ಶ್ರೀನಗರ: ಕಣಿವೆ ರಾಜ್ಯದ ಗಡಿಯುದ್ದಕ್ಕೂ ಭಯೋತ್ಪಾದನಾ ಚಟುವಟಿಕೆಗಳ ಉಸ್ತುವಾರಿಗೆ ಇರುವ ನಾಯಕತ್ವದ ಕೊರತೆ ನೀಗಿಸಲು ಪಾಕ್‌ನ ಹಿರಿಯ ಭಯೋತ್ಪಾದಕನನ್ನು ಕಳುಹಿಸಲು ಸಿದ್ಧತೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.
ಜಮ್ಮು ಮತ್ತು ಕಾಶ್ಮೀರದ ಗಡಿಭಾಗದಲ್ಲಿ ಸಕ್ರಿಯವಾಗಿದ್ದ ಲಷ್ಕರ್– ಇ –ತೊಯಬಾ, ಜೈಷ್ ಇ ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳ ನಾಯಕತ್ವವನ್ನು ಭದ್ರತಾ ಪಡೆಗಳು ಇತ್ತೀಚಿನ ವರ್ಷಗಳಲ್ಲಿ ನಿರ್ಮೂಲನೆ ಮಾಡಿದ್ದವು.
ಮೂಲಗಳ ಪ್ರಕಾರ, 30 ವರ್ಷ ಆಸುಪಾಸಿನಲ್ಲಿರುವ ಈ ಹಿಂದೆ ಕಣಿವೆ ರಾಜ್ಯದಲ್ಲಿ ಕಾರ್ಯಚಟುವಟಿಕೆಯಲ್ಲಿ ಭಾಗಿಯಾಗಿದ್ದ ಪಾಕಿಸ್ತಾನದ ಉಗ್ರರನ್ನು, ಸಂಘಟನೆಗಳ ನಾಯಕತ್ವವನ್ನು ವಹಿಸಿಕೊಳ್ಳಲು ಕಳುಹಿಸಲಾಗುತ್ತಿದೆ.
‘ಛೋಟಾ ವಲೀದ್’ ಎಂಬ ಅಡ್ಡಹೆಸರುಳ್ಳ ಪಾಕಿಸ್ತಾನದ ಉಗ್ರ ಈ ಪೈಕಿ ಒಬ್ಬ ಎಂದು ಹೇಳಲಾಗಿದೆ. ಈತ ಶ್ರೀನಗರದಲ್ಲಿ ಕಳೆದ ವಾರ ಅಲ್ಪಸಂಖ್ಯಾತ ಸಮುದಾಯದವರ ಮೇಲೆ ನಡೆದಿದ್ದ ದಾಳಿ ಕೃತ್ಯದ ಸೂತ್ರಧಾರಿಯಾಗಿದ್ದ ಎಂದೂ ಹೇಳಲಾಗಿದೆ.
