ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇದೇ 27 ರಂದು ಭಾರತ-ಮಧ್ಯ ಏಷ್ಯಾದ ಮೊದಲ ಶೃಂಗಸಭೆಯನ್ನು ವರ್ಚುವಲ್ ಸ್ವರೂಪದ ಮೂಲಕ ಆಯೋಜಿಸಿದ್ದಾರೆ.
ಈ ಸಂದರ್ಭದಲ್ಲಿ ವಿವಿಧ ದೇಶಗಳ ನಾಯಕರು ತಮ್ಮಲ್ಲಿನ ಬಾಂಧವ್ಯವನ್ನು ಮತ್ತಷ್ಟು ವಿಸ್ತರಿಸುವ ಮತ್ತು ಪ್ರಾದೇಶಿಕ ಭದ್ರತಾ ಪರಿಸ್ಥಿತಿಯನ್ನು ಕಾಪಾಡುವ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ವರ್ಚುವಲ್ ಶೃಂಗಸಭೆಯಲ್ಲಿ ಕಝಕಿಸ್ತಾನದ ಅಧ್ಯಕ್ಷರಾದ ಕಾಸಿಮ್-ಜೋಮಾರ್ಟ್ ಟೊಕಾಯೆವ್, ಉಜ್ಬೇಕಿಸ್ತಾನದ ಅಧ್ಯಕ್ಷ ಶವ್ಕತ್ ಮಿರ್ಜಿಯೊಯೆವ್, ತಜಿಕಿಸ್ತಾನದ ಅಧ್ಯಕ್ಷ ಎಮೋಮಾಲಿ ರಹ್ಮನ್, ತುರ್ಕಮೆನಿಸ್ತಾನದ ಅಧ್ಯಕ್ಷ ಗುರ್ಬಂಗುಲಿ ಬರ್ಡಿಮುಹಮೆಡೋವ್ ಮತ್ತು ಕಿರ್ಜಿಸ್ ರಿಪಬ್ಲಿಕ್‌ನ ಅಧ್ಯಕ್ಷ ಸಾದಿರ್ ಜಾಪರೋವ್ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಹೇಳಿಕೆಯಲ್ಲಿ ತಿಳಿಸಿದೆ.
ಶೃಂಗಸಭೆಯು, ಭಾರತದ ‘ವಿಸ್ತೃತ ನೆರೆಹೊರೆಯ’ ಭಾಗವಾಗಿರುವ ಮಧ್ಯ ಏಷ್ಯಾದ ದೇಶಗಳೊಂದಿಗೆ ಭಾರತದ ಬೆಳೆಯುತ್ತಿರುವ ಬಾಂಧವ್ಯದ ಪ್ರತಿಬಿಂಬವಾಗಿದೆ ಎಂದು ಎಂಇಎ ಹೇಳಿದೆ.
ಈ ಶೃಂಗಸಭೆಯು ಭಾರತ ಮತ್ತು ಮಧ್ಯ ಏಷ್ಯಾದ ದೇಶಗಳ ನಾಯಕರು ಸಮಗ್ರ ಮತ್ತು ನಿರಂತರವಾದ ಭಾರತ-ಮಧ್ಯ ಏಷ್ಯಾ ಪಾಲುದಾರಿಕೆಗೆ ನೀಡಿದ ಪ್ರಾಮುಖ್ಯತೆಯ ಸಂಕೇತವಾಗಿದೆ ಎಂದೂ ಹೇಳಿಕೆ ತಿಳಿಸಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜನವರಿ 27 ರಂದು ವರ್ಚುವಲ್ ಸ್ವರೂಪದಲ್ಲಿ ಮೊದಲ ಭಾರತ-ಮಧ್ಯ ಏಷ್ಯಾ ಶೃಂಗಸಭೆಯನ್ನು ಆಯೋಜಿಸಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.