ADVERTISEMENT

ಸುಡಾನ್‌: ಸುಮೇಧ ಹಡಗಿನ ಮೂಲಕ ತಾಯ್ನಾಡಿನತ್ತ 278 ಭಾರತೀಯರು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2023, 10:29 IST
Last Updated 25 ಏಪ್ರಿಲ್ 2023, 10:29 IST
ಐಎನ್‌ಎಸ್‌ ಸುಮೇಧ ಹಡಗಿನ ಮೂಲಕ ತಾಯ್ನಾಡಿಗೆ ಮರಳಲು ಸುಡಾನ್‌ನ ಬಂದರಿನಲ್ಲಿ ಸಜ್ಜಾಗಿ ನಿಂತಿರುವ ಭಾರತೀಯರು
ಐಎನ್‌ಎಸ್‌ ಸುಮೇಧ ಹಡಗಿನ ಮೂಲಕ ತಾಯ್ನಾಡಿಗೆ ಮರಳಲು ಸುಡಾನ್‌ನ ಬಂದರಿನಲ್ಲಿ ಸಜ್ಜಾಗಿ ನಿಂತಿರುವ ಭಾರತೀಯರು   

ನವದೆಹಲಿ: ಸುಡಾನ್‌ನಲ್ಲಿ ಸೇನೆ ಮತ್ತು ಅರೆಸೇನಾ ಪಡೆಯ ಸಂಘರ್ಷದಿಂದ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರ ಸುರಕ್ಷಿತ ಸ್ಥಳಾಂತರಕ್ಕೆ ಕೇಂದ್ರ ಸರ್ಕಾರ ಕಾರ್ಯಾಚರಣೆ ನಡೆಸುತ್ತಿದ್ದು ಸುಮೇಧ ಹಡಗಿನ ಮೂಲಕ 278 ಜನರು ತಾಯ್ನಾಡಿಗೆ ಬರುತ್ತಿದ್ದಾರೆ. 

ಐಎನ್‌ಎಸ್‌ ಸುಮೇಧ ಹಡಗಿನ ಮೂಲಕ ಮೊದಲ ಬ್ಯಾಚ್‌ನಲ್ಲಿ 278 ಜನರು ಬರುತ್ತಿದ್ದಾರೆ. ಹಡಗು ಈಗಾಗಲೇ ಪೋರ್ಟ್ ಸುಡಾನ್‌ನಿಂದ ಜೆದ್ದಾ ಮಾರ್ಗವಾಗಿ ಬರುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರರು ಹೇಳಿದ್ದಾರೆ.

ಮೊದಲ ಬ್ಯಾಚ್‌ನಲ್ಲಿ 278 ಜನರು ಭಾರತದ ಕಡೆ ಬರುತ್ತಿದ್ದಾರೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ಟ್ವೀಟ್‌ ಮಾಡಿದೆ.

ADVERTISEMENT

ಮೂರು ಸಾವಿರಕ್ಕೂ ಹೆಚ್ಚು ಭಾರತೀಯರ ಸುರಕ್ಷಿತ ಸ್ಥಳಾಂತರಕ್ಕೆ ಕೇಂದ್ರ ಸರ್ಕಾರ ಸೋಮವಾರದಿಂದ ಕಾರ್ಯಾಚರಣೆ ಆರಂಭಿಸಿದ್ದು, ಇದಕ್ಕೆ ‘ಆಪರೇಷನ್‌ ಕಾವೇರಿ’ ಎಂದು ಹೆಸರಿಟ್ಟಿದೆ. ಭಾರತೀಯರನ್ನು ತಾಯ್ನಾಡಿಗೆ ಕರೆತರಲು ಎರಡು ವಿಮಾನಗಳು ಮತ್ತು ಒಂದು ಹಡಗು ಸಿದ್ಧಗೊಂಡಿದೆ.

ಈಗಾಗಲೇ, 500 ಭಾರತೀಯರು ಸುಡಾನ್‌ ಬಂದರು ತಲುಪಿದ್ದಾರೆ. ಮತ್ತಷ್ಟು ಜನರು ಇದೇ ಹಾದಿಯಲ್ಲಿದ್ದಾರೆ. ಸಂಘರ್ಷ ಪೀಡಿತ ಪ್ರದೇಶದಲ್ಲಿ ಸಿಲುಕಿರುವ ಎಲ್ಲಾ ನಮ್ಮ ಸಹೋದರರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆತರಲಾಗುವುದು ಎಂದು ವಿದೇಶಾಂಗ ಸಚಿವ ಜೈಶಂಕರ್‌ ಟ್ವೀಟ್‌ ಮಾಡಿದ್ದಾರೆ.

ಅಧಿಕಾರಕ್ಕಾಗಿ ಸೇನಾ ಮುಖ್ಯಸ್ಥ ಜನರಲ್‌ ಅಬ್ದುಲ್ ಫತ್ತಾಹ್‌ ಅಲ್‌ ಬುಹ್ರಾನ್‌ ಹಾಗೂ ಅರೆಸೇನಾ ಪಡೆ ಮುಖ್ಯಸ್ಥ ಮೊಹಮ್ಮದ್‌ ಹಮದಾನ್‌ ದಾಗಲೊ ನಡುವೆ ನಡೆಯುತ್ತಿರುವ ಸಂಘರ್ಷ 11ನೇ ದಿನಕ್ಕೆ ಕಾಲಿಟ್ಟಿದ್ದು, 400ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.