ADVERTISEMENT

ಅರುಣಾಚಲ ಪ್ರದೇಶದಿಂದ ಯುವಕನ ಕಣ್ಮರೆ ಗೊತ್ತಿಲ್ಲ: ಚೀನಾ

ಆದರೆ, ತಮಿಳುನಾಡಿನಲ್ಲಿ ಅದು ಚಾಲಕನ ಸೀಟಿನಲ್ಲಿ ಕೂರಲು ಬಯಸಿದೆ. ಎನ್‌ಡಿಎಯ ನಾಯಕತ್ವವನ್ನು ಎಐಎಡಿಎಂಕೆ ವಹಿಸಿಕೊಳ್ಳುತ್ತದೆ. ಬಿಜೆಪಿ ಮತ್ತು ಇತರೆ ಪಕ್ಷಗಳ ಅದರ ಅಡಿಯಲ್ಲಿ ಬರಬೇಕು ಎಂದು ಪಕ್ಷದ ಹಿರಿಯ ನಾಯಕ ಡಿ ಜಯಕುಮಾರ್ ಹೇಳಿದ್ದಾರೆ.

ನವದೆಹಲಿ (ಪಿಟಿಐ):
Published 20 ಜನವರಿ 2022, 14:09 IST
Last Updated 20 ಜನವರಿ 2022, 14:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್‌: ಅರುಣಾಚಲ ಪ್ರದೇಶದ ಮೇಲಿನ ಸಿಯಾಂಗ್‌ ಜಿಲ್ಲೆಯಲ್ಲಿ 17 ವರ್ಷದ ಯುವಕನನ್ನು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಸಿಬ್ಬಂದಿ ಅಪಹರಿಸಿದ ಬಗ್ಗೆ ತನಗೆ ಯಾವುದೇ ಮಾಹಿತಿಯೂ ಇಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯ ತಿಳಿಸಿದೆ.

‘ಪಿಎಲ್‌ಎ ಗಡಿ ಭಾಗದಲ್ಲಿ ನಿಯಂತ್ರಣ ಸಾಧಿಸಿದ್ದು, ಅಕ್ರಮವಾಗಿ ಚೀನಾ ನೆಲದೊಳಗೆ ಪ್ರವೇಶಿಸುವುದು ಮತ್ತು ಹೊರ ಹೋಗುವ ಚಟುವಟಿಕೆಗಳನ್ನು ಹತ್ತಿಕ್ಕುತ್ತಿದೆ’ ಎಂದು ಅದು ಹೇಳಿದೆ.

ಪಿಎಲ್‌ಎ ಸಿಬ್ಬಂದಿ ಸಿಯುಂಗ್ಲಾ ಪ್ರದೇಶದ ಲುಂಗ್ಟಾ ಜೋರ್ ಎಂಬ್ಲಿಂದ ಮಿರಾಮ್ ತರೊನ್‌ ಎಂಬಾತನನ್ನು ಅಪಹರಿಸಿದೆ ಎಂದು ಅರುಣಾಚಲ ಪ್ರದೇಶದ ಸಂಸದ ತಪಿರ್ ಗವೊ ಅವರು ಬುಧವಾರ ಆರೋಪಿಸಿದ್ದರು. ಪಿಎಲ್‌ಎ ಸಿಬ್ಬಂದಿಯಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದ ಆತನ ಸ್ನೇಹಿತ ಈ ಅಪಹರಣದ ಬಗ್ಗೆ ಮಾಹಿತಿ ನೀಡಿದ್ದಾನೆ ಎಂದು ಅವರು ಹೇಳಿದ್ದರು.‌

ADVERTISEMENT

ನಾಪತ್ತೆಯಾಗಿರುವ ಯುವಕನನ್ನು ಹುಡುಕುವಲ್ಲಿ ನೆರವಾಗಬೇಕು ಎಂದು ಭಾರತೀಯ ಸೇನೆ ಪಿಎಲ್‌ಎ ಅನ್ನು ಕೇಳಿಕೊಂಡಿದೆ.

ಸಾರಾಂಶ

ಅರುಣಾಚಲ ಪ್ರದೇಶದ ಮೇಲಿನ ಸಿಯಾಂಗ್‌ ಜಿಲ್ಲೆಯಲ್ಲಿ 17 ವರ್ಷದ ಯುವಕನನ್ನು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಸಿಬ್ಬಂದಿ ಅಪಹರಿಸಿದ ಬಗ್ಗೆ ತನಗೆ ಯಾವುದೇ ಮಾಹಿತಿಯೂ ಇಲ್ಲ ಎಂದು ಚೀನಾದ ವಿದೇಶಾಂಗ ಸಚಿವಾಲಯ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.