ಶ್ರೀನಗರ: ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಸಂಪರ್ಕ ಹೊಂದಿದ ಆರೋಪದಲ್ಲಿ 400ಕ್ಕೂ ಹೆಚ್ಚು ಶಂಕಿತರನ್ನು ಭದ್ರತಾ ಪಡೆಗಳು ಬಂಧಿಸಿರುವುದಾಗಿ ಮೂಲಗಳು ತಿಳಿಸಿವೆ. ಶ್ರೀನಗರದಲ್ಲಿ ಇತ್ತೀಚಿಗೆ ನಡೆದ ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ.
ಪ್ರಕರಣ ಸಂಬಂಧ ಭದ್ರತಾ ಸಂಸ್ಥೆಗಳು ಶಿಸ್ತುಕ್ರಮ ಕೈಗೊಳ್ಳಲು ಆರಂಭಿಸಿವೆ. ಕೆಲವು ಕಾಶ್ಮೀರಿ ಪಂಡಿತರು ಮತ್ತು ಒಬ್ಬ ಸಿಖ್ ಶಿಕ್ಷಕ ಸೇರಿದಂತೆ ಸರಣಿ ಹತ್ಯೆಗಳನ್ನು ನಡೆಸಿದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಉಗ್ರರ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ.
‘ಶಂಕಿತ ಪಟ್ಟಿಯಲ್ಲಿರುವ ಜಮ್ಮು–ಕಾಶ್ಮೀರದ ಜಮಾತ್–ಇಸ್ಲಾಮಿ, ತೆಹ್ರೀಕ್–ಇ–ಹುರಿಯತ್ ಉಗ್ರ ಸಂಘಟನೆಯ ಸದಸ್ಯರು ಮತ್ತು ದಾಳಿಕೋರರನ್ನು ಬಂಧಿಸಲಾಗಿದೆ. ತನಿಖೆಗೆ ಅಡಚಣೆ ಉಂಟುಮಾಡುವ ದಾಳಿಗಳನ್ನು ತಡೆಯಲು ಈ ಬಂಧನ ನಡೆಸಲಾಗಿದೆ’ ಎಂದು ಮೂಲಗಳು ಹೇಳಿವೆ.
‘ಸುಮಾರು 70 ಜನರನ್ನು ಶ್ರೀನಗರದಲ್ಲಿ ಬಂಧಿಸಲಾಗಿದೆ. ಅಲ್ಲಿ ಹೆಚ್ಚು ನಾಗರಿಕ ಹತ್ಯೆ ಪ್ರಕರಣಗಳು ವರದಿಯಾಗಿವೆ. ಟಿಆರ್‌ಎಫ್ ಮುಖ್ಯಸ್ಥ ಅಬ್ಬಾಸ್ ಶೇಖ್ ನಗರದಲ್ಲಿ ಹಲವು ಹತ್ಯೆ ನಡೆಸಿದ್ದ. ಈತ ಕಳೆದ ತಿಂಗಳು ಶ್ರೀನಗರದ ಅಲೌಚಿಬಾಗ್ ಪ್ರದೇಶದಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿದ್ದ’ ಎಂದೂ ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ- ಶ್ರೀನಗರ: 16 ಸ್ಥಳಗಳಲ್ಲಿ ಎನ್ಐಎ ದಾಳಿ
ಪಾಕಿಸ್ತಾನ ಮೂಲದ ಲಷ್ಕರ್–ಎ–ತೊಯಬಾದ ಒಂದು ಭಾಗವಾಗಿರುವ ಟಿಆರ್‌ಎಫ್ ನಗರದಲ್ಲಿ ನಡೆದ ಹೆಚ್ಚಿನ ದಾಳಿಗಳ ಹೊಣೆ ಹೊತ್ತಿದೆ ಎಂದು ಪೊಲೀಸರು ಹೇಳಿದರು.
ಶ್ರೀನಗರ: ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳ ಸಂಪರ್ಕ ಹೊಂದಿದ ಆರೋಪದಲ್ಲಿ 400ಕ್ಕೂ ಹೆಚ್ಚು ಶಂಕಿತರನ್ನು ಭದ್ರತಾ ಪಡೆಗಳು ಬಂಧಿಸಿರುವುದಾಗಿ ಮೂಲಗಳು ತಿಳಿಸಿವೆ. ಶ್ರೀನಗರದಲ್ಲಿ ಇತ್ತೀಚಿಗೆ ನಡೆದ ಅಲ್ಪಸಂಖ್ಯಾತ ಸಮುದಾಯದ ಸದಸ್ಯರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕ್ರಮ ಕೈಗೊಳ್ಳಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.