ADVERTISEMENT

ಜಮ್ಮು–ಕಾಶ್ಮೀರ: ಎನ್‌ಕೌಂಟರ್‌ನಲ್ಲಿ ಇಬ್ಬರು ಸೈನಿಕರು ಹುತಾತ್ಮ

ನವದೆಹಲಿ (ಪಿಟಿಐ):
Published 15 ಅಕ್ಟೋಬರ್ 2021, 14:37 IST
Last Updated 15 ಅಕ್ಟೋಬರ್ 2021, 14:37 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜಮ್ಮು-ಕಾಶ್ಮೀರ: ‘ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆಯ ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ’ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ.

ರೈಫಲ್ ಮೆನ್ ವಿಕ್ರಮ್ ಸಿಂಗ್ ನೇಗಿ (26) ಮತ್ತು ಯೋಗಂಬರ್ ಸಿಂಗ್ (27) ಹುತಾತ್ಮರಾದವರು. ಪೂಂಚ್ ಜಿಲ್ಲೆಯ ಮೆಂಧಾರ್ ಉಪ ವಿಭಾಗದ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.

‘ಮೆಂಧಾರ್ ಉಪ ವಿಭಾಗದ ನರ್‌ಖಾಸ್‌ ಅರಣ್ಯದ ಸಾಮಾನ್ಯ ಪ್ರದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಗುರುವಾರ ಸಂಜೆ ಸೇನಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆಯಿತು. ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಸೈನಿಕರು ಸಾವಿಗೀಡಾದರು’ ಎಂದು ರಕ್ಷಣಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೇಳಿದರು.

ADVERTISEMENT

ರೈಫಲ್‌ ಮೆನ್ ವಿಕ್ರಂ ಸಿಂಗ್ ನೇಗಿ ಉತ್ತರಾಖಂಡದ ತೆಹ್ರಿ ಗರ್ವಾಲ್ ಜಿಲ್ಲೆಯ ವಿಮನ್‌ ಗ್ರಾಮದ ನಿವಾಸಿ. ರೈಫಲ್‌ ಮೆನ್ ಯೋಗಬಂರ್ ಸಿಂಗ್ ಚಾಮೋಲಿ ಜಿಲ್ಲೆಯ ಸಂಕರಿ ಗ್ರಾಮದ ನಿವಾಸಿ. ಕರ್ತವ್ಯದ ವೇಳೆ ಇಬ್ಬರೂ ತೋರಿದ ಧೈರ್ಯ ಅಸಾಧಾರಣವಾದದ್ದು. ಅವರ ಸರ್ವೋಚ್ಛ ತ್ಯಾಗಕ್ಕಾಗಿ ದೇಶವು ಅವರಿಗೆ ಎಂದಿಗೂ ಋಣಿಯಾಗಿರುತ್ತದೆ ’ ಎಂದು ಅವರು ತಿಳಿಸಿದ್ದಾರೆ.

ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಸೇನೆಯ ನಿಯೋಜಿತ ಕಿರಿಯ ಅಧಿಕಾರಿಯೊಬ್ಬರು ಕಾಣೆಯಾಗಿದ್ದು, ಅವರ ಪತ್ತೆ ಕಾರ್ಯ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಸಾರಾಂಶ

ಜಮ್ಮು: ‘ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆಯ ಇಬ್ಬರು ಸಿಬ್ಬಂದಿ ಹುತಾತ್ಮರಾಗಿದ್ದಾರೆ’ ಎಂದು ಶುಕ್ರವಾರ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.