ಬೆಂಗಳೂರು: 24 ಗಂಟೆಗಳಲ್ಲಿ ರಾಜ್ಯದಲ್ಲಿ 470 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 9 ಮಂದಿ ಸಾವಿಗೀಡಾಗಿದ್ದಾರೆ. 368 ಸೋಂಕಿತರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಈವರೆಗೆ ರಾಜ್ಯದಲ್ಲಿ ವರದಿಯಾದ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 29,82,869 ಕ್ಕೆ ಏರಿದ್ದು, 37,931 ಮಂದಿ ಮೃತರಾಗಿದ್ದಾರೆ. ಸದ್ಯ, 9,671 ಸಕ್ರಿಯ ಪ್ರಕರಣಗಳಿವೆ.
ಕೋವಿಡ್ ಖಚಿತಗೊಳ್ಳುತ್ತಿರುವ ಶೇಕಡಾವಾರು ಪ್ರಮಾಣ 0.50ಕ್ಕೆ ಇಳಿದಿದ್ದು, ಸಾವಿನ ದರ ಶೇಕಡಾ 1.91ರಷ್ಟಿದೆ
ರಾಜಧಾನಿ ಬೆಂಗಳೂರಿನಲ್ಲಿ 232 ಪ್ರಕರಣಗಳು ದೃಢಪಟ್ಟಿದ್ದು, ಒಂದು ಸಾವಾಗಿದೆ. ಸದ್ಯ, ನಗರದಲ್ಲಿ 6,746 ಸಕ್ರಿಯ ಪ್ರಕರಣಗಳಿವೆ.
ಮೈಸೂರಿನಲ್ಲಿ 59, ದಕ್ಷಿಣ ಕನ್ನಡದಲ್ಲಿ 36 ಕೊಡಗಿನಲ್ಲಿ 22 ಪ್ರಕರಣ ದಾಖಲಾಗಿವೆ. 8 ಜಿಲ್ಲೆಗಳಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.
ಈವರೆಗೆ ರಾಜ್ಯದಲ್ಲಿ ವರದಿಯಾದ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 29,82,869 ಕ್ಕೆ ಏರಿದ್ದು, 37,931 ಮಂದಿ ಮೃತರಾಗಿದ್ದಾರೆ. ಸದ್ಯ, 9,671 ಸಕ್ರಿಯ ಪ್ರಕರಣಗಳಿವೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.