‘ಛೋಟಾ ವಲೀದ್’ ಕಳೆದ ತಿಂಗಳಷ್ಟೇ ಕಾಶ್ಮಿರಕ್ಕೆ ನುಸುಳಿದ್ದಾನೆ. ಈತನಲ್ಲದೇ, ಇನ್ನೂ ಕೆಲ ಪಾಕ್ ಉಗ್ರರು ಕಣಿವೆ ರಾಜ್ಯಕ್ಕೆ ಈಚಿನ ದಿನಗಳಲ್ಲಿ ನುಸುಳಿದ್ದು, ಉತ್ತರ ಕಾಶ್ಮೀರದ ಅರಣ್ಯ ಭಾಗದಲ್ಲಿ ಅಡಗಿಕೊಂಡಿರಬಹುದು’ ಎಂದು ಮೂಲಗಳು ವಿವರಿಸಿವೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಛೋಟಾ ವಲೀದ್ ಮತ್ತು ಇತರೆ ಕೆಲ ಪಾಕಿಸ್ತಾನದ ಉಗ್ರರು ಸಕ್ರಿಯರಾಗಿದ್ದು, ಈಗಾಗಲೇ ಕೆಲ ದಾಳಿಯನ್ನು ನಡೆಸಿದ್ದಾರೆ. ಈಗ ಸ್ಥಳೀಯವಾಗಿ ಸಕ್ರಿಯರಾಗಿರುವ ಉಗ್ರರಲ್ಲಿ ಯಾರೊಬ್ಬರೂ ಬುರ‍್ರಾನ್ ವಾನಿ, ಸಬ್ಜರ್ ಭಟ್, ರಿಯಾಜ್ ನೈಕೂ, ಅಬ್ಬಾಸ್ ಶೇಖ್‌ರಂತೆ ‘ಹೆಸರಾಗಿಲ್ಲ’. ‘ಕಾಶ್ಮೀರದಲ್ಲಿ ಚಟುವಟಿಕೆ ನಡೆಸಿದ ಅನುಭವವುಳ್ಳ ಪಾಕಿಸ್ತಾನದ ಉಗ್ರರು ಈಗ ನಾಯಕತ್ವ ವಹಿಸಿಕೊಳ್ಳುತ್ತಿರುವುದು ಹೆಚ್ಚು ಅಪಾಯಕಾರಿ ಮುನ್ಸೂಚನೆಯಾಗಿದೆ’ ಎಂದರು.
ನಾಗರಿಕರನ್ನು ಗುರಿಯಾಗಿಸಿ ದಾಳಿ ನಡೆಸಬೇಕು ಎಂದು ಸ್ಥಳೀಯ ನಾಯಕರಿಗೆ ಈ ಚಟುವಟಿಕೆ ನಿಯಂತ್ರಿಸುವ ಪಾಕ್‌ನವರಿಂದ ಒತ್ತಡವಿದೆ. ಮುಖ್ಯವಾಗಿ ಅಲ್ಪಸಂಖ್ಯಾತ ಸಮುದಾಯವರನ್ನು ಗುರಿಯಾಗಿಸಿ ದಾಳಿ ನಡೆಸಬೇಕು ಎಂಬ ಒತ್ತಡವಿದೆ. ಇದಕ್ಕೆ ಸ್ಥಳೀಯರು ಹಿಂಜರಿದ ಕಾರಣ ಛೋಟಾ ವಲೀದ್ ನಂತಹ ಉಗ್ರರನ್ನು ಕಳುಹಿಸಲಾಗುತ್ತಿದೆ ಎಂದೂ ಅಧಿಕಾರಿ ವಿವರಿಸಿದರು.
ಕಳೆದ ಎರಡು ತಿಂಗಳಲ್ಲಿನ ಮಾಧ್ಯಮಗಳ ವರದಿಗಳ ಪ್ರಕಾರ, ಪಾಕ್ ಆಕ್ರಮಿತ ಕಾಶ್ಮೀರ ಭಾಗದಿಂದ ಉಗ್ರರ 4–5 ಸಂಘಟನೆಗಳು ಗಡಿಯೊಳಗೆ ನುಸುಳಿವೆ. ಪ್ರತಿ ತಂಡದಲ್ಲಿಯೂ ನಾಲ್ಕರಿಂದ ಆರು ಮಂದಿ ಉಗ್ರಗಾಮಿಗಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಗಡಿಭಾಗದಲ್ಲಿ ಸಕ್ರಿಯವಾಗಿದ್ದ ಲಷ್ಕರ್– ಇ –ತೊಯಬಾ, ಜೈಷ್ ಇ ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳ ನಾಯಕತ್ವವನ್ನು ಭದ್ರತಾ ಪಡೆಗಳು ಇತ್ತೀಚಿನ ವರ್ಷಗಳಲ್ಲಿ ನಿರ್ಮೂಲನೆ ಮಾಡಿದ್ದವು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.