ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ರೋಹಿತ್ ವೇಮುಲ ಅವರ ಪುಣ್ಯತಿಥಿಯಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ರೋಹಿತ್ ಅವರು ಪ್ರತಿರೋಧದ ಸಂಕೇತ ಮತ್ತು ಅವರೊಬ್ಬ ನಾಯಕ ಎಂದು ಹೇಳಿದರು.
'ರೋಹಿತ್ ವೇಮುಲ ಅವರು ದಲಿತ ಎಂಬ ಗುರುತಿಗಾಗಿ ಅವರನ್ನು ತಾರತಮ್ಯ ಮತ್ತು ಅವಮಾನದಿಂದ ಹತ್ಯೆ ಮಾಡಲಾಗಿದೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.
'ವರ್ಷಗಳು ಕಳೆದರೂ, ಅವರು ಪ್ರತಿರೋಧದ ಸಂಕೇತವಾಗಿ ಮತ್ತು ಅವರ ಧೈರ್ಯಶಾಲಿ ತಾಯಿ ಭರವಸೆಯ ಸಂಕೇತವಾಗಿ ಉಳಿಯುತ್ತಾರೆ. ಕೊನೆಯವರೆಗೂ ಹೋರಾಡಿದ್ದಕ್ಕಾಗಿ, ಅನ್ಯಾಯಕ್ಕೊಳಗಾದ ನನ್ನ ಸಹೋದರ ರೋಹಿತ್ ನನ್ನ ನಾಯಕ' ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ 26 ವರ್ಷದ ದಲಿತ ವಿದ್ಯಾರ್ಥಿ ವೇಮುಲ, ತಮಗಾದ ಕಿರುಕುಳದಿಂದಾಗಿ ಜ.17, 2016 ರಂದು ಆತ್ಮಹತ್ಯೆ ಮಾಡಿಕೊಂಡರು. ಅವರ ಸಾವು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ಜಾತೀಯತೆಯ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾರಣವಾಯಿತು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ರೋಹಿತ್ ವೇಮುಲ ಅವರ ಪುಣ್ಯತಿಥಿಯಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ರೋಹಿತ್ ಅವರು ಪ್ರತಿರೋಧದ ಸಂಕೇತ ಮತ್ತು ಅವರೊಬ್ಬ ನಾಯಕ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.