ADVERTISEMENT

ವಾಷಿಂಗ್ಟನ್‌: ಪೆಂಟಗನ್ ಪ್ರಮುಖ ಹುದ್ದೆಗೆ ಭಾರತೀಯ ಅಮೆರಿಕನ್ ರವಿ ಚೌಧರಿ ನೇಮಕ

ನವದೆಹಲಿ (ಪಿಟಿಐ):
Published 15 ಅಕ್ಟೋಬರ್ 2021, 6:59 IST
Last Updated 15 ಅಕ್ಟೋಬರ್ 2021, 6:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಭಾರತೀಯ ಅಮೆರಿಕನ್ ರವಿ ಚೌಧರಿ ಅವರನ್ನು ಅಮೆರಿಕ ಸರ್ಕಾರದ ರಕ್ಷಣಾ ಇಲಾಖೆಯಲ್ಲಿ (ಪೆಂಟಗನ್‌) ಪ್ರಮುಖ ಹುದ್ದೆಗೆ ನಾಮನಿರ್ದೇಶನ ಮಾಡಿರುವುದಾಗಿ ಅಧ್ಯಕ್ಷ ಜೋ ಬೈಡನ್ ಅವರು ಗುರುವಾರ ಘೋಷಿಸಿದ್ದಾರೆ.

ಅಮೆರಿಕದ ವಾಯುಪಡೆಯ ನಿವೃತ್ತ ಅಧಿಕಾರಿಯಾಗಿರುವ ಚೌಧರಿ ಅವರನ್ನು ವಾಯುಪಡೆಯಲ್ಲಿನ ಇಂಧನ ಮತ್ತು ಪರಿಸರ ವಿಭಾಗದ ಸಹಾಯಕ ಕಾರ್ಯದರ್ಶಿ ಹುದ್ದೆಗೆ ನಾಮನಿರ್ದೇಶನ ಮಾಡಲಾಗಿದೆ. ಅಮೆರಿಕ ಸೆನೆಟ್‌ನಿಂದ ದೃಢೀಕರಣ ಪಡೆದ ನಂತರ, ರವಿ ಚೌಧರಿ ಅವರು ಪೆಂಟಗನ್‌ನ ಈ ಪ್ರಮುಖ ಹುದ್ದೆಯ ಅಧಿಕಾರ ಸ್ವೀಕರಿಸಲಿದ್ದಾರೆ.

ಚೌಧರಿ ಈ ಹಿಂದೆ ಅಮೆರಿಕದ ಸಾರಿಗೆ ಇಲಾಖೆಯಲ್ಲಿ ಹಿರಿಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿದ್ದರು. ಅಲ್ಲಿ ಅವರು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ನಲ್ಲಿ ಕಮರ್ಷಿಯಲ್ ಸ್ಪೇಸ್‌ ಅಡ್ವಾನ್ಸ್ಡ್‌ ಪ್ರೋಗ್ರಾಮ್ ಮತ್ತು ಇನ್ನೋವೇಷನ್ ವಿಭಾಗದ ನಿರ್ದೇಶಕರಾಗಿದ್ದರು ಎಂದು ಶ್ವೇತ ಭವನದ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಿದೆ.

ಸಾರಾಂಶ

ಭಾರತೀಯ ಅಮೆರಿಕನ್ ರವಿ ಚೌಧರಿ ಅವರನ್ನು ಅಮೆರಿಕ ಸರ್ಕಾರದ ರಕ್ಷಣಾ ಇಲಾಖೆಯಲ್ಲಿ (ಪೆಂಟಗನ್‌) ಪ್ರಮುಖ ಹುದ್ದೆಗೆ ನಾಮನಿರ್ದೇಶನ ಮಾಡಿರುವುದಾಗಿ ಅಧ್ಯಕ್ಷ ಜೋ ಬೈಡನ್ ಅವರು ಗುರುವಾರ ಘೋಷಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.