ADVERTISEMENT

ಬೇಕಂತಲೇ ಕೋವಿಡ್‌ ಸೋಂಕು ತಗುಲಿಸಿಕೊಂಡಿದ್ದ ಜೆಕ್‌ ಗಾಯಕಿ ನಿಧನ

ತಮಿಳುನಾಡಿನಲ್ಲಿ ಅದು ಚಾಲಕನ ಸೀಟಿನಲ್ಲಿ ಕೂರಲು ಬಯಸಿದೆ. ಎನ್‌ಡಿಎಯ ನಾಯಕತ್ವವನ್ನು ಎಐಎಡಿಎಂಕೆ ವಹಿಸಿಕೊಳ್ಳುತ್ತದೆ. ಬಿಜೆಪಿ ಮತ್ತು ಇತರೆ ಪಕ್ಷಗಳ ಅದರ ಅಡಿಯಲ್ಲಿ ಬರಬೇಕು ಎಂದು ಪಕ್ಷದ ಹಿರಿಯ ನಾಯಕ ಡಿ ಜಯಕುಮಾರ್ ಹೇಳಿದ್ದಾರೆ.

​ಪ್ರಜಾವಾಣಿ ವಾರ್ತೆ
Published 20 ಜನವರಿ 2022, 8:43 IST
Last Updated 20 ಜನವರಿ 2022, 8:43 IST
ಹನ ಹೊರ್ಕಾ
ಹನ ಹೊರ್ಕಾ   

ಬೇಕಂತಲೇ ಕೋವಿಡ್‌ ಸೋಂಕು ತಗುಲಿಸಿಕೊಂಡಿದ್ದ ಜೆಕ್‌ ಗಣರಾಜ್ಯದ ಖ್ಯಾತ ಜಾನಪದ ಗಾಯಕಿ ಹನ ಹೊರ್ಕಾ(57) ನಿಧನರಾಗಿದ್ದಾರೆ. 

ಹನ ಹೊರ್ಕಾ ನಿಧನರಾಗಿದ್ದಾರೆ ಎಂದು ಅವರ ಮಗ ಬಿಬಿಸಿ ಸುದ್ದಿ ವಾಹಿನಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಕೋವಿಡ್‌ ಲಸಿಕೆ ಹಾಕಿಸಿಕೊಳ್ಳದ ಹನ ಹೊರ್ಕಾ, ಕೆಲ ದಿನಗಳ ಹಿಂದೆ, ನನಗೆ ಕೋವಿಡ್‌ ಸೋಂಕು ತಗುಲಿದ್ದು ಚೇತರಿಸಿಕೊಳ್ಳುತ್ತಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದರು. ಇದಾಗಿ ನಾಲ್ಕೈದು ದಿನಗಳಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ADVERTISEMENT

ಹನ ಹೊರ್ಕಾ ಅವರ ಪತಿ ಹಾಗೂ ಮಗನಿಗೆ ಕೋವಿಡ್‌ ಸೋಂಕು ದೃಢಪಟ್ಟಿತ್ತು. ಹನ ಹೊರ್ಕಾಗೆ ಕೋವಿಡ್‌ ತಗುಲಿರಲಿಲ್ಲ. ಆದರೆ ವಿವಿಧ ಸಾರ್ವಜನಿಕ ಸ್ಥಳಗಳಿಗೆ ತೆರಳಲು ಹಾಗೂ ಗಾಯನದ ಸಲುವಾಗಿ ’ಸರ್ಕಾರದ ಚೇತರಿಕೆ ಪಾಸ್‌’ ಪಡೆಯಲು ಬೇಕಂತಲೇ ಸೋಂಕು ತಗುಲಿಸಿಕೊಂಡರು ಎಂದು ಅವರ ಕುಟುಂಬದವರು ಹೇಳಿದ್ದಾರೆ.

ಸೋಂಕು ತಗುಲಿದ ತಕ್ಷಣ ಅವರು ಪ್ರತ್ಯೇಕವಾಸದಲ್ಲಿದ್ದರು. ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು ಎಂದು ಅವರ ಮಗ ರೆಕ್ಸ್‌ ಹೇಳಿದ್ದಾರೆ.

ಜೆಕ್‌ ಗಣರಾಜ್ಯದಲ್ಲಿ ಲಸಿಕೆ ಪಡೆದವರು ಮತ್ತು ಕೋವಿಡ್‌ ಸೋಂಕಿನಿಂದ ಚೇತರಿಸಿಕೊಂಡವರು ತಮ್ಮ ಚೇತರಿಕೆ ಪಾಸ್‌ ನೀಡಿ ಸಾರ್ವಜನಿಕ ಸ್ಥಳಗಳು, ಬಾರ್‌, ಪಬ್‌, ಕೆಫೆ, ಸಿನಿಮಾ ಮಂದಿರ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೆರಳಲು ಅವಕಾಶವಿದೆ. 

ಜೆಕ್‌ ಗಣರಾಜ್ಯದಲ್ಲಿ ಕೋವಿಡ್‌ ವ್ಯಾಪಕವಾಗಿ ಹರಡುತ್ತಿದ್ದು, ಆ ದೇಶದ ಶೇ 63ರಷ್ಟು ಜನರಿಗೆ ಈಗಾಗಲೇ ಲಸಿಕೆ ನೀಡಲಾಗಿದೆ. 

ಸಾರಾಂಶ

ಬೇಕಂತಲೇ ಕೋವಿಡ್‌ ಸೋಂಕು ತಗುಲಿಸಿಕೊಂಡಿದ್ದ ಜೆಕ್‌ ಗಣರಾಜ್ಯದ ಖ್ಯಾತ ಜಾನಪದ ಗಾಯಕಿ ಹನ ಹೊರ್ಕಾ ನಿಧನರಾಗಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.