ಮುಂಬೈ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಜತೆಗೆ ಎನ್‌ಸಿಪಿಯ ಸೀಟು ಹಂಚಿಕೆ ಮಾತುಕತೆ ಪ್ರಗತಿಯಲ್ಲಿದೆ ಎಂದು ಎನ್‌ಸಿಪಿ ವಕ್ತಾರ ನವಾಬ್ ಮಲಿಕ್ ಶನಿವಾರ ಹೇಳಿದ್ಧಾರೆ.
ಎನ್‌ಸಿಪಿಗೆ ಒಂದು ಕ್ಷೇತ್ರ ಬಿಟ್ಟುಕೊಡುವುದು ಅಂತಿಮವಾಗಿದೆ. ಇತರ ಕ್ಷೇತ್ರಗಳ ಬಗ್ಗೆ ಮಾತುಕತೆ ಮುಂದುವರಿದಿದೆ ಎಂದು ಅವರು ತಿಳಿಸಿದ್ಧಾರೆ.
ಉತ್ತರ ಪ್ರದೇಶದಲ್ಲಿ ಬಿಜೆಪಿಯ ಸ್ಥಿತಿ 1993ರಲ್ಲಿ ಇದ್ದ ಹಾಗೆ ಈಗ ಇದೆ. 1993ರಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿತ್ತು. ಮುಲಾಯಂ ಸಿಂಗ್ ನೇತೃತ್ವದ ಎಸ್‌ಪಿ ಮತ್ತು ಕಾನ್ಶೀರಾಂ ನೇತೃತ್ವದ ಬಿಎಸ್‌ಪಿ ಮೈತ್ರಿ ಮಾಡಿಕೊಂಡಿದ್ದವು. ಚುನಾವಣೆಯಲ್ಲಿ ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ, ಇತರ ಪಕ್ಷಗಳ ಬೆಂಬಲದಲ್ಲಿ ಎಸ್‌ಪಿ–ಬಿಎಸ್‌ಪಿ ಮೈತ್ರಿಕೂಟವು ಸರ್ಕಾರ ರಚಿಸಿತ್ತು.
‘ಉತ್ತರ ಪ್ರದೇಶದ ಜನರು ಬಿಜೆಪಿ ಶೈಲಿಯ ರಾಜಕಾರಣವನ್ನು ತಿರಸ್ಕರಿಸಿದ್ಧಾರೆ. ದಲಿತರು, ಹಿಂದುಳಿದ ವರ್ಗಗಳ ಜನರು, ರೈತರು, ಕಾರ್ಮಿಕರು ಎಲ್ಲರೂ ಬಿಜೆಪಿಯಿಂದ ದೂರ ಸರಿದಿದ್ದಾರೆ’ ಎಂದು ಮಲಿಕ್ ಹೇಳಿದ್ದಾರೆ.
ಚುನಾವಣೆ ಘೋಷಣೆ ಆಗಿರುವ ಇತರ ರಾಜ್ಯಗಳ ಮೈತ್ರಿ ಬಗ್ಗೆಯೂ ಮಲಿಕ್ ಮಾತನಾಡಿದ್ದಾರೆ. ಮಣಿಪುರದಲ್ಲಿ ಕಾಂಗ್ರೆಸ್ ಜತೆಗೆ ಎನ್‌ಸಿಪಿ ಮೈತ್ರಿ ಮಾಡಿಕೊಂಡಿದೆ. ಗೋವಾದಲ್ಲಿ ಸೀಟು ಹಂಚಿಕೆ ಮಾತುಕತೆಯಲ್ಲಿ ಯಾವುದೇ ಪ್ರಗತಿ ಆಗಿಲ್ಲ. ಹಾಗಾಗಿ, ಎನ್‌ಸಿಪಿ ಏಕಾಂಗಿಯಾಗಿಯೇ ಸ್ಪರ್ಧಿಸುವ ಬಗ್ಗೆ ಯೋಚಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಮುಂಬೈ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಜತೆಗೆ ಎನ್‌ಸಿಪಿಯ ಸೀಟು ಹಂಚಿಕೆ ಮಾತುಕತೆ ಪ್ರಗತಿಯಲ್ಲಿದೆ ಎಂದು ಎನ್‌ಸಿಪಿ ವಕ್ತಾರ ನವಾಬ್ ಮಲಿಕ್ ಶನಿವಾರ ಹೇಳಿದ್ಧಾರೆ. ಎನ್‌ಸಿಪಿಗೆ ಒಂದು ಕ್ಷೇತ್ರ ಬಿಟ್ಟುಕೊಡುವುದು ಅಂತಿಮವಾಗಿದೆ. ಇತರ ಕ್ಷೇತ್ರಗಳ ಬಗ್ಗೆ ಮಾತುಕತೆ ಮುಂದುವರಿದಿದೆ ಎಂದು ಅವರು ತಿಳಿಸಿದ್ಧಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.