ನವದೆಹಲಿ: ಪಂಜಾಬ್ ವಿಧಾನಸಭೆ ಚುನಾವಣೆಯ ಮತದಾನವನ್ನು ಫೆ. 14ರ ಬದಲು 20ಕ್ಕೆ ನಡೆಸಲು ಚುನಾವಣಾ ಆಯೋಗವು ಸೋಮವಾರ ನಿರ್ಧರಿಸಿದೆ.
ವಿಧಾನಸಭೆಗೆ ಮತದಾನ ಮತ್ತು ಉಪ ಚುನಾವಣೆ ಮತದಾನದ ದಿನಾಂಕವನ್ನು ಚುನಾವಣಾ ವೇಳಾಪಟ್ಟಿ ಪ್ರಕಟವಾದ ಬಳಿಕ ಬದಲಿಸಿರುವುದು ಇದೇ ಮೊದಲೇನೂ ಅಲ್ಲ ಎಂದು ಆಯೋಗದ ಮೂಲಗಳು ಹೇಳಿವೆ.
ಮಿಜೋರಾಂ ವಿಧಾನಸಭೆಗೆ 2013ರ ನವೆಂಬರ್‌ನಲ್ಲಿ ನಡೆಯಬೇಕಿದ್ದ ಮತದಾನದ ದಿನಾಂಕಗಳಲ್ಲಿ ಕೆಲವು ಬದಲಾವಣೆಗಳನ್ನು ಆಯೋಗವು 2013ರ ಅಕ್ಟೋಬರ್‌ನಲ್ಲಿ ಮಾಡಿತ್ತು. ಮಿಜೋರಾಂನಲ್ಲಿ 2014ರಲ್ಲಿ ನಡೆಯಬೇಕಿದ್ದ ವಿಧಾನಸಭೆ ಚುನಾವಣೆಯ ದಿನಾಂಕವನ್ನೂ ಬದಲಾಯಿಸಲಾಗಿತ್ತು.
ಉತ್ತರ ಪ್ರದೇಶ ವಿಧಾನಸಭೆಗೆ 2012ರ ಮಾರ್ಚ್‌ನಲ್ಲಿ ನಡೆಯಬೇಕಿದ್ದ ಮತದಾನದ ಕೆಲವು ದಿನಾಂಕಗಳನ್ನೂ ನಿರ್ದಿಷ್ಟ ಕಾರಣಗಳಿಗಾಗಿ ಬದಲಾಯಿಸಲಾಗಿತ್ತು. ಮತದಾರರ ಧಾರ್ಮಿಕ ನಂಬಿಕೆಗಳು ಮತ್ತು ಕಾನೂನು–ಸುವ್ಯವಸ್ಥೆ ಕಾರಣಗಳಿಗಾಗಿ ಮತದಾನ ದಿನಾಂಕಗಳನ್ನು ಬದಲಾಯಿಸಿದ ನಿದರ್ಶನಗಳು ಇವೆ.
ಪಂಜಾಬ್ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಲಭ್ಯವಿದ್ದ ಮಾಹಿತಿಯ ಆಧಾರದಲ್ಲಿ ಸಿದ್ಧಪಡಿಸಿ ಜನವರಿ 8ರಂದು ಪ್ರಕಟಿಸಲಾ
ಗಿತ್ತು. ಅದರಂತೆ, ಚುನಾವಣಾ ಅಧಿಸೂಚನೆಯನ್ನು ಜನವರಿ 21ರಂದು ಹೊರಡಿಸಬೇಕಿತ್ತು. ಆದರೆ, ಮತದಾನದ ದಿನಾಂಕವನ್ನು ಬದಲಿಸುವಂತೆ ರಾಜ್ಯ ಸರ್ಕಾರ, ರಾಜಕೀಯ ಪಕ್ಷಗಳು ಮತ್ತು ವಿವಿಧ ಸಂಘಟನೆಗಳು ಆಯೋಗವನ್ನು ಕೋರಿದ್ದವು. ಈ ಮನವಿಯ ಆಧಾರದಲ್ಲಿ ಮತದಾನದ ದಿನಾಂಕವನ್ನು ಬದಲಾಯಿಸಲಾಗಿದೆ ಎಂದು ಆಯೋಗದ ಪ್ರಕಟಣೆಯು ತಿಳಿಸಿದೆ.
ಈ ಹಿಂದಿನ ವೇಳಾಪಟ್ಟಿ ಪ್ರಕಾರ, ಉತ್ತರಾಖಂಡ, ಪಂಜಾಬ್ ಮತ್ತು ಗೋವಾ ವಿಧಾನಸಭೆಗೆ ಫೆ. 14ರಂದು ಒಂದೇ ಹಂತದಲ್ಲಿ ಮತದಾನ ನಡೆಯಬೇಕಿತ್ತು.
ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ, ಪಂಜಾಬ್ ಚುನಾವಣೆಯ ಅಧಿಸೂಚನೆಯನ್ನು ಜನವರಿ 25ರಂದ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಫೆ. 1 ಕೊನೆಯ ದಿನ. ಫೆ. 2ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂದಕ್ಕೆ ಪಡೆಯಲು ಫೆ. 4 ಕೊನೆಯ ದಿನ. ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್ ಮತ್ತು ಮಣಿಪುರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಮಾರ್ಚ್ 10ರಂದು ನಡೆಯಲಿದೆ.
ನವದೆಹಲಿ (ಪಿಟಿಐ): ಪಂಜಾಬ್ ವಿಧಾನಸಭೆ ಚುನಾವಣೆಯ ಮತದಾನವನ್ನು ಫೆ. 14ರ ಬದಲು 20ಕ್ಕೆ ನಡೆಸಲು ಚುನಾವಣಾ ಆಯೋಗವು ಸೋಮವಾರ ನಿರ್ಧರಿಸಿದೆ. ವಿಧಾನಸಭೆಗೆ ಮತದಾನ ಮತ್ತು ಉಪ ಚುನಾವಣೆ ಮತದಾನದ ದಿನಾಂಕವನ್ನು ಚುನಾವಣಾ ವೇಳಾಪಟ್ಟಿ ಪ್ರಕಟವಾದ ಬಳಿಕ ಬದಲಿಸಿರುವುದು ಇದೇ ಮೊದಲೇನೂ ಅಲ್ಲ ಎಂದು ಆಯೋಗದ ಮೂಲಗಳು ಹೇಳಿವೆ. ಮಿಜೋರಾಂ ವಿಧಾನಸಭೆಗೆ 2013ರ ನವೆಂಬರ್‌ನಲ್ಲಿ ನಡೆಯಬೇಕಿದ್ದ ಮತದಾನದ ದಿನಾಂಕಗಳಲ್ಲಿ ಕೆಲವು ಬದಲಾವಣೆಗಳನ್ನು ಆಯೋಗವು 2013ರ ಅಕ್ಟೋಬರ್‌ನಲ್ಲಿ ಮಾಡಿತ್ತು. ಮಿಜೋರಾಂನಲ್ಲಿ 2014ರಲ್ಲಿ ನಡೆಯಬೇಕಿದ್ದ ವಿಧಾನಸಭೆ ಚುನಾವಣೆಯ ದಿನಾಂಕವನ್ನೂ ಬದಲಾಯಿಸಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.