ADVERTISEMENT

ಮುಂದ್ರಾ ಬಂದರಿನಿಂದ ಮಾದಕವಸ್ತು ತುಂಬಿದ ಕಂಟೈನರ್‌ ವಶ

​ಪ್ರಜಾವಾಣಿ ವಾರ್ತೆ
Published 20 ಜನವರಿ 2022, 14:11 IST
Last Updated 20 ಜನವರಿ 2022, 14:11 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಅಹಮದಾಬಾದ್‌: ಗುಜರಾತ್‌ನ ಕಛ್‌ ಜಿಲ್ಲೆಯ ಮುಂದ್ರಾ ಬಂದರಿನಿಂದ ಮಾದಕ ವಸ್ತು ತುಂಬಿದ ಕಂಟೈನರ್ ವಶಪಡಿಸಿಕೊಳ್ಳಲಾಗಿದೆ ಎಂದು ದೆಹಲಿಯ ಮಾದಕವಸ್ತು ನಿಗ್ರಹ ಸಂಸ್ಥೆ (ಎನ್‌ಸಿಬಿ) ಹೇಳಿದೆ. ಪಂಜಾಬ್‌ಗೆ ಕಳ್ಳಸಾಗಣೆ ಮಾಡಲು ಕೆನಡಾದಿಂದ ಈ ಮಾದಕವಸ್ತುವನ್ನು ತರಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಪಂಜಾಬ್‌ನ ಕೈಗಾರಿಕಾ ಸಂಸ್ಥೆಯೊಂದು ಕೆನಡಾದ ಒಂಟಾರಿಯೊದ ಅಮರ್‌ಜೀತ್‌ ಎಂಬಾತನಿಂದ ಮಾದಕವಸ್ತುವನ್ನು ಆಮದು ಮಾಡಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಇದೇ ಬಂದರಿನಿಂದ ರೆವಿನ್ಯೂ ಗುಪ್ತಚರ ನಿರ್ದೇಶನಾಲಯವು (ಡಿಆರ್‌ಐ) 3,000 ಕೆ.ಜಿಯಷ್ಟು ಹೆರಾಯಿನ್ ಮಾದಕವಸ್ತುವನ್ನು ವಶಪಡಿಸಿಕೊಂಡಿತ್ತು.

ADVERTISEMENT
ಸಾರಾಂಶ

ಗುಜರಾತ್‌ನ ಕಛ್‌ ಜಿಲ್ಲೆಯ ಮುಂದ್ರಾ ಬಂದರಿನಿಂದ ಮಾದಕ ವಸ್ತು ತುಂಬಿದ ಕಂಟೈನರ್ ವಶಪಡಿಸಿಕೊಳ್ಳಲಾಗಿದೆ ಎಂದು ದೆಹಲಿಯ ಮಾದಕವಸ್ತು ನಿಗ್ರಹ ಸಂಸ್ಥೆ (ಎನ್‌ಸಿಬಿ) ಹೇಳಿದೆ. ಪಂಜಾಬ್‌ಗೆ ಕಳ್ಳಸಾಗಣೆ ಮಾಡಲು ಕೆನಡಾದಿಂದ ಈ ಮಾದಕವಸ್ತುವನ್ನು ತರಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.