ಕೋಲ್ಕತ್ತ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆಟದ ಮೈದಾನವನ್ನು ಅತಿಕ್ರಮಣ ಮಾಡಲು ಯತ್ನಿಸಿದವರಿಗೆ ಮುಂಗೈ ಕತ್ತರಿಸುವುದಾಗಿ ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕರೊಬ್ಬರು ಬೆದರಿಕೆ ಹಾಕಿರುವ ಘಟನೆ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
ಕಮರ್‌ಹಟಿ ಕ್ಷೇತ್ರದ ಶಾಸಕ ಮದನ್ ಮಿತ್ರಾ ಹೀಗೆ ಬೆದರಿಕೆ ಹಾಕಿದ್ದು, ಬಳಿಕ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ‘ಮಾಜಿ ಕ್ರೀಡಾ ಸಚಿವರೂ ಆದ ಮಿತ್ರಾ, ಕೆಲವರು ಆಟದ ಮೈದಾನದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದರು. ಈ ಮೈದಾನವನ್ನು ನಾನು, ಸಂಸದ ಸೇರಿ ಅಭಿವೃದ್ಧಿ ಪಡಿಸಲು ನಿರ್ಧರಿಸಿದ್ದೆವು’ ಎಂದು ತಿಳಿಸಿದರು.
‘ನನ್ನನ್ನು ಖರೀದಿಸಬಹುದು ಎಂದು ಅವರು ಭಾವಿಸಿದ್ದರೆ ತಪ್ಪು. ಇದು, ಅವರಿಗೆ ನನ್ನ ಕಡೆಯ ಎಚ್ಚರಿಕೆ. ನನ್ನತ್ತ ಒಂದು ಬೆರಳು ತೋರಿಸಿದರೂ, ಅವರ ಮುಂಗೈಯನ್ನೇ ಕತ್ತರಿಸುತ್ತೇನೆ. ಅಗತ್ಯಬಿದ್ದರೆ ಈ ಕುರಿತು ಮುಖ್ಯಮಂತ್ರಿ ಅವರಿಗೂ ದೂರು ನೀಡುತ್ತೇನೆ’ ಎಂದು ಮಿತ್ರಾ ಅವರು ಫೇಸ್‌ಬುಕ್ ಲೈವ್ ಕಾರ್ಯಕ್ರಮದಲ್ಲಿ ಹೇಳಿದರು.
‘ಅತಿಕ್ರಮಣ ಯತ್ನ ಕುರಿತಂತೆ ಮೂವರ ಬಗ್ಗೆ ಶಂಕೆ ಇದೆ. ಅವರ ವಿರುದ್ಧ ಪೊಲೀಸರಿಗೆ ದೂರು ನೀಡುತ್ತೇನೆ. ಪೊಲೀಸರು ಯಾವುದೇ ಕ್ರಮ ಜರುಗಿಸದೇ ಇದ್ದರೆ, ಜನರೊಂದಿಗೆ ಸೇರಿ ಹೋರಾಟ ನಡೆಸುತ್ತೇನೆ’ ಎಂದು ಅವರು ತಿಳಿಸಿದರು.
‘ನನ್ನನ್ನು ಖರೀದಿಸಬಹುದು ಎಂದು ಅವರು ಭಾವಿಸಿದ್ದರೆ ತಪ್ಪು. ಇದು, ಅವರಿಗೆ ನನ್ನ ಕಡೆಯ ಎಚ್ಚರಿಕೆ. ನನ್ನತ್ತ ಒಂದು ಬೆರಳು ತೋರಿಸಿದರೂ, ಅವರ ಮುಂಗೈಯನ್ನೇ ಕತ್ತರಿಸುತ್ತೇನೆ. ಅಗತ್ಯಬಿದ್ದರೆ ಈ ಕುರಿತು ಮುಖ್ಯಮಂತ್ರಿ ಅವರಿಗೂ ದೂರು ನೀಡುತ್ತೇನೆ’ ಎಂದು ಮಿತ್ರಾ ಅವರು ಫೇಸ್‌ಬುಕ್ ಲೈವ್ ಕಾರ್ಯಕ್ರಮದಲ್ಲಿ ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.