ನವದೆಹಲಿ: ವಿನಾಯಕ ದಾಮೋದರ ಸಾವರ್ಕರ್ ಅವರನ್ನು ಟೀಕಿಸುವವರ ವಿರುದ್ಧ ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹರಿಹಾಯ್ದಿದ್ದಾರೆ. ಸ್ವಾತಂತ್ರ್ಯದ ನಂತರ ಸಂಘಟಿತ ಪ್ರಚಾರದ ಮೂಲಕ ಸ್ವಾತಂತ್ರ್ಯ ಹೋರಾಟಗಾರನನ್ನು ಅಪಖ್ಯಾತಿಗೆ ಗುರಿಯಾಗಿಸಲಾಗಿದೆ ಎಂದು ಹೇಳಿದ್ದಾರೆ.
ನವದೆಹಲಿಯಲ್ಲಿ ಮಂಗಳವಾರ ಮಾಹಿತಿ ಕಮಿಷನರ್ ಉದಯ್ ಮಹುರ್ಕರ್ ಮತ್ತು ಚಿರಾಯು ಪಂಡಿತ್ ಅವರ 'ವೀರ್ ಸಾವರ್ಕರ್: ದಿ ಮ್ಯಾನ್ ಹೂ ಕುಡ್ ಹ್ಯಾವ್ ಪ್ರಿವೆಂಟೆಡ್ ಪಾರ್ಟಿಷನ್' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮೋಹನ್ ಭಾಗವತ್ ಮಾತನಾಡಿದರು.
ಸಾವರ್ಕರ್ ಅವರನ್ನು ಟೀಕಿಸುತ್ತಿರುವವರ ಮುಂದಿನ ಗುರಿ ಸ್ವಾಮಿ ವಿವೇಕಾನಂದ, ದಯಾನಂದ ಸರಸ್ವತಿ ಮತ್ತು ಸ್ವಾಮಿ ಅರಬಿಂದೊ ಆಗಿರಬಹುದು ಎಂದು ಮೋಹನ್ ಭಾಗವತ್ ಹೇಳಿದರು.
ನಮ್ಮ ಆಚರಣೆಯ ವಿಧಾನ ಬೇರೆಯಾಗಿದೆ, ಆದರೆ ನಮ್ಮ ಪೂರ್ವಜರು ಒಂದೇ. ಅವರು ತುಂಬಾ ರಾಷ್ಟ್ರಪ್ರೇಮಿಗಳು. ದೇಶ ವಿಭಜನೆ ಸಂದರ್ಭ ಪಾಕಿಸ್ತಾನಕ್ಕೆ ಹೋದವರಿಗೆ ಅಲ್ಲಿ ಮರ್ಯಾದೆ ಸಿಗುತ್ತಿಲ್ಲ. ಅಂದು ನಮಗೆ ದೊಡ್ಡ ಹಿನ್ನಡೆಯಾಗಿದ್ದು ಹಿಂದು-ಮುಸ್ಲಿಂ ಏಕತೆಯನ್ನು ಕಾಪಾಡುವಲ್ಲಿ ವಿಫಲರಾಗಿದ್ದು ಮತ್ತು ಖಿಲಾಫತ್ ಚಳುವಳಿಗೆ ಸೇರ್ಪಡೆಯಾಗಿದ್ದು ಎಂದು ಭಾಗವತ್ ತಿಳಿಸಿದರು.
ವಿನಾಯಕ ದಾಮೋದರ ಸಾವರ್ಕರ್ ಅವರನ್ನು ಟೀಕಿಸುವವರ ವಿರುದ್ಧ ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹರಿಹಾಯ್ದಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.