ಜೆರುಸಲೆಂ (ಪಿಟಿಐ): ಮೂಲಭೂತವಾದ ಮತ್ತು ಭಯೋತ್ಪಾದನೆಗೆ ಸಂಬಂಧಿಸಿದಂತೆ ಭಾರತ ಮತ್ತು ಇಸ್ರೇಲ್ ದೇಶಗಳು ಏಕರೂಪದ ಸವಾಲುಗಳನ್ನು ಎದುರಿಸುತ್ತಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಇಲ್ಲಿ ಹೇಳಿದರು.
ಭಾನುವಾರ ಅವರು ಇಲ್ಲಿ ಭಾರತ ಮೂಲದ ಜ್ಯುವಿಶ್ ಮತ್ತು ಇಂಡೊಲಾಜಿಸ್ಟ್ ಸಮುದಾಯದ ಪ್ರಮುಖರನ್ನು ಉದ್ದೇಶಿಸಿ ಮಾತನಾಡಿದರು. ಉಭಯ ರಾಷ್ಟ್ರಗಳ ನಡುವೆ ಬಾಂಧವ್ಯ ವೃದ್ದಿಗೆ ಶತಮಾನದಿಂದ ಕೊಡುಗೆ ನೀಡಿರುವ ಭಾರತೀಯ ಜ್ಯುವಿಶ್ ಸಮುದಾಯದ ಕೊಡುಗೆ ಗಣನೀಯ ಎಂದರು.
ಐದು ದಿನದ ಭೇಟಿಗಾಗಿ ಇಲ್ಲಿಗೆ ಆಗಮಿಸಿರುವ ಅವರು, ಜ್ಯವಿಷ್ ಸಮುದಾಯವು ಬರುವ ವರ್ಷಗಳಲ್ಲಿಯೂ ಉಭಯ ರಾಷ್ಟ್ರಗಳ ನಡುವಣ ಬಾಂಧವ್ಯ ಇನ್ನಷ್ಟು ಗಟ್ಟಿಯಾಗಲು ಶ್ರಮಿಸಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಭಾರತದಂತೆಯೇ ಇಸ್ರೇಲ್ ಅನ್ನು ಅರ್ಥಮಾಡಿಕೊಳ್ಳಲು ಸಾಕಷ್ಟು ಕಾಲ ಬೇಕು. ಭಾರತದೊಂದಿಗೆ ಶತಮಾನಕ್ಕೂ ಹೆಚ್ಚು ಅವಧಿ ಬಾಂಧವ್ಯ ಹೊಂದಿರುವ ಈ ದೇಶಕ್ಕೆ ಬರಲು ಸಂತಸವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಬಾಂಧವ್ಯ ಸಾಕಷ್ಟು ವೃದ್ಧಿಯಾಗಿದೆ ಎಂದರು.
ಉಭಯ ದೇಶಗಳೂ ಪ್ರಜಾಪ್ರಭುತ್ವ ಮತ್ತು ಬಹುತ್ವದ ಮೌಲ್ಯಗಳನ್ನು ಗೌರವಿಸಲಿವೆ. ನಾವು ಕೆಲ ಮಾರ್ಗದರ್ಶಿ ಚಿಂತನೆಗಳನ್ನು ವಿನಿಮಯ ಮಾಡಿಕೊಳ್ಳಲಿದ್ದೇವೆ. ಭಾರತದಲ್ಲಿ ‘ವಸುಧೈವ ಕುಟುಂಬಕಂ’ ಚಿಂತನೆ ಇದ್ದಂತೆ, ಇಸ್ರೇಲ್‌ನಲ್ಲಿ ‘ಟಿಕುನ್ ಓಳಂ’ ಚಿಂತನೆ ಇದೆ ಎಂದು ಜೈಶಂಕರ್ ಹೇಳಿದರು.
ಅಂತೆಯೇ, ನಾವು ಮೂಲಭೂತವಾದ, ಭಯೋತ್ಪಾದನೆ ಕುರಿತು ಇತರೆ ಕೆಲವು ದೇಶಗಳಂತೇ ಏಕರೂಪದ ಸವಾಲುಗಳನ್ನು ನಾವು ಎದುರಿಸುತ್ತಿದ್ದೇವೆ. ಭಾರತವು ಪಾಕಿಸ್ತಾನ ಮತ್ತು ಇಸ್ರೇಲ್ ಗಡಿಯುದ್ಧಕ್ಕೂ ಬೆದರಿಕೆ ಎದುರಿಸುತ್ತಿದೆ. ಉಭಯ ದೇಶಗಳು ಇದನ್ನು ಹತ್ತಿಕ್ಕಲು ಜಂಟಿ ಕಾರ್ಯ ಸಮೂಹವನ್ನು ಹೊಂದಿವೆ. ಈಗ ನಿಜವಾಗಿ ವಾಣಿಜ್ಯ ಚಟುವಟಿಕೆ ಮತ್ತು ಹೊಸ ಅನ್ವೇಷಣೆಯ ಚಿಂತನೆಗಳ ವಿನಿಮಯ ಹೆಚ್ಚು ನಡೆಯಬೇಕಾಗಿದೆ ಎಂದು ಹೇಳಿದರು.
ಉಭಯ ದೇಶಗಳೂ ಪ್ರಜಾಪ್ರಭುತ್ವ ಮತ್ತು ಬಹುತ್ವದ ಮೌಲ್ಯಗಳನ್ನು ಗೌರವಿಸಲಿವೆ. ನಾವು ಕೆಲ ಮಾರ್ಗದರ್ಶಿ ಚಿಂತನೆಗಳನ್ನು ವಿನಿಮಯ ಮಾಡಿಕೊಳ್ಳಲಿದ್ದೇವೆ. ಭಾರತದಲ್ಲಿ ‘ವಸುಧೈವ ಕುಟುಂಬಕಂ’ ಚಿಂತನೆ ಇದ್ದಂತೆ, ಇಸ್ರೇಲ್‌ನಲ್ಲಿ ‘ಟಿಕುನ್ ಓಳಂ’ ಚಿಂತನೆ ಇದೆ ಎಂದು ಜೈಶಂಕರ್ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.