ಹೋಳಿ ಹಬ್ಬ 2022: ರಾಜ್ಯದ ಹಲವೆಡೆ ಸಂಭ್ರಮದ ರಂಗಿನಾಟ | ಫೋಟೊಗಳು
Published 18 ಮಾರ್ಚ್ 2022, 7:21 IST Last Updated 18 ಮಾರ್ಚ್ 2022, 7:21 IST ಬೆಂಗಳೂರು: ರಾಜ್ಯದ ಹಲವೆಡೆ ಜನರು ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಓಕುಳಿ..ಕಲಬುರಗಿಯ ಬ್ರಹ್ಮಪುರದ ಸುಭಾಷ ಚೌಕ್ನಲ್ಲಿ ಗುರುವಾರ ರಾತ್ರಿ ಹೋಳಿ ಹಬ್ಬದ ಅಂಗವಾಗಿ ಕಾಮದಹನ ಮಾಡಲಾಯಿತು.ಕಲಬುರಗಿಯ ರಿಲಯನ್ಸ್ ಮಾರ್ಟ್ ಮಾಲ್ ಬಳಿ ಪಿಚಕಾರಿ, ಮುಖವಾಡ ಮತ್ತು ಇತರೆ ವಸ್ತುಗಳನ್ನು ಜನರು ಖರೀದಿ ಮಾಡುತ್ತಿರುವುದು –ಪ್ರಜಾವಾಣಿ ಚಿತ್ರ/ತಾಜುದ್ದೀನ್ ಆಜಾದ್ಹೋಗ್ಬುಟ್ಟಾ ಕಾಮಣ್ಣ ಹೋಗ್ಬುಟ್ಟಾ... ಕಾಮಣ್ಣನ ಶವದ ಪ್ರತಿಕೃತಿಯ ಎದುರು ಬಾಯಿಬಡಿದುಕೊಳ್ಳುತ್ತಿರುವ ಚಿಣ್ಣರು ಹೋಳಿ ಹಬ್ಬದ ಮುನ್ನಾದಿನವಾದ ಗುರುವಾರ ಕೊಪ್ಪಳದ ಭಾಗ್ಯನಗರದಲ್ಲಿ ಕಂಡದ್ದು ಹೀಗೆ. ಪ್ರಜಾವಾಣಿ ಚಿತ್ರ: ಭರತ್ ಕಂದಕೂರವಿಜಯಪುರ ನಗರ: ರತಿ–ಮನ್ಮಥರಿಗೆ ತೊಡಿಸುವ ಸಕ್ಕರೆ ಸರಗಳ ಖರೀದಿ –ಪ್ರಜಾವಾಣಿ ಚಿತ್ರಚಿಣ್ಣರು ಮತ್ತು ಯುವಕರು ಹೋಳಿ ಹಬ್ಬದ ಅಂಗವಾಗಿ ಬಣ್ಣ, ಪಿಚಕಾರಿಗಳನ್ನು ಖರೀದಿಸಿದರು–ಪ್ರಜಾವಾಣಿ ಚಿತ್ರಖಟಕಚಿಂಚೋಳಿ ಪ್ರಗತಿ ಕೇಂದ್ರದ ಮಕ್ಕಳು ಹೋಳಿ ಹಬ್ಬದ ಪ್ರಯುಕ್ತ ಸಕ್ಕರೆ ಸರಗಳನ್ನು ಹಾಕಿಕೊಂಡು ಸಂಭ್ರಮಿಸಿದರುಹೋಳಿ ಅಂಗವಾಗಿ ನಗರದ ಚನ್ನಮ್ಮನ ವೃತ್ತದ ಬಳಿ ಹಲಗಿ ವ್ಯಾಪಾರದಲ್ಲಿ ತೊಡಗಿದ್ದ ಮಹಿಳೆಯೊಬ್ಬರು, ಸುಡು ಬಿಸಿಲಿನಿಂದಾಗಿ ಟೇಬಲ್ ಕೆಳಗೆ ನಿದ್ರೆಗೆ ಜಾರಿದರು. ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿಕಲಬುರಗಿಯ ಪುಟಾಣಿ ಗಲ್ಲಿಯಲ್ಲಿ ಹಿಂದೂ– ಮುಸ್ಲಿಂ ಯುವಕರು ಒಂದಾಗಿ ಹೋಳಿ ಹಬ್ಬವಾಡಿ, ಕುಣಿದು ಕುಪ್ಪಳಿಸಿದರು.ಬೆಳಗಾವಿಯ ಲೇಲೇ ಮೈದಾನದಲ್ಲಿ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಶುಕ್ರವಾರ ಆಯೋಜಿಸಿದ್ದ ಹೋಳಿ ಮಿಲನ ಕಾರ್ಯಕ್ರಮ.ಹೊಸಪೇಟೆಯಲ್ಲಿ ಹೋಳಿ ಸಂಭ್ರಮಹೊಸಪೇಟೆಯಲ್ಲಿ ಹೋಳಿ ಸಂಭ್ರಮಕಲಬುರಗಿ ನಗರದಲ್ಲಿ ಶುಕ್ರವಾರ ರಂಗಿನಾಟದ ಸಂಭ್ರಮ....ಕಲಬುರಗಿ ನಗರದಲ್ಲಿ ಶುಕ್ರವಾರ ಯುವತಿಯರ ಬಣ್ಣದ ಸಂಭ್ರಮ....