ADVERTISEMENT

ಆಡು ತಿನ್ನದ ಸೊಪ್ಪಿಲ್ಲ, ಬಿಜೆಪಿ ಭ್ರಷ್ಟಾಚಾರ ಮಾಡದ ಕ್ಷೇತ್ರವಿಲ್ಲ: ಕಾಂಗ್ರೆಸ್‌

ಸಿಎಂ ಖಾಲಿ ಕುರ್ಚಿಗೆ ಭಾಷಣ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ: ಕಾಂಗ್ರೆಸ್‌

Abdul Rahiman
Published 18 ಮಾರ್ಚ್ 2023, 7:52 IST
Last Updated 18 ಮಾರ್ಚ್ 2023, 7:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   ಪಿಟಿಐ

ಬೆಂಗಳೂರು: ಕೆಎಂಎಫ್‌ ನೇಮಕಾತಿಯಗೆ ಹೈಕೋರ್ಟ್‌ ತಡೆ ನೀಡಿರುವ ಬಗ್ಗೆ ಪ್ರಜಾವಾಣಿ ಪ್ರಕಟ ಮಾಡಿರುವ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್‌, ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

’ಆಡು ತಿನ್ನದ ಸೊಪ್ಪಿಲ್ಲ, ಬಿಜೆಪಿ ಭ್ರಷ್ಟಾಚಾರ ಮಾಡದ ಕ್ಷೇತ್ರವಿಲ್ಲ‘ ಎಂದು ಕುಹಕವಾಡಿದೆ.

‘KMF ನೇಮಕಾತಿಯಲ್ಲೂ ಹುದ್ದೆಗಳ ಮಾರಾಟ ನಡೆದಿರುವುದು, ಹೈಕೋರ್ಟ್ ನೇಮಕಾತಿಗೆ ತಡೆ ನೀಡಿರುವುದು ಬಿಜೆಪಿಯ ನಿರ್ಲಜ್ಜ ಭ್ರಷ್ಟಾಚಾರಕ್ಕೆ ಸಾಕ್ಷಿ. KMFನ ನೇಮಕಾತಿಯನ್ನು ಗುಜರಾತಿನ ಏಜೆನ್ಸಿಗೆ ನೀಡಿದ್ದು ಏಕೆ? ಈ ಹಗರಣದ ಹಿಂದೆ ಅಮಿತ್ ಶಾ ಅವರ ಒತ್ತಡ ಕೆಲಸ ಮಾಡಿದೆಯೇ?‘ ಎಂದು ಕಾಂಗ್ರೆಸ್‌ ಟ್ವಿಟರ್‌ನಲ್ಲಿ ಪ್ರಶ್ನೆ ಮಾಡಿದೆ.

ADVERTISEMENT

ಇನ್ನು ಹಾವೇರಿಯ ರಟ್ಟಿಹಳ್ಳಿಯಲ್ಲಿ ನಡೆದ ಎರಡು ಗುಂಪುಗಳ ಘರ್ಷಣೆ ಸಂಬಂಧ ಕಾಂಗ್ರೆಸ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಸಿಎಂ ಖಾಲಿ ಕುರ್ಚಿಗೆ ಭಾಷಣ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ‘ ಎಂದು ಟ್ವೀಟ್‌ ಮಾಡಿದೆ.

‘ಸಿಎಂ ತವರು ಜಿಲ್ಲೆ ಹಾವೇರಿಯಲ್ಲಿ ಶಾಂತಿ ಕದಡುವ ಪ್ರಯತ್ನ ನಡೆದಿದೆ. ಸತತ 4 ದಿನಗಳಿಂದ ಬಂದ್ ವಾತಾವರಣ ಸೃಷ್ಟಿಯಾಗಿದ್ದು ಕರ್ನಾಟಕದಲ್ಲಿ ಶಾಂತಿ ಇಲ್ಲ, ಕಾನೂನು ಸುವ್ಯವಸ್ಥೆ ಜೀವಂತವಿಲ್ಲ ಎಂಬುದಕ್ಕೆ ನಿದರ್ಶನ. ಸಿಎಂ ಬಸವರಾಜ ಬೊಮ್ಮಾಯಿ ಖಾಲಿ ಕುರ್ಚಿಗಳಿಗೆ ಭಾಷಣ ಮಾಡುವಲ್ಲಿ ಬ್ಯುಸಿ. ಗೃಹಸಚಿವರು ಗುಳಿಗ ದೈವವನ್ನು ಅವಮಾನಿಸುವುದರಲ್ಲಿ ಬ್ಯುಸಿ‘ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.