ADVERTISEMENT

ಅಮೆರಿಕ: ಲಸಿಕೆ ಹಾಕಿಸಿಕೊಂಡ ಪ್ರಯಾಣಿಕರಿಗೆ ನವೆಂಬರ್‌ನಿಂದ ಅನುಮತಿ

ಎಟಿಪಿ
Published 13 ಅಕ್ಟೋಬರ್ 2021, 10:33 IST
Last Updated 13 ಅಕ್ಟೋಬರ್ 2021, 10:33 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ವಾಷಿಂಗ್ಟನ್: ಕೋವಿಡ್‌ ಲಸಿಕೆಯನ್ನು ಹಾಕಿಸಿಕೊಂಡಿರುವ ಮೆಕ್ಸಿಕೊ ಹಾಗೂ ಕೆನಡಾ ಪ್ರಜೆಗಳು ನವೆಂಬರ್‌ನಿಂದ ರಸ್ತೆ ಮಾರ್ಗದ ಮೂಲಕ ದೇಶ ಪ್ರವೇಶಿಸಲು ಅನುಮತಿ ನೀಡಲಾಗುವುದು ಎಂದು ಅಮೆರಿಕ ಹೇಳಿದೆ.

ಈ ಕುರಿತು ಶ್ವೇತಭವನದ ಅಧಿಕಾರಿ ಮಾಹಿತಿ ನೀಡಿದ್ದು, ‘ ರಸ್ತೆ ಮಾರ್ಗವಲ್ಲದೇ, ಅಂತರರಾಷ್ಟ್ರೀಯ ವಿಮಾನಗಳ ಮೂಲಕ ಬರುವ ಇತರ ದೇಶಗಳ ಪ್ರಜೆಗಳಿಗೂ ಅಮೆರಿಕ ಪ್ರವೇಶಿಸಲು ಅನುಮತಿ ನೀಡಲಾಗುವುದು. ಇದಕ್ಕೆ ಸಂಬಂಧಿಸಿದ ದಿನಾಂಕವನ್ನು ಶೀಘ್ರವೇ ಪ್ರಕಟಿಸಲಾಗುವುದು’ ಎಂದು ಹೇಳಿದ್ದಾರೆ.

ಕೊರೊನಾ ಸೋಂಕು ಪ್ರಸರಣ ತಡೆಯುವ ಸಲುವಾಗಿ ಐರೋಪ್ಯ ದೇಶಗಳು, ಬ್ರಿಟನ್‌ ಹಾಗೂ ಚೀನಾದ ಪ್ರಜೆಗಳು ದೇಶಕ್ಕೆ ಭೇಟಿ ನೀಡದಂತೆ ಕಳೆದ ವರ್ಷ ಮಾರ್ಚ್‌ನಲ್ಲಿ ಅಮೆರಿಕ ನಿರ್ಬಂಧ ವಿಧಿಸಿತ್ತು. ನಂತರ, ಭಾರತ, ಬ್ರೆಜಿಲ್‌ ಹಾಗೂ ನೆರೆಯ ಮೆಕ್ಸಿಕೊ, ಕೆನಡಾ ದೇಶಗಳ ಪ್ರಜೆಗಳಿಗೂ ತನ್ನ ಗಡಿಯನ್ನು ಮುಚ್ಚಿತ್ತು.

ADVERTISEMENT
ಸಾರಾಂಶ

ಕೋವಿಡ್‌ ಲಸಿಕೆಯನ್ನು ಹಾಕಿಸಿಕೊಂಡಿರುವ ಮೆಕ್ಸಿಕೊ ಹಾಗೂ ಕೆನಡಾ ಪ್ರಜೆಗಳು ನವೆಂಬರ್‌ನಿಂದ ರಸ್ತೆ ಮಾರ್ಗದ ಮೂಲಕ ದೇಶ ಪ್ರವೇಶಿಸಲು ಅನುಮತಿ ನೀಡಲು ಅಮೆರಿಕ ನಿರ್ಧರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.