ADVERTISEMENT

ನವೆಂಬರ್‌ 5ರಂದು ಕೇದಾರನಾಥಕ್ಕೆ ಪ್ರಧಾನಿ ಮೋದಿ ಭೇಟಿ

ನವದೆಹಲಿ (ಪಿಟಿಐ):
Published 16 ಅಕ್ಟೋಬರ್ 2021, 10:38 IST
Last Updated 16 ಅಕ್ಟೋಬರ್ 2021, 10:38 IST
   

ಡೆಹ್ರಾಡೂನ್:‌ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್‌ 5ರಂದು ಕೇದಾರನಾಥಕ್ಕೆ ತೆರಳಲಿದ್ದು, ಕೇದಾರಪುರಿ ಪುನರ್ ನಿರ್ಮಾಣ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ರಿಷಿಕೇಶದಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಅಕ್ಟೋಬರ್‌ 7 ರಂದು ಭೇಟಿ ನೀಡಿ ಆಮ್ಲಜನಕ ಘಟಕದ ಉದ್ಘಾಟಿಸಿದ್ದರು. ಹೀಗಾಗಿ ಮೋದಿ ಅವರು ತಿಂಗಳ ಅವಧಿಯಲ್ಲಿ ಎರಡು ಬಾರಿ ಉತ್ತರಾಖಂಡ್‌ಗೆ ಆಗಮಿಸಿದಂತಾಗಲಿದೆ.

ಮೋದಿ ಭೇಟಿ ವಿಚಾರವನ್ನು ಖಚಿತಪಡಿಸಿರುವ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ, ಪ್ರಧಾನಿಯವರು ದೇವಾಲಯಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಅದೇರೀತಿ, ಆದಿ ಗುರು ಶಂಕರಾಚಾರ್ಯರ ಸಮಾಧಿ ಮರು ನಿರ್ಮಾಣ ಸೇರಿದಂತೆ ₹ 250 ಕೋಟಿ ವೆಚ್ಚದ ಕೇದಾರಪುರಿ ಪುನರ್‌ನಿರ್ಮಾಣ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ADVERTISEMENT
ಸಾರಾಂಶ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್‌ 5ರಂದು ಕೇದಾರನಾಥಕ್ಕೆ ತೆರಳಲಿದ್ದು, ಕೇದಾರ್‌ಪುರಿ ಪುನರ್ ನಿರ್ಮಾಣ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.