ಬೆಂಗಳೂರು: ರಾಜ್ಯ ಸರ್ಕಾರ 27 ಐಎಎಸ್ ಮತ್ತು 7 ಐಎಫ್‌ಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ್ದು, ಬಿ.ಎಚ್.ಅನಿಲ್ ಕುಮಾರ್ ಅವರನ್ನು ಮೂಲಭೂತ ಸೌಕರ್ಯ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಮತ್ತೊಬ್ಬ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಕಪಿಲ್ ಮೋಹನ್ ಅವರನ್ನು ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರ ಹಾಗೂ ಕಾನೂನು ಮಾಪನ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಇತರ ಅಧಿಕಾರಿಗಳನ್ನು ಅವರ ಮುಂದಿನ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಎಸ್.ಆರ್. ಉಮಾಶಂಕರ್– ಪ್ರಧಾನ ಕಾರ್ಯದರ್ಶಿ, ಸಹಕಾರ ಇಲಾಖೆ, ಎಸ್.ಸೆಲ್ವಕುಮಾರ್– ಕಾರ್ಯದರ್ಶಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ (ಕೌಶಲ್ಯಾಭಿವೃದ್ಧಿ ಇಲಾಖೆ, ಹೆಚ್ಚುವರಿ ಹೊಣೆ), ನವೀನ್ ರಾಜ್ ಸಿಂಗ್– ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ.(ಬೆಂಗಳೂರು ವಿಭಾಗೀಯ ಆಯುಕ್ತರ ಹೆಚ್ಚುವರಿ ಹೊಣೆ).
ಜೆ. ರವಿಶಂಕರ್– ಕಾರ್ಯದರ್ಶಿ, ವಸತಿ ಇಲಾಖೆ (ಅಬಕಾರಿ ಇಲಾಖೆ ಆಯುಕ್ತ– ಹೆಚ್ಚುವರಿ ಹುದ್ದೆ), ಡಿ. ರಂದೀಪ್– ಆಯುಕ್ತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೆ.ವಿ.ತ್ರಿಲೋಕ್ ಚಂದ್ರ– ವಿಶೇಷ ಆಯುಕ್ತ (ಆರೋಗ್ಯ ಮತ್ತು ಐಟಿ) ಬಿಬಿಎಂಪಿ, ಕೆ.ಪಿ.ಮೋಹನ್ ರಾಜ್– ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮ, ಬಿ.ಬಿ.ಕಾವೇರಿ– ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಖನಿಜ ನಿಗಮ ನಿಯಮಿತ.
ಟಿ.ಎಚ್.ಎಂ.ಕುಮಾರ್– ಆಯುಕ್ತ, ಜವಳಿ ಅಭಿವೃದ್ಧಿ ಮತ್ತು ನಿರ್ದೇಶಕರು, ಕೈಮಗ್ಗ, ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮ, ಪ್ರಿಯಾಂಕ ಮೇರಿ ಫ್ರಾನ್ಸಿಸ್– ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕನಗ ವಲ್ಲಿ– ನಿರ್ದೇಶಕರು, ಸಮಗ್ರ ಶಿಶು ಸಂರಕ್ಷಣಾ ಯೋಜನೆ, ವಿ.ರಾಮ್ ಪ್ರಸಾದ್ ಮನೋಹರ್– ನಿರ್ದೇಶಕ, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಆರ್.ವೆಂಕಟೇಶ್ ಕುಮಾರ್– ಕಾರ್ಯದರ್ಶಿ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಕಲಬುರಗಿ, ಚಾರುಲತಾ ಸೋಮಲ್– ಜಿಲ್ಲಾಧಿಕಾರಿ, ರಾಯಚೂರು.
ಶಿಲ್ಪಾನಾಗ್ ಸಿ.ಟಿ– ಆಯುಕ್ತೆ, ಪಂಚಾಯತ್ ರಾಜ್, ಕೆ. ಲಕ್ಷ್ಮಿಪ್ರಿಯಾ– ನಿರ್ದೇಶಕರು, ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿ ವೃದ್ಧಿ ಸಂಸ್ಥೆ, ಮೈಸೂರು, ಬಿ.ಎಚ್.ನಾರಾಯಣರಾವ್– ಸಿಇಒ, ಜಿಲ್ಲಾ ಪಂಚಾಯಿತಿ, ವಿಜಯನಗರ ಜಿಲ್ಲೆ, ಯುಕೇಶ್ ಕುಮಾರ್– ಸಿಇಒ, ಜಿಲ್ಲಾ ಪಂಚಾಯಿತಿ, ಕೋಲಾರ, ಬಿ.ಸಿ.ಸತೀಶ– ಜಿಲ್ಲಾಧಿಕಾರಿ, ಕೊಡಗು, ಎಚ್.ಎನ್.ಗೋಪಾಲಕೃಷ್ಣ– ಆಯುಕ್ತ, ಯುವಜನ ಸಬಲೀಕರಣ, ಕ್ರೀಡಾ ಇಲಾಖೆ, (ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ರಾಜ್ಯ ಭೂ ನಿಗಮ ನಿಯಮಿತ ಹುದ್ದೆ ಯಲ್ಲಿ ಮುಂದುವರೆಯಲಿದ್ದಾರೆ).
ಶಿವಾನಂದ ಕಾಪಸಿ– ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮ, ಎಂ.ಎಸ್.ಅರ್ಚನಾ– ನಿರ್ದೇಶಕಿ, ಪೌರಾಡಳಿತ, ಕೆ.ಎಂ.ಗಾಯತ್ರಿ– ಸಿಇಒ, ಜಿಲ್ಲಾ ಪಂಚಾಯಿತಿ, ಚಾಮರಾಜನಗರ, ಕೆ.ಎಂ.ಅನುರಾಧ– ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ರೇಷ್ಮೆ ಮಾರುಕಟ್ಟೆ ಮಂಡಳಿ, ಎನ್.ಎಂ.ನಾಗರಾಜ– ಸಿಇಒ, ಜಿಲ್ಲಾ ಪಂಚಾಯಿತಿ, ಕೋಲಾರ.
ಐಎಫ್‌ಎಸ್ ವರ್ಗಾವಣೆ: ಏಳು ಮಂದಿ ಐಎಫ್‌ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ಮನೋಜ್ ಕುಮಾರ್ ಅವರನ್ನು ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ವರ್ಗಾಯಿಸಲಾ
ಗಿದೆ.
ಸುಭಾಷ್ ಕೆ.ಮಳಖೇಡ– ಎಪಿಸಿಸಿಎಫ್, ಕಾರ್ಯ ಯೋಜನೆ, ಜಗ್ ಮೋಹನ್ ಶರ್ಮಾ–ಎಪಿಸಿಸಿಎಫ್, ಮಹಾನಿರ್ದೇಶಕ ಇಎಂಪಿಆರ್‌ಐ, ಕುಮಾರ್ ಪುಷ್ಕರ್–ಎಪಿಸಿಸಿಎಫ್, ವನ್ಯಜೀವಿ, ಮನೋಜ್ ಕುಮಾರ್ ತ್ರಿಪಾಠಿ–ಸಿಸಿಎಫ್, ಶಿವಮೊಗ್ಗ ವೃತ್ತ, ಉಪೇಂದ್ರ ಪ್ರತಾಪ್ ಸಿಂಗ್– ಸಿಸಿಎಫ್, ಚಾಮರಾಜನಗರ ವೃತ್ತ, ಆರ್.ರವಿಶಂಕರ್– ಸಿಸಿಎಫ್, ಅರಣ್ಯ ಸಂಶೋಧನಾ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.
ರಾಜ್ಯ ಸರ್ಕಾರ 27 ಐಎಎಸ್ ಮತ್ತು 7 ಐಎಫ್‌ಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ್ದು, ಬಿ.ಎಚ್.ಅನಿಲ್ ಕುಮಾರ್ ಅವರನ್ನು ಮೂಲಭೂತ ಸೌಕರ್ಯ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಮತ್ತೊಬ್ಬ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ಅವರನ್ನು ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರ ಹಾಗೂ ಕಾನೂನು ಮಾಪನ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ. ಇತರ ಅಧಿಕಾರಿಗಳನ್ನು ಅವರ ಮುಂದಿನ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.