪನದಲ್ಲಿ ಸಂಭವಿಸಿದ ಹಾನಿ ಮತ್ತು ಸಾವು– ನೋವುಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮೂಳೆ ಮುರಿತ ಮತ್ತು ತಲೆಗೆ ಪೆಟ್ಟು ಬಿದ್ದಿರುವಂತಹ ಗಾಯಗಳಾಗಿವೆ’ ಎಂದು ದ್ವೀಪದ ಶೋಧ ಮತ್ತು ರಕ್ಷಣಾ ಸಂಸ್ಥೆಯ ಮುಖ್ಯಸ್ಥ ಗೆಡೆ ದರ್ಮದಾ ಹೇಳಿದರು.

ADVERTISEMENT

ಬೆಳಕು ಮೂಡುವ ಮುನ್ನವೇ ಭೂಮಿ ಕಂಪಿಸಿದೆ. ಇದರಿಂದ ಭಯಗೊಂಡ ಜನರು ಮನೆಯಿಂದ ಹೊರಗೆ ಓಡಿಹೋಗಿದ್ದಾರೆ. ಕೋವಿಡ್‌ ಪಿಡುಗು ಕಡಿಮೆಯಾಗುತ್ತಿದ್ದಂತೆ ದ್ವೀಪ ರಾಷ್ಟ್ರವು ತನ್ನ ಪ್ರವಾಸೋದ್ಯಮವನ್ನು ಮತ್ತೆ ಪ್ರಾರಂಭಿಸುತ್ತಿರುವ ಹೊತ್ತಿನಲ್ಲೇ ಈ ದುರಂತ ಸಂಭವಿಸಿದೆ.

ಮೊದಲಿಗೆ 4.8 ತೀವ್ರತೆಯ ಭೂಕಂಪನ ಸಂಭವಿಸಿದೆ. ಇದು ಬಾಲಿ ಬಂದರು ಪಟ್ಟಣ ಸಿಂಗರಾಜದಿಂದ ಈಶಾನ್ಯಕ್ಕೆ 62 ಕಿ.ಮೀ. ದೂರದಲ್ಲಿ ಕೇಂದ್ರೀಕೃತವಾಗಿತ್ತು. 10 ಕಿ.ಮೀ. ಕಡಿಮೆ ಆಳದಲ್ಲಿ ಸಂಭವಿಸಿದ ಭೂಕಂಪನದಿಂದ ಹಾನಿ ಪ್ರಮಾಣ ಕಡಿಮೆಯಾಗಿರಬಹುದು ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ಹೇಳಿದೆ. 

ನಂತರದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದ್ದು 282 ಕಿ.ಮೀ.  ಆಳದಲ್ಲಿ ಕೇಂದ್ರೀಕೃತವಾಗಿತ್ತು ಎಂದೂ ಹೇಳಿದೆ.

ಸಾರಾಂಶ

ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಎರಡು ಸರಣಿ ಭೂಕಂಪದಲ್ಲಿ ಮೂವರು ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.