ನಾಗಮಂಗಲ (ಮಂಡ್ಯ): ‘ಖಾಲಿ ಹುದ್ದೆಗಳೆಲ್ಲವನ್ನೂ ತುಂಬಿದರೆ ರಾಜ್ಯದ ಇಡೀ ಬೊಕ್ಕಸವನ್ನು ಸಿಬ್ಬಂದಿಯ ಸಂಬಳಕ್ಕೆ ಮೀಸಲಿಡಬೇಕಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೆಲವು ಇಲಾಖೆಗಳನ್ನು ರದ್ದು ಮಾಡಲು ನಿರ್ಧರಿಸಲಾಗಿದೆ’ ಎಂದು ಕಂದಾಯ ಸಚಿವ ಆರ್.ಅಶೋಕ್ ಸೋಮವಾರ ತಿಳಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಕೆಲ ಇಲಾಖೆಗಳು ನಿಷ್ಪ್ರಯೋಜಕವಾಗಿದ್ದು ಅಲ್ಲಿಯ ಸಿಬ್ಬಂದಿ ಕೆಲಸವಿಲ್ಲದೇ ಸುಮ್ಮನೆ ಬಂದು ಹೋಗುತ್ತಿದ್ದಾರೆ. ಅಂತಹ ಇಲಾಖೆಗಳನ್ನು ವಿಲೀನ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಂದು ಸಮಿತಿ ರಚನೆ ಮಾಡಿದ್ದಾರೆ. ನಾನೇ ಸಮಿತಿಯ ಮುಖ್ಯಸ್ಥನಾಗಿದ್ದು ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.
‘ಕಂದಾಯ ಇಲಾಖೆಯ ಕಂದಾಯ ವಸೂಲಿ ಕಚೇರಿಗಳಲ್ಲಿ 200ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಾರೆ, ಅವರಿಗೆ ಅಂತಹ ಕೆಲಸಗಳಿರುವುದಿಲ್ಲ. ಆ ಹುದ್ದೆಗಳನ್ನು ರದ್ದು ಮಾಡಿ ಸಿಬ್ಬಂದಿಯನ್ನು ಡಿ.ಸಿ ಕಚೇರಿ, ತಹಶೀಲ್ದಾರ್ ಕಚೇರಿಗಳಿಗೆ ವರ್ಗಾವಣೆ ಮಾಡಲಾಗುವುದು. ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲೂ ಹೆಚ್ಚು ಕೆಲಸಗಳಾಗುತ್ತಿಲ್ಲ. ಹೀಗಾಗಿ ರಾಜ್ಯಕ್ಕೆ ಒಂದೇ ಕಚೇರಿ ರೂಪಿಸುವ ಚಿಂತನೆ ಇದೆ’ ಎಂದರು.
‘ಖಾಲಿ ಹುದ್ದೆಗಳೆಲ್ಲವನ್ನೂ ತುಂಬಿದರೆ ರಾಜ್ಯದ ಇಡೀ ಬೊಕ್ಕಸವನ್ನು ಸಿಬ್ಬಂದಿಯ ಸಂಬಳಕ್ಕೆ ಮೀಸಲಿಡಬೇಕಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೆಲವು ಇಲಾಖೆಗಳನ್ನು ರದ್ದು ಮಾಡಲು ನಿರ್ಧರಿಸಲಾಗಿದೆ’ ಎಂದು ಕಂದಾಯ ಸಚಿವ ಆರ್.ಅಶೋಕ್ ಸೋಮವಾರ ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.