ADVERTISEMENT

ಇಂಧನ ಕ್ಷೇತ್ರ, 2047ರ ವೇಳೆಗೆ ಸ್ವಾವಲಂಬಿಯಾಗಲುಎಕ್ಸಾನ್‌ಮೊಬಿಲ್‌ ನೆರವು: ಲವೊಯ್

ಎಕ್ಸಾನ್‌ಮೊಬಿಲ್‌ ಕಂಪನಿ ಹೇಳಿಕೆ

ನವದೆಹಲಿ (ಪಿಟಿಐ):
Published 12 ಅಕ್ಟೋಬರ್ 2021, 6:37 IST
Last Updated 12 ಅಕ್ಟೋಬರ್ 2021, 6:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬಾಸ್ಟನ್: ‘2047ರ ವೇಳೆಗೆ ಇಂಧನ ಕ್ಷೇತ್ರದಲ್ಲಿ ದೇಶವು ಸ್ವಾವಲಂಬಿಯಾಗುವ ದಿಸೆಯಲ್ಲಿ ಎಕ್ಸಾನ್‌ಮೊಬಿಲ್ ನಂತಹ ಕಂಪನಿಗಳು ಭಾರತದೊಂದಿಗೆ ಕಾರ್ಯನಿರ್ವಹಿಸಲಿವೆ’ ಎಂದು ಕಂಪನಿಯ ಏಷ್ಯಾ ವಿಭಾಗದ ಹಿರಿಯ ನಿರ್ದೇಶಕ ಪೀಟರ್ ಲವೊಯ್ ಹೇಳಿದರು.

ಅಮೆರಿಕ ಪ್ರವಾಸದಲ್ಲಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರೊಂದಿಗೆ ನಡೆದ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು 2047ರ ವೇಳೆ ಇಂಧನ ಕ್ಷೇತ್ರದಲ್ಲಿ ಭಾರತ ಸ್ವಾವಲಂಬಿಯಾಗಬೇಕು ಎಂಬ ಗುರಿ ನಿಗದಿ ಮಾಡಿದ್ದಾರೆ. ಇದಕ್ಕಾಗಿ ಶುದ್ಧ ಇಂಧನ ಮೂಲಗಳನ್ನು ಹೊಂದುವುದು ಅಗತ್ಯ. ಈ ಕಾರ್ಯ ಸಾಧನೆಯಲ್ಲಿ ಭಾರತಕ್ಕೆ ಕಂಪನಿ ನೆರವಾಗಲಿದೆ’ ಎಂದು ಅವರು ಹೇಳಿದರು.

ADVERTISEMENT

‘ಹವಾಮಾನ ಬದಲಾವಣೆಯಿಂದಾಗುವ ಸಮಸ್ಯೆಗಳಿಗೆ ಜಗತ್ತು ಪರಿಹಾರ ಕಂಡುಕೊಳ್ಳಬೇಕಿದೆ. ಇದಕ್ಕಾಗಿ ಪರಿಸರ ಮಾಲಿನ್ಯ ಮಾಡದಂತಹ ಇಂಧನಗಳು, ಶುದ್ಧ ಮೂಲಗಳು ಅಗತ್ಯ’ ಎಂದು ಅವರು ಹೇಳಿದರು.

ಸಾರಾಂಶ

‘2047ರ ವೇಳೆಗೆ ಇಂಧನ ಕ್ಷೇತ್ರದಲ್ಲಿ ದೇಶವು ಸ್ವಾವಲಂಬಿಯಾಗುವ ದಿಸೆಯಲ್ಲಿ ಎಕ್ಸಾನ್‌ಮೊಬಿಲ್ ನಂತಹ ಕಂಪನಿಗಳು ಭಾರತದೊಂದಿಗೆ ಕಾರ್ಯನಿರ್ವಹಿಸಲಿವೆ’ ಎಂದು ಕಂಪನಿಯ ಏಷ್ಯಾ ವಿಭಾಗದ ಹಿರಿಯ ನಿರ್ದೇಶಕ ಪೀಟರ್ ಲವೊಯ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.