ADVERTISEMENT

ಉತ್ತರಾಖಂಡದಲ್ಲಿ ಭಾರಿ ಮಳೆಯ ಸೂಚನೆ: ಶಾಲೆ–ಕಾಲೇಜು ರಜೆ, ಚಾರಣಕ್ಕೆ ನಿಷೇಧ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 3:49 IST
Last Updated 18 ಅಕ್ಟೋಬರ್ 2021, 3:49 IST
ಉತ್ತರಾಖಂಡದ ಸೊಬಗು
ಉತ್ತರಾಖಂಡದ ಸೊಬಗು   

ಡೆಹ್ರಾಡೂನ್‌: ಉತ್ತರಾಖಂಡದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಸೋಮವಾರ ರಾಜ್ಯದ ಬಹುತೇಕ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಪರ್ವತಾರೋಹಣ, ಶಿಬಿರ ಮತ್ತು ಚಾರಣದಂಥ ಚಟುವಟಿಕೆಗಳನ್ನು ಮಂಗಳವಾರದವರೆಗೆ ನಿಷೇಧಿಸಲಾಗಿದೆ.

ರಾಜ್ಯದ 13 ಜಿಲ್ಲೆಗಳಲ್ಲಿ ಸೋಮವಾರ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರ ಜಿಲ್ಲಾಡಳಿತಗಳು ಈ ಆದೇಶ ಹೊರಡಿಸಿವೆ. ಅದರಂತೆ 13 ಜಿಲ್ಲೆಗಳಲ್ಲಿಯ ಶಾಲೆ, ಕಾಲೇಜು ಮತ್ತು ಅಂಗನವಾಡಿ ಕೇಂದ್ರಗಳು ತೆರೆದಿರುವುದಿಲ್ಲ.

ಇಂದು ಭಾರಿ ಮಳೆಯಾಗುವ ಮುನ್ಸೂಚನೆಯಿಂದಾಗಿ 'ರೆಡ್‌ ಅಲರ್ಟ್‌' ಘೋಷಣೆಯಾಗಿದೆ ಹಾಗೂ ಮಂಗಳವಾರಕ್ಕೆ ಮಳೆಯ ಪ್ರಮಾಣ ಸ್ವಲ್ಪ ಮಟ್ಟಿಗೆ ತಗ್ಗಲಿದ್ದು, ಹವಾಮಾನ ಇಲಾಖೆಯು 'ಆರೆಂಜ್‌ ಅಲರ್ಟ್‌' ಘೋಷಿಸಿದೆ. 

ADVERTISEMENT

ಅ.19ರ ವರೆಗೆ ಚಮೋಲಿ ಜಿಲ್ಲೆಯ ನಂದಾದೇವಿ ರಾಷ್ಟ್ರೀಯ ಉದ್ಯಾನ ಮತ್ತು ಗೋಪೇಶ್ವರದ ಸಂಪೂರ್ಣ ಅರಣ್ಯ ಪ್ರದೇಶದಲ್ಲಿ ಚಾರಣ, ಪರ್ವಾತಾರೋಹಣದಂಥ ಚಟುವಟಿಕೆಯನ್ನು ಜಿಲ್ಲಾಡಳಿತ ನಿಷೇಧಿಸಿದೆ.

ಡೆಹ್ರಾಡೂನ್‌ನಲ್ಲಿ ಇದೇ 18, 19ರಂದು ನಡೆಯಬೇಕಿದ್ದ ಜಿಲ್ಲಾಮಟ್ಟದ ಖೇಲ್ ಮಹಾಕುಂಭವನ್ನು ಅ.24 ಮತ್ತು 25ಕ್ಕೆ ಮುಂದೂಡಲಾಗಿದೆ.

ಸಾರಾಂಶ

ಡೆಹ್ರಾಡೂನ್‌: ಉತ್ತರಾಖಂಡದಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಸೋಮವಾರ ರಾಜ್ಯದ ಬಹುತೇಕ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಪರ್ವತಾರೋಹಣ, ಶಿಬಿರ ಮತ್ತು ಚಾರಣದಂಥ ಚಟುವಟಿಕೆಗಳನ್ನು ಮಂಗಳವಾರದವರೆಗೆ ನಿಷೇಧಿಸಲಾಗಿದೆ. ರಾಜ್ಯದ 13 ಜಿಲ್ಲೆಗಳಲ್ಲಿ ಸೋಮವಾರ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರ ಜಿಲ್ಲಾಡಳಿತಗಳು ಈ ಆದೇಶ ಹೊರಡಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.