ADVERTISEMENT

ಪರೀಕ್ಷಿಸಿದ್ದು ಹೈಪರ್‌ಸಾನಿಕ್ ವಾಹನ, ‘ಕ್ಷಿಪಣಿ’ಅಲ್ಲ: ಚೀನಾ

ನವದೆಹಲಿ (ಪಿಟಿಐ):
Published 18 ಅಕ್ಟೋಬರ್ 2021, 13:27 IST
Last Updated 18 ಅಕ್ಟೋಬರ್ 2021, 13:27 IST
ಜಾಹೊ ಲಿಜಿಯಾನ್
ಜಾಹೊ ಲಿಜಿಯಾನ್   

ಬೀಜಿಂಗ್: ‘ನಾವು ಪರೀಕ್ಷಿಸಿದ್ದು ಹೈಪರ್‌ಸಾನಿಕ್ ವಾಹನವೇ ಹೊರತು ಕ್ಷಿಪಣಿಯಲ್ಲ ಎಂದು ಚೀನಾವು ಸೋಮವಾರ ಹೇಳಿದೆ’ ಎಂದು ಬ್ರಿಟನ್‌ನ ತ್ರಿಕೆಯೊಂದು ವರದಿ ಮಾಡಿದೆ.

‘ಚೀನಾ ಆಗಸ್ಟ್‌ನಲ್ಲಿ ಪರಮಾಣು ಸಾಮರ್ಥ್ಯವುಳ್ಳ ಹೈಪರ್‌ಸಾನಿಕ್ ಕ್ಷಿಪಣಿಯನ್ನು ಪರೀಕ್ಷಾರ್ಥವಾಗಿ ಉಡಾಯಿಸಿದೆ’ ಎಂದು ಭಾನುವಾರ ‘ದಿ ಫೈನಾನ್ಷಿಯನ್ ಟೈಮ್ಸ್’ ವರದಿ ಮಾಡಿತ್ತು. ಚೀನಾದ  ಅತ್ಯಾಧುನಿಕ ತಂತ್ರಜ್ಞಾನವು ಅಮೆರಿಕದ ಗುಪ್ತಚರ ಇಲಾಖೆಯನ್ನು ಅಚ್ಚರಿಗೊಳಿಸಿತ್ತು ಎಂದೂ ವರದಿಯಲ್ಲಿ ತಿಳಿಸಿತ್ತು.

ಈ ಕುರಿತು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜಾಹೊ ಲಿಜಿಯಾನ್‌, ‘ಚೀನಾವು ಹೈಪರ್‌ಸಾನಿಕ್ ವಾಹನದ ಪರೀಕ್ಷೆ ನಡೆಸಿದೆಯೋ ಹೊರತು ಕ್ಷಿಪಣಿಯಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT
ಸಾರಾಂಶ

ಬೀಜಿಂಗ್: ‘ನಾವು ಪರೀಕ್ಷಿಸಿದ್ದು ಹೈಪರ್‌ಸಾನಿಕ್ ವಾಹನವೇ ಹೊರತು ಕ್ಷಿಪಣಿಯಲ್ಲ ಎಂದು ಚೀನಾವು ಸೋಮವಾರ ಹೇಳಿದೆ’ ಎಂದು ಬ್ರಿಟನ್‌ನ ಸುದ್ದಿಪತ್ರಿಕೆಯೊಂದು ವರದಿ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.