ADVERTISEMENT

ಗರ್ಭಪಾತ ಪ್ರಕರಣ ಜಾಲ ಕುರಿತು ಸಮಗ್ರ ತನಿಖೆ–ಮಹಾರಾಷ್ಟ್ರ ಗೃಹ ಸಚಿವ

​ಪ್ರಜಾವಾಣಿ ವಾರ್ತೆ
Published 16 ಜನವರಿ 2022, 14:53 IST
Last Updated 16 ಜನವರಿ 2022, 14:53 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಮಹಾರಾಷ್ಟ್ರದ ವಾರ್ಧಾದಲ್ಲಿ ಬೆಳಕಿಗೆ ಬಂದಿರುವ ಗರ್ಭಪಾತ ಪ್ರಕರಣಗಳ ಕುರಿತು ಜಾಲದ ಬಗ್ಗೆ ಸಮಗ್ರ ತನಿಖೆ ನಡೆಸಲಿದ್ದು, ಭಾಗಿಯಾಗಿರುವ ಯಾರೊಬ್ಬರೂ ಶಿಸ್ತುಕ್ರಮದಿಂದ ಪಾರಾಗಲು ಅವಕಾಶ ನೀಡುವುದಿಲ್ಲ ಎಂದು ರಾಜ್ಯದ ಗೃಹ ಸಚಿವ ದಿಲೀಪ್‌ ವಾಲ್ಸೆ ಪಾಟೀಲ್‌ ಅವರು ಹೇಳಿದ್ದಾರೆ.

ಇದೊಂದು ಗಂಭೀರ ಹಾಗೂ ದಿಗ್ಭ್ರಮೆ ಮೂಡಿಸುವ ಘಟನೆ. ಯಾರನ್ನೂ ಬಿಡುವುದಿಲ್ಲ. ಮಹಾರಾಷ್ಟ್ರ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಲಿದ್ದಾರೆ ಎಂದು ತಿಳಿಸಿದರು.

ವೈದ್ಯಕೀಯ ಗರ್ಭಪಾತ ಮತ್ತು ಗರ್ಭಧಾರಣೆ ಕಾಯ್ದೆ 1971 ಮತ್ತು ಐಪಿಸಿ ಕಾಯ್ದೆ, ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ತಡೆ ಕಾಯ್ದೆಯನ್ವಯ ಪ್ರಕರಣ ದಾಖಲಾಗಿದೆ.ನಾಲ್ವರನ್ನು ಬಂಧಿಸಿದ್ದು, ಇನ್ನೊಬ್ಬನನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಲಾಗಿದೆ. ಸಂಬಂಧಿತ ಆಸ್ಪತ್ರೆಯ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.

ADVERTISEMENT
ಸಾರಾಂಶ

ಇದೊಂದು ಗಂಭೀರ ಹಾಗೂ ದಿಗ್ಭ್ರಮೆ ಮೂಡಿಸುವ ಘಟನೆ. ಯಾರನ್ನು ಬಿಡುವುದಿಲ್ಲ. ಮಹಾರಾಷ್ಟ್ರ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಲಿದ್ದಾರೆ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.