PHOTOS: ಹಲವು ರಾಜ್ಯಗಳಲ್ಲಿ ತಾಪಮಾನ ಏರಿಕೆ, ಬಿರು ಬಿಸಿಲಿಗೆ ತತ್ತರಿಸಿದ ಜನ
Published 28 ಏಪ್ರಿಲ್ 2022, 11:38 IST Last Updated 28 ಏಪ್ರಿಲ್ 2022, 11:38 IST ರಾಷ್ಟ್ರ ರಾಜಧಾನಿ ದೆಹಲಿ, ಕರ್ನಾಟಕ, ಒಡಿಶಾ, ಮಧ್ಯ ಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣ, ಜಮ್ಮು –ಕಾಶ್ಮೀರ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಉಷ್ಣಾಂಶ ಏರಿಕೆಯಾಗಿದೆ. ಈ ರಾಜ್ಯಗಳಲ್ಲಿ ಪ್ರತಿನಿತ್ಯ 40ರಿಂದ 44 ಡಿಗ್ರಿವರೆಗೂ ತಾಪಮಾನ ದಾಖಲಾಗುತ್ತಿದೆ.
ತಾಪಮಾನ ಏರಿಕೆ ಆಗಿರುವುರಿಂದ ತಂಪು ಹವೆ ಕಡಿಮೆಯಾಗುತ್ತಿದೆ. ಮಹಿಳೆಯರು ತಲೆ ಮೇಲೆ ದುಪ್ಪಟ್ಟಾ ಹಾಕಿಕೊಂಡು ಓಡಾಡುತ್ತಿದ್ದಾರೆ. ವೃದ್ಧರು ಮತ್ತು ಮಕ್ಕಳು ಗಿಡ, ಮರಗಳ ನೆರಳಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ. ಒಮ್ಮೆ ಹೊರಗೆ ಸುತ್ತಾಡಿ ಮನೆಗೆ ಬಂದರೆ ಜನರನ್ನು ‘ಸುಸ್ತು’ ಕಾಡುತ್ತಿದೆ.
ಬಿಸಿಲು ಹೆಚ್ಚಿರುವುದರಿಂದ ಪ್ರಾಣಿಗಳು ಮತ್ತು ಪಕ್ಷಿ ಸಂಕುಲ ಅಪಾಯಕ್ಕೆ ಸಿಲುಕಿವೆ.
ಕೃಷ್ಣಾ ನದಿ ನೀರಿನಲ್ಲಿ ಈಜಾಟವಾಡುತ್ತಿರುವ ಹುಡುಗರು –ಪಿಟಿಐ ಚಿತ್ರ ದೆಹಲಿಯಲ್ಲಿ ಜನರು ನೀರಿನ ಕಾರಂಜಿಯಲ್ಲಿ ಸ್ನಾನ ಮಾಡುತ್ತಿರುವ ದೃಶ್ಯ –ಪಿಟಿಐ ಚಿತ್ರ ಬಿಸಿಲಿನ ಬೇಗೆಯಿಂದ ತಲ್ಲಣಿಸಿರುವ ಮಹಿಳೆಯರು ತಲೆ ಮೇಲೆ ಬಟ್ಟೆ ಹೊದ್ದುಕೊಂಡಿರುವುದು -ಪಿಟಿಐ ಚಿತ್ರದೆಹಲಿಯಲ್ಲಿ ವೃದ್ಧರೊಬ್ಬರು ಬಾಯಾರಿಕೆ ತಣಿಸಿಕೊಳ್ಳುತ್ತಿರುವ ದೃಶ್ಯ ಕಂಡು ಬಂತು –ಪಿಟಿಐ ಚಿತ್ರ ಬಿಸಿಲಿನ ಬೇಗೆಯಿಂದ ತಲ್ಲಣಿಸಿರುವ ಜನರು ಮುಖ ಮತ್ತು ತಲೆಯನ್ನು ಬಟ್ಟೆಯಿಂದ ಹೊದ್ದುಕೊಂಡಿರುವುದು -ಪಿಟಿಐ ಚಿತ್ರಬಿಸಿಲಿನಿಂದ ರಕ್ಷಣೆ ಪಡೆಯಲು ಸಾರ್ವಜನಿಕರು ಕೊಡೆ ಹಿಡಿದು ಸಾಗಿದರು –ಪಿಟಿಐ ಚಿತ್ರ ಬಿಸಿಲಿನಿಂದ ರಕ್ಷಣೆ ಪಡೆಯಲು ಸಾರ್ವಜನಿಕರು ತಲೆ ಮೇಲೆ ಬಟ್ಟೆ ಹೊದ್ದುಕೊಂಡಿರುವುದು -ಪಿಟಿಐ ಚಿತ್ರದುರ್ಗದ ಐತಿಹಾಸಿಕ ಕಲ್ಲಿನ ಕೋಟೆಯಲ್ಲಿ ಕೋತಿಯೊಂದು ನಲ್ಲಿಯಲ್ಲಿ ನೀರು ಕುಡಿಯುತ್ತಿರುವ ದೃಶ್ಯ ಕ್ಯಾಮೆರಾಗೆ ಸೆರೆಯಾಗಿದ್ದು ಹೀಗೆ. –ಪ್ರಜಾವಾಣಿ ಚಿತ್ರ/ ವಿ.ಚಂದ್ರಪ್ಪಕೋಲಾರದ ಟಿ.ಚನ್ನಯ್ಯ ರಂಗಮಂದಿರ ಮುಂಭಾಗದ ಅಂಗಡಿಯಲ್ಲಿ ಕಲ್ಲಂಗಡಿ ಹಣ್ಣು ತಿನ್ನುತ್ತಿರುವ ಸಾರ್ವಜನಿಕರುಮೈಸೂರಿನಲ್ಲಿ ಬಿರುಬಿಸಿಲನ್ನು ತಡೆಯಲಾಗದ ರಸ್ತೆಬದಿ ವ್ಯಾಪಾರಿಗಳು ಕೊಡೆ ಹಿಡಿದು ವ್ಯಾಪಾರ ಮಾಡಿದ ದೃಶ್ಯ ಬುಧವಾರ ಕಂಡು ಬಂತುರಾಜ್ಯಸ್ಥಾನದಲ್ಲಿ ಸುಡುವ ಬಿಸಿನಲ್ಲಿ ಮಹಿಳೆಯರು ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ದೃಶ್ಯ ದೆಹಲಿಯ ರಾಜ್ಘಾಟ್ನಲ್ಲಿ ಪ್ರವಾಸಿಗರು ನಲ್ಲಿಗಳಲ್ಲಿ ನೀರು ಕುಡಿಯುತ್ತಿರುವ ದೃಶ್ಯ ಕಂಡುಬಂತು –ಪಿಟಿಐ ಚಿತ್ರ ಅಮೃತಸರದ ನದಿಯೊಂದರಲ್ಲಿ ಬಾಲಕ ಈಜಾಟವಾಡುತ್ತಿರುವ ದೃಶ್ಯ –ಪಿಟಿಐ ಚಿತ್ರ