ADVERTISEMENT

ಅಫ್ಗಾನಿಸ್ತಾನದಲ್ಲಿ ಭೂಕಂಪನ: ಕನಿಷ್ಠ 12 ಸಾವು, ಹಲವಾರು ಮಂದಿಗೆ ಗಾಯ

ಐಎಎನ್ಎಸ್
Published 18 ಜನವರಿ 2022, 3:27 IST
Last Updated 18 ಜನವರಿ 2022, 3:27 IST
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)   

ಕಾಬೂಲ್: ಅಫ್ಗಾನಿಸ್ತಾನದ ಬಡ್‌ಘಿಸ್‌ ಪ್ರಾಂತ್ಯದಲ್ಲಿ ಸೋಮವಾರ ಸಂಭವಿಸಿದ 5.6 ತೀವ್ರತೆಯ ಭೂಕಂಪನದಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಪ್ರಾಂತ್ಯದ ರಾಜಧಾನಿ ಖ್ವಾಲಾ–ಇ–ನವ್’ನಿಂದ ಪೂರ್ವಕ್ಕೆ ಖ್ವಾಡಿಸ್‌ ಜಿಲ್ಲೆಯ ಬದ್ರುಕ್, ದರ್ಬಾಂದ್–ಇ–ಸಫೇದ್ ಮತ್ತು ಖಾಕ್ ಪೊಲಾಕ್ ಪ್ರದೇಶಗಳಲ್ಲಿ ಭೂಮಿ ಕಂಪಿಸಿತ್ತು’ ಎಂದು ಜಿಲ್ಲಾಡಳಿತದ ಹೇಳಿಕೆ ಉಲ್ಲೇಖಿಸಿ ‘ಕ್ಸಿನುವಾ’ ಸುದ್ದಿಸಂಸ್ಥೆ ವರದಿ ಮಾಡಿದೆ.

ಸಂಜೆ 4:10ರ ಸುಮಾರಿಗೆ ಸಂಭವಿಸಿದ ಭೂಕಂಪನದಲ್ಲಿ ಅನೇಕ ಮನೆಗಳಿಗೆ ಹಾನಿಯಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಖ್ವಾಲಾ–ಇ–ನವ್’ನಿಂದ 40 ಕಿ.ಮೀ. ಪೂರ್ವಕ್ಕೆ, ತುರ್ಕ್‌ಮೆನಿಸ್ತಾನ್ ಜತೆ ಗಡಿ ಹಂಚಿಕೊಂಡಿರುವ ಬಡ್‌ಘಿಸ್‌ನಲ್ಲಿ 5.6 ತೀವ್ರತೆಯ ಭೂಕಂಪನ ಸಂಭವಿಸಿತ್ತು ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

ಹಲವು ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದೂ ಮೂಲಗಳು ಹೇಳಿವೆ.

ಸಾರಾಂಶ

ಅಫ್ಗಾನಿಸ್ತಾನದ ಬಡ್‌ಘಿಸ್‌ ಪ್ರಾಂತ್ಯದಲ್ಲಿ ಸೋಮವಾರ ಸಂಭವಿಸಿದ 5.6 ತೀವ್ರತೆಯ ಭೂಕಂಪನದಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